ಮಂಜೇಶ್ವರ ; ವೇಗದೂತ ಕೆಎಸ್ಸಾರ್ಟಿಸಿ ಬಸ್ ಪಲ್ಟಿ, 20ಕ್ಕೂ ಹೆಚ್ಚು ಮಂದಿಗೆ ಗಾಯ 

01-12-22 07:37 pm       HK News Desk   ಕರ್ನಾಟಕ

ಮಂಗಳೂರಿನಿಂದ ಕಾಸರಗೋಡು ತೆರಳುತ್ತಿದ್ದ ಕೇರಳ ಕೆಎಸ್ಸಾರ್ಟಿಸಿ ಮಲಬಾರ್ ಎಕ್ಸ್‌ಪ್ರೆಸ್‌ ಬಸ್ ಮಂಜೇಶ್ವರದಲ್ಲಿ ಹೆದ್ದಾರಿಯ ಬದಿಯ ಹೊಂಡಕ್ಕೆ ಪಲ್ಟಿಯಾಗಿ ಬಿದ್ದಿದೆ. 

ಮಂಜೇಶ್ವರ, ಡಿ.1: ಮಂಗಳೂರಿನಿಂದ ಕಾಸರಗೋಡು ತೆರಳುತ್ತಿದ್ದ ಕೇರಳ ಕೆಎಸ್ಸಾರ್ಟಿಸಿ ಮಲಬಾರ್ ಎಕ್ಸ್‌ಪ್ರೆಸ್‌ ಬಸ್ ಮಂಜೇಶ್ವರದಲ್ಲಿ ಹೆದ್ದಾರಿಯ ಬದಿಯ ಹೊಂಡಕ್ಕೆ ಪಲ್ಟಿಯಾಗಿ ಬಿದ್ದಿದೆ. 

ಮಂಜೇಶ್ವರದ ಪೊಸೋಟಿನಲ್ಲಿ ಘಟನೆ ನಡೆದಿದ್ದು ಬಸ್ಸಿನ ಆ್ಯಕ್ಸಿಲ್ ತುಂಡಾಗಿ ಹೆದ್ದಾರಿ ಬದಿಗೆ ಉರುಳಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಬಸ್ಸಿನಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದುದರಿಂದ ದೊಡ್ಡ ಅಪಾಯ ಆಗಿಲ್ಲ. ಸ್ಥಳೀಯರು ಕೂಡಲೇ ಬಸ್ಸಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ಕೇರಳದಲ್ಲಿ ಹೆದ್ದಾರಿ ಕೆಲಸ ಆಗುತ್ತಿದ್ದು ಅದರ ನಡುವೆ ಕೆಎಸ್ಸಾರ್ಟಿಸಿ ಬಸ್ಸುಗಳು ವೇಗದೂತನ ರೀತಿ ಧಾವಿಸುತ್ತವೆ. ಅತಿ ವೇಗದಿಂದಾಗಿಯೇ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

Ksrtc bus drowned in manjeshwar 20 more injured.