ಪಿಎಫ್ಐ ಸಂಘಟನೆ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾ ; ನಿಷೇಧ ನಿರ್ಣಯ ಎತ್ತಿಹಿಡಿದ ಹೈಕೋರ್ಟ್ 

30-11-22 04:52 pm       Bangalore Correspondent   ಕರ್ನಾಟಕ

ಪಿಎಫ್‍ಐ ಸಂಘಟನೆ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ಪಿಎಫ್‍ಐ ನಿಷೇಧ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಬೆಂಗಳೂರು, ನ.30: ಪಿಎಫ್‍ಐ ಸಂಘಟನೆ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ಪಿಎಫ್‍ಐ ನಿಷೇಧ ನಿರ್ಧಾರವನ್ನು ಎತ್ತಿ ಹಿಡಿದಿದೆ.

ನಾಸಿರ್ ಪಾಷಾ ಎನ್ನುವವರು ಪಿಎಫ್‍ಐ ಸಂಘಟನೆ ನಿಷೇಧವನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ರಿಟ್ ಅರ್ಜಿಯನ್ನ ಸಲ್ಲಿಸಿದ್ದರು. ವಿಚಾರಣೆಗೆ ಪರಿಗಣಿಸದೆ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ್ದು, ಪಿಎಫ್‍ಐ ಸಂಘಟನೆ ಬ್ಯಾನ್'ನ್ನ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

The Karnataka High Court on Wednesday upheld a ban on Popular Front of India (PFI) and its affiliates after dismissing a plea challenging the Centre's notification on the ban. The PFI leader from the state had approached the HC challenging the Centre's decision. Petitioner Nasir Pasha's petition was dismissed by a single judge bench of Justice M Nagaprasanna.