ಬ್ರೇಕಿಂಗ್ ನ್ಯೂಸ್
07-12-22 08:53 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.7: ನಮ್ಮ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್‌ಗಳನ್ನು ಪಡೆಯಲು, ಮೆಟ್ರೋ ಸ್ಟೇಷನ್ ಅನ್ನೇ ಅವಲಂಬಿಸಬೇಕಿಲ್ಲ. ಮೊಬೈಲ್ ಮೂಲಕವೇ ಸುಲಭವಾಗಿ ಮೆಟ್ರೋ ಟಿಕೆಟ್ ಖರೀದಿಸಬಹುದು. ಇದಕ್ಕೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ಪೇಟಿಎಂ ಅಥವಾ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಇದ್ದರೆ ಸಾಕು.
ಈ ಅಪ್ಲಿಕೇಶನ್‌ಗಳ ಮೂಲಕ, ಪ್ರಯಾಣಿಕರು ಮೆಟ್ರೋ ಟಿಕೆಟ್ ಖರೀದಿಸಲು ನಮ್ಮ ಮೆಟ್ರೋ ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ಸುಲಭವಾಗುವಂತೆ ಮತ್ತು ಹೆಚ್ಚು ಅನುಕೂಲ ಕಲ್ಪಿಸುವ ಉದ್ದೇಶದಿಂದ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಾಳೆ(ಡಿಸೆಂಬರ್ 8)ಯಿಂದಲೇ ಜಾರಿಗೆ ಬರುವಂತೆ ಈ ನಿಯಮಗಳನ್ನು ಪರಿಚಯಿಸಿದೆ.
ನವೆಂಬರ್ 1ರಂದು BMRCL ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ಮೊಬೈಲ್ ಕ್ಯೂಆರ್ ಕೋಡ್ ಆಧರಿತ ಟಿಕೆಟಿಂಗ್ ವುವಸ್ಥೆಯನ್ನು ಪರಿಚಯಿಸಿತ್ತು. ಇದೇ ಮಾದರಿಯ ವ್ಯವಸ್ಥೆಯನ್ನು ಈಗ ಪೇಮೆಂಟ್ ಆಪ್ ಪೇಟಿಎಂನಲ್ಲೂ ಕಲ್ಪಿಸಲಾಗಿದೆ. ಈಗಾಗಲೇ ಇಂತಹ ವ್ಯವಸ್ಥೆ, ದೆಹಲಿ, ಹೈದರಾಬಾದ್ ಹಾಗೂ ಮುಂಬೈ ಮೆಟ್ರೋಗಳಲ್ಲಿ ಜಾರಿಗೆ ತರಲಾಗಿದೆ. ಇದೀಗ ನಮ್ಮ ಮೆಟ್ರೋದಲ್ಲೂ, ಮೊಬೈಲ್ ಮೂಲಕ ಕ್ಯೂ ಆರ್ ಕೋಡ್ ಆಧರಿತ ಟಿಕೆಟ್ ಪಡೆಯಬಹುದು.
Android ಅಥವಾ iOS ಮೊಬೈಲ್‌ಗಳನ್ನು ಹೊಂದಿರುವ ಪ್ರಯಾಣಿಕರು Paytm ಅಥವಾ ಯಾತ್ರಾ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಈ ಟಿಕೆಟ್ ಪಡೆಯಬಹುದು. ಆನ್‌ಲೈನ್ ಮೂಲಕ ಏಕಮುಖ ಪ್ರಯಾಣದ QR ಟಿಕೆಟ್‌ಗಳನ್ನು ಖರೀದಿಸಬಹುದು. ಪ್ರಯಾಣಿಕರು ತಾವು ಮೆಟ್ರೋ ಹತ್ತುತ್ತಿರುವ ಮತ್ತು ಗಮ್ಯಸ್ಥಾನದ ನಿಲ್ದಾಣವನ್ನು ನಮೂದಿಸಿ ನಂತರ ಮೊಬೈಲ್ QR ಟಿಕೆಟ್ ಪಡೆಯಬಹುದು.
ನಿಗದಿತ ಟಿಕೆಟ್ ದರವನ್ನು ಪಾವತಿಸಿದ ತಕ್ಷಣ ನಿಮ್ಮ ಅಪ್ಲಿಕೇಶನ್‌ನಲ್ಲಿ ಕ್ಯೂ ಆರ್ ಕೋಡ್ ಟಿಕೆಟ್ ಕಾಣಿಸಿಕೊಳ್ಳುತ್ತದೆ. ಆ ಟಿಕೆಟ್ ಅನ್ನು ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳ ಕ್ಯೂಆರ್ ರೀಡರ್‌ಗಳ ಮುಂದೆ ಫ್ಲ್ಯಾಷ್ ಮಾಡಬೇಕು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಖರೀದಿಸಿದ ಮೊಬೈಲ್ QR ಟಿಕೆಟ್‌ಗಳು ಆಯಾ ದಿನದ ಮೆಟ್ರೋ ಸೇವೆಯ ಅಂತ್ಯದವರೆಗೆ ಮಾನ್ಯವಾಗಿರುತ್ತವೆ. ಒಂದು ವೇಳೆ ಪ್ರಯಾಣಿಕರು ಟಿಕೆಟ್ ಖರೀದಿಸಿದ ಬಳಿಕ ಪ್ರಯಾಣ ಮಾಡದಿದ್ದರೆ, ಅವರು ಅದೇ ದಿನದಂದು ಟಿಕೆಟ್ ರದ್ದು ಮಾಡಬಹುದು. ಆ ಬಳಿಕ ಮೊತ್ತ ಮರುಪಾವತಿಸಲಾಗುತ್ತದೆ.
ನೀವು ಖರೀದಿಸುವ QR ಟಿಕೆಟ್ ದರದ ಮೇಲೆ ಐದು ಶೇಕಡಾ ರಿಯಾಯಿತಿಯನ್ನು ಕೂಡಾ ನಮ್ಮ ಮೆಟ್ರೋ ಘೋಷಿಸಿದೆ. “ಡಿಜಿಟಲೀಕರಣವನ್ನು ಉತ್ತೇಜಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಅನುಕೂಲಕರವಾಗಿ ಪ್ರಯಾಣಿಸಲು, ಎಲ್ಲಾ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಸೌಲಭ್ಯವನ್ನು ಬಳಸಿಕೊಳ್ಳಲು ವಿನಂತಿಸಲಾಗಿದೆ,” ಎಂದು ನಮ್ಮ ಮೆಟ್ರೋದ ವಕ್ತಾರ ಶ್ರೀವಾಸ್ ರಾಜಗೋಪಾಲನ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಮ್ಮ ಮೆಟ್ರೋದಲ್ಲಿ ವಾಟ್ಸಾಪ್ (WhatsApp) ಚಾಟ್‌ಬಾಟ್ ಆಧಾರಿತ QR ಟಿಕೆಟಿಂಗ್ ಸೇವೆಯನ್ನು ಪರಿಚಯಿಸಲಾಗಿತ್ತು. ವಾಟ್ಸಾಪ್ ಮೂಲಕವೇ ಯುಪಿಐ ಪಾವತಿ ಪಾವತಿ ಮಾಡಿ, ಟಿಕೆಟ್ ಖರೀದಿಸಲು ಅನುಕೂಲ ಕಲ್ಪಿಸಲಾಗಿತ್ತು. ಇಷ್ಟೇ ಅಲ್ಲದೆ, ಮೆಟ್ರೋ ಪ್ರಯಾಣದ ಪಾಸ್ ಅನ್ನು WhatsApp ಮೂಲಕವೇ ರೀಚಾರ್ಜ್ ಮಾಡಲು ಅನುಮತಿ ನೀಡಲಾಗಿದೆ. ವಾಟ್ಸಾಪ್ ಮೂಲಕವೇ ಎಂಡ್ ಟು ಎಂಡ್ ಕ್ಯೂ ಆರ್ ಟಿಕೆಟಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ವಿಶ್ವದ ಮೊದಲ ಸಾರಿಗೆ ಸೇವೆ ಎಂಬ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಿದೆ.
Bengaluru metro users can now buy tickets via their Paytm and Yaatra apps, the Bangalore Metro Rail Corporation Limited (BMRCL) said Wednesday. This feature will be available starting Thursday. "In addition to providing mobile QR ticketing on Namma Metro mobile app for convenience of commuters, BMRCL is extending mobile QR code ticket generation through Paytm and Yatra mobile applications with effect from 8 December," BMRCL said.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am