ಗುಜರಾತ್ ಗೆಲುವಿಗಾಗಿ ಆಪ್ ಗೆ ಬಿಜೆಪಿ ಫಂಡ್ ಮಾಡಿದೆ, ಕಾಂಗ್ರೆಸ್ ಮತ ವಿಭಜನೆ ಮಾಡಿದ್ದಾರೆ ; ಸಿದ್ದರಾಮಯ್ಯ 

08-12-22 07:47 pm       HK News Desk   ಕರ್ನಾಟಕ

ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿಯವರೇ ಫಂಡ್ ಮಾಡಿದ್ದಾರೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಪ್ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.‌

ಮೈಸೂರು, ಡಿ.8 : ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿಯವರೇ ಫಂಡ್ ಮಾಡಿದ್ದಾರೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಪ್ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.‌

ಗುಜರಾತ್ ನಲ್ಲಿ ಬಿಜೆಪಿ ಬರುತ್ತೆ ಅಂತ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಲೀಡ್ ಬರುವುದಕ್ಕೆ ಆಪ್ ಸ್ಪರ್ಧೆ ಕಾರಣ. ಆಪ್ ಪಡೆದ ಮತಗಳೆಲ್ಲಾ ಕಾಂಗ್ರೆಸ್ ನದ್ದು. ಆದರೆ ಒಂದು ರಾಜ್ಯದ ಚುನಾವಣಾ ಫಲಿತಾಂಶದ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸಲ್ಲ. ಅಲ್ಲಿನ ರಿಸಲ್ಟ್ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ. 

ಇಲ್ಲಿಯ ಬಿಜೆಪಿ ಸರಕಾರ ಅತಿ ಭ್ರಷ್ಟ ಸರಕಾರ. ಕಾಂಗ್ರೆಸ್  ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ. ಕರ್ನಾಟಕ ಬಿಜೆಪಿಗೆ ತಾವು ಸೋಲುತ್ತೇವೆ ಎಂಬುದು ಗೊತ್ತಿದೆ. ಹಾಗಾಗಿ ಜೆಡಿಎಸ್ ಜೊತೆ ಸೇರಿ ಇಲ್ಲಿಯೂ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯಲ್ಲ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಗುಜರಾತ್ ನಲ್ಲಿ 40% ಸರಕಾರ ಇತ್ತು ಅಂತಾ ಯಾರಾದರೂ ಹೇಳಿದ್ರಾ? ಕರ್ನಾಟಕದ್ದು ಹೇಳಿದ್ರಾ? ಅಷ್ಟು ದುಡ್ಡು ಖರ್ಚು ಮಾಡಿದರೂ ಆಪ್ 6 ಸ್ಥಾನ ಪಡೆದಿದೆ. ಮತ ವಿಭಜನೆ ಆಗಿದ್ದು  ಅವರಿಂದ ಅಷ್ಟೆ. 

PM Modi may hold meetings with Russia and Iran on margins of SCO summit |  Latest News India - Hindustan Times

ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತೆ. ನಾವು ಏನೂ ತಂತ್ರಗಾರಿಕೆ ಮಾಡುವುದೇ ಬೇಡ ಎಂದು ಹೇಳಿದ ಸಿದ್ದರಾಮಯ್ಯ,  ಮೋದಿ ಹವಾ ಎಲ್ಲಿಯೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲೇ ಯಾಕೆ ಸೋಲ್ತಿದ್ದರು. ಎಲ್ಲಿ ಹೋಯ್ತು ಮೋದಿ ಹವಾ ಎಂದು ಕೇಳಿದರು. 

ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಳಿದ್ದಕ್ಕೆ, ಈ ಬಗ್ಗೆ ಮಹಾರಾಷ್ಟ್ರದವರಿಗೆ ಪ್ರಧಾನಿಯಿಂದ ಬುದ್ದಿ ಹೇಳಿಸುವ ಧೈರ್ಯವೂ ಕರ್ನಾಟಕ ಬಿಜೆಪಿಗೆ ಇಲ್ಲ. ಕರ್ನಾಟಕ ಬಿಜೆಪಿಯವರು ಹೇಡಿಗಳು. ಎರಡು ಕಡೆ ಬಿಜೆಪಿ ಸರಕಾರ ಇದ್ದರೂ ಗಡಿಯಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ.?
ಇಬ್ಬರು ಮಾತಾಡಿಸಿಕೊಂಡೇ ಪುಂಡಾಟಿಕೆ ನಡೆಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗುವಂತೆ ಮಾಡುತ್ತಿದ್ದಾರಾ? ಗಡಿ ವಿವಾದದ ಬಗ್ಗೆ ಒಳ್ಳೆ ಲಾಯರ್ ಇಟ್ಟು ವಾದ ಮಾಡಿಸಬೇಕು. ಸಿಎಂ, ಪ್ರಧಾನಿಗಳ ಬಳಿಗೆ ಹೋಗಿ ನೈಜ ಸ್ಥಿತಿ ವಿವರಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ನಮ್ಮದ್ದು. ಒಂದಿಂಚೂ ಯಾರಿಗೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು ಸಿದ್ದರಾಮಯ್ಯ.

Former Karnataka Chief Minister Siddaramaiah on Thursday alleged the BJP funded the Aam Aadmi Party (AAP) in Gujarat to divide the Congress votes. As the saffron party is set to return to power for the seventh time in a row, the Congress stalwart in Karnataka said the fledgling party splurged huge money in the Gujarat elections.