ರಾಮ, ಕೃಷ್ಣ ಇತಿಹಾಸ ಪುರುಷರಲ್ಲ, ಕಾದಂಬರಿ ಪಾತ್ರಧಾರಿಗಳು ; ವಿವಾದ ಸೃಷ್ಟಿಸಿದ ನಿವೃತ್ತ ನ್ಯಾಯಾಧೀಶ 

02-12-22 12:46 pm       HK News Desk   ಕರ್ನಾಟಕ

ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಾಪುರ, ಡಿ.2 : ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ 'ಸಂವಿಧಾನ ಆಶಯ ಈಡೇರಿದೆಯೇ?' ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಸಂತ ಮುಳಸಾವಳಗಿ, ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ. ಅವರು ಕೇವಲ ಕಾದಂಬರಿ ಪಾತ್ರಧಾರಿಗಳು. ಅಶೋಕ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ಪ್ರತಿಪಾದಿಸಿದರು.

ಅಕ್ಬರ್ ಹೆಂಡತಿ ಹಿಂದು. ಆಕೆ ಧರ್ಮಾಂತರ ಆಗಿರಲಿಲ್ಲ. ಆಕೆ ಹಿಂದೂ, ಅವ ಮುಸ್ಲಿಂ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಅಂತೀರಲ್ಲ, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ. ಅವರು ಹಿಂದೂಗಳನ್ನ ವಿರೋಧ ಮಾಡಿದ್ರು ಅಂದ್ರೆ ಒಬ್ಬ ಹಿಂದೂ ಭಾರತದಲ್ಲಿ ಇರುತ್ತಿರಲಿಲ್ಲ. ಎಲ್ಲರನ್ನೂ ಕೊಲ್ಲಬಹುದಿತ್ತು ಅವರು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು? ಎಂದು ವಸಂತ ಮುಳಸಾವಳಗಿ ಪ್ರಶ್ನಿಸಿದ್ದಾರೆ.

Sri Rama and Sri Krishna are not historical figures. They are just fictional characters. Retired District Judge Vasant Mulasavalagi said that Emperor Ashoka was a true historical figure . He spoke at the conference 'Has the wish of the constitution been fulfilled' organized by the National Friendship Forum and other organizations yesterday (D1) at Kandagal Hanumantaraya Theater in the city , he said that even though Akbar's wife was a Hindu.