ರೌಡಿಗಳ ರಾಜ್ಯ ಕಟ್ಟಲು ಹೊರಟಿದ್ದೀರಾ ಬೊಮ್ಮಾಯಿ ಅವರೇ? ಬಿಜೆಪಿಗೆ ರೌಡಿಗಳ ಸೇರ್ಪಡೆಗೆ ಕಾಂಗ್ರೆಸ್ ಲೇವಡಿ  

03-12-22 06:38 pm       Bangalore Correspondent   ಕರ್ನಾಟಕ

ಬಿಜೆಪಿ ನಾಯಕರು ರೌಡಿ ಶೀಟರ್ ಗಳೊಂದಿಗೆ ಕಾಣಿಸಿಕೊಂಡಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಅಲ್ಲದೆ, ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರೌಡಿ ರಾಜ್ಯ ಕಟ್ಟಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದೆ.

ಬೆಂಗಳೂರು, ಡಿ.3: ಬಿಜೆಪಿ ನಾಯಕರು ರೌಡಿ ಶೀಟರ್ ಗಳೊಂದಿಗೆ ಕಾಣಿಸಿಕೊಂಡಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಅಲ್ಲದೆ, ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರೌಡಿ ರಾಜ್ಯ ಕಟ್ಟಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದೆ.

ರೌಡಿಗಳಾದ ಸೈಲಂಟ್ ಸುನೀಲ, ಬೆತ್ತನಗೆರೆ ಶಂಕರ, ಫೈಟರ್ ರವಿ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು, ಇನ್ನೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ಮಾಡುತ್ತಿದೆ. ಸಂಸದ ಪ್ರತಾಪಸಿಂಹ ಅವರು ಬೆತ್ತನಗೆರೆ ಶಂಕರ ಎಂಬ ರೌಡಿಯನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದೆ.

Karnataka CM Basavaraj Bommai finally allocates cabinet portfolios - The  Economic Times

ಮುಖ್ಯಮಂತ್ರಿ ಬೊಮ್ಮಾಯಿ ಅವರೇ ರೌಡಿ ರಾಜ್ಯ ಕಟ್ಟಲು ಹೊರಟಿದ್ದೀರಾ, ಇದೇನಾ ನಿಮ್ಮ ಸಂಸ್ಕೃತಿ ಎಂದು ಪ್ರಶ್ನೆ ಮಾಡಿದೆ. ಸಿಎಂ ಬೊಮ್ಮಾಯಿಯವರು ದಮ್ಮು ತಾಕತ್ತು ಇದ್ರೆ ಬನ್ನಿ ಎಂದು ರೌಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌಡಿಸಂ ಇದೆ ಎನ್ನುವುದು ಬೆಳಕಿಗೆ ಬರುತ್ತಿದೆ. ಬೊಮ್ಮಾಯಿ ಅವರೇ ರೌಡಿ ಮೋರ್ಚಾ ಕಟ್ಟಿಕೊಂಡು ಸವಾಲು ಹಾಕಿದ್ದೀರಾ.. ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಸಿಎಂ ಬೊಮ್ಮಾಯಿಯವರು ರೌಡಿಗಳ ಪಾಲಿಗೆ ಮಹಾಗುರು ಎಂಬಂತೆ ಆಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಅಲ್ಲದೆ, ಸಂಸದ ಪ್ರತಾಪಸಿಂಹ ರೌಡಿ ಬೆತ್ತನಗೆರೆ ಶಂಕರನಿಗೆ ಪಕ್ಷ ಬಾವುಟ ನೀಡಿ ಬರಮಾಡಿಕೊಳ್ಳುವ ಫೋಟೋ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ರೌಡಿ ಬೆತ್ತನಗೆರೆ ಶಂಕರ, ತನ್ನ ಹೆಸರನ್ನು ಬೆತ್ತನಗೆರೆ ಶಂಕರೇ ಗೌಡ ಎಂದು ಬದಲಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ. ಬೆಂಗಳೂರು, ಮೈಸೂರು ಭಾಗದಲ್ಲಿ ನಟೋರಿಯಸ್ ರೌಡಿಯಾಗಿ ಕಾಣಿಸಿಕೊಂಡಿದ್ದ ಶಂಕರನ ವಿರುದ್ಧ ಹಲವಾರು ಠಾಣೆಗಳಲ್ಲಿ ಕೇಸುಗಳಿವೆ. ಇದೇ ವಿಚಾರ ಮುಂದಿಟ್ಟು ಕಾಂಗ್ರೆಸ್, ಬಿಜೆಪಿಯನ್ನು ಅಡ್ಡಾದಿಡ್ಡಿ ಟೀಕಿಸಿದೆ.

Congress strongly condemned BJP leaders appearing with rowdy sheeters.  Silent Sunil, fighter Ravi and Bettanagere Shankar, who have tweeted series of tweets about joining the BJP, have attacked the state government. BJP leaders who are saying that they will not include rowdies in the BJP, on the other hand, are running a campaign to join the party of rowdies. The fact that MP Pratapa Sinha brought in a rowdy sheeter named Bettanagere Shankar with the party flag is a proof of this,'' said the Congress.