ಗೋಹತ್ಯೆ ನಿಷೇಧ ಕಾಯ್ದೆಯಿಂದ ಬೊಕ್ಕಸಕ್ಕೆ 5280 ಕೋಟಿ ನಷ್ಟ ; ಸಂಕಷ್ಟದ ಬಗ್ಗೆ ಹಣಕಾಸು ಇಲಾಖೆ ಪತ್ರ ತೆರೆದಿಟ್ಟ ಪ್ರಿಯಾಂಕ ಖರ್ಗೆ

02-12-22 10:29 pm       Bangalore Correspondent   ಕರ್ನಾಟಕ

ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ 5280 ಕೋಟಿ ರೂ. ನಷ್ಟ ಆಗಿದೆ. ಇದರಿಂದ ರಾಜ್ಯವು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬೆಂಗಳೂರು, ಡಿ.2: ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ 5280 ಕೋಟಿ ರೂ. ನಷ್ಟ ಆಗಿದೆ. ಇದರಿಂದ ರಾಜ್ಯವು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬಿಜೆಪಿ ಸರಕಾರವು ಕ್ರಾಂತಿಕಾರಕ ಹೆಸರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ಕೊಡದೆ ಜಾರಿಗೊಳಿಸಿತ್ತು. ಆದರೆ ಗೋಹತ್ಯೆ ನಿಷೇಧ ಕಾರಣದಿಂದಾಗಿ ಅತಿ ಹೆಚ್ಚು ಆರ್ಥಿಕ ನಷ್ಟ ಉಂಟಾಗಿದೆ. ಈ ಬಗ್ಗೆ ಹಣಕಾಸು ಇಲಾಖೆಯ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದು ಮನವರಿಕೆಯನ್ನು ಮಾಡಿದ್ದರು. ಆದರೆ ಕೇಶಕ ಕೃಪಾದವರನ್ನು ಸಂತೋಷ ಪಡಿಸುವುದಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು.

ಗೋಹತ್ಯೆಗೆ ಕಡಿವಾಣ ಹಾಕಿರುವುದರಿಂದ ಚರ್ಮೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಜಗತ್ತಿನ ಒಟ್ಟು ಬೇಡಿಕೆಯ 13 ಶೇಕಡಾ ಚರ್ಮ ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿತ್ತು. ಕೋವಿಡ್ ಗೂ ಮುನ್ನ ಭಾರತದ ಚರ್ಮೋದ್ಯಮವು 5.5 ಅಮೆರಿಕನ್ ಡಾಲರ್ ಮೌಲ್ಯವನ್ನು ಹೊಂದಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ರಾಜ್ಯದ ಚರ್ಮ ಉತ್ಪನ್ನ ರಫ್ತು 2016-17ರಲ್ಲಿ 521 ಕೋಟಿ ಇದ್ದರೆ, 2021ರಲ್ಲಿ 161 ಕೋಟಿಗೆ ಕುಸಿದಿದೆ. ಈ ಕೆಲಸದಲ್ಲಿ ತೊಡಗಿಸಿಕೊಂಡ 3.5 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು, ಇವುಗಳಲ್ಲಿ ಬಹುತೇಕ ಬಂದ್ ಆಗುವ ಹಂತಕ್ಕೆ ಬಂದಿವೆ ಎಂದು ಉಲ್ಲೇಖ ಮಾಡಿದ್ದಾರೆ.

ಗೋಹತ್ಯೆ ನಿಷೇಧ ಕಾರಣದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ ಎಂದು ಹಣಕಾಸು ಇಲಾಖೆಯಿಂದ ಬರೆದಿರುವ ಪತ್ರವನ್ನು ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದು, ರಾಜ್ಯ ಸರಕಾರಕ್ಕೆ ಟಾಂಗ್ ನೀಡಿದ್ದಾರೆ. ಬಿಜೆಪಿ ಸರಕಾರದ ಕ್ರಾಂತಿಕಾರಕ ನಿರ್ಧಾರದಿಂದ ಯಾವ ರೀತಿಯ ಸಂಕಷ್ಟ ಆಗಿದೆ ಎನ್ನುವುದನ್ನು ನೋಡಿ ಎಂದು ಪತ್ರದ ಜೊತೆಗೆ ಆರ್ಥಿಕ ನಷ್ಟದ ಲೆಕ್ಕವನ್ನು ಹೇಳಿದ್ದಾರೆ.

Former Karnataka minister Priyank Kharge on Thursday alleged that the state is facing a financial burden of ₹5,280 crore since the Cattle Slaughter Ban Act came to the fore.