ಹಾಸನದ ಶಾಸಕರೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ, ಸಿಎಲ್ ಪಿ ನಾಯಕರು ಡಿಕೆಶಿ ಸಂಪರ್ಕದಲ್ಲಿ ; ಧ್ರುವನಾರಾಯಣ್ ಹೊಸ ಬಾಂಬ್ 

09-12-22 07:39 pm       HK News Desk   ಕರ್ನಾಟಕ

ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಅವರು ಸಿಎಲ್‌ಪಿ ನಾಯಕರಾಗಿದ್ದು  ಕೆಪಿಸಿಸಿ ಅಧ್ಯಕ್ಷರ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಹಾಸನ, ಡಿ.9 : ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಅವರು ಸಿಎಲ್‌ಪಿ ನಾಯಕರಾಗಿದ್ದು  ಕೆಪಿಸಿಸಿ ಅಧ್ಯಕ್ಷರ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಯಾರು ಬರುತ್ತಾರೆಂದು ಅವರಿಗೆ ಗೊತ್ತಿದೆ. ಯಾರು ಸಂಪರ್ಕದಲ್ಲಿದ್ದಾರೆ ಎಂಬುದು ನನ್ನ ಗಮನಕ್ಕೂ ಇದೆ. ಆದರೆ ಯಾರೆಂದು ಈಗಲೇ ಹೇಳುವುದಿಲ್ಲ ಎಂದವರು ಹೇಳಿದ್ದಾರೆ. 

Former MLA Vishwanath to document about Operation Kamala | Deccan Herald

Siddaramaiah demands judicial probe into alleged irregularities in COVID  management - The Economic Times

ED rejects DK Shivkumar's request for extending date of appearance |  Bengaluru - Hindustan Times

ಎಚ್.ವಿಶ್ವನಾಥ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆ ಇದೆ ಅವರಿಗೆ.‌ ಈಗ ಅವರ ಮನಸ್ಸು ಪರಿವರ್ತನೆ ಆಗಿದೆ.‌ ಹಾಗಾಗಿ ಮರಳಿ ಮನೆಗೆ ಬರಲಿಕ್ಕೆ ಸಿದ್ದರಾಗಿದ್ದಾರೆ.‌ ನನ್ನ ಹತ್ರ ಮಾತನಾಡಿದ್ದಾರೆ, ನಾನು ಮರಳಿ‌ ಮನೆಗೆ ಬನ್ನಿ ಎಂದು ಮನವಿ ಮಾಡಿದ್ದೇನೆ ಎಂದು ಧ್ರುವ ನಾರಾಯಣ್ ಹೇಳಿದ್ದಾರೆ. 

CT Ravi: Karnataka's Controversial Hindutva Man is Guiding BJP in Tamil Nadu

ತೇಜೋವಧೆ, ದಿಕ್ಕು ತಪ್ಪಿಸುವುದೇ ಕೆಲಸ 

ಕಾಂಗ್ರೆಸ್ ನಾಯಕರಿಗೆ ಪಾಕಿಸ್ತಾನದ ಹುಚ್ಚುನಾಯಿ ಕಚ್ಚಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಬಿಜೆಪಿಯವರು ಯಾವುದೇ ಭಾಷಣದಲ್ಲಿ ಅಭಿವೃದ್ಧಿ ಬಗ್ಗೆ ಹೇಳುವುದೇ ಇಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತೇಜೋವಧೆ ಮಾಡುವುದು ಬಿಟ್ಟರೆ ಬೇರೆ ಏನು ಅಭ್ಯಾಸವೇ ಇಲ್ಲ. ಬರೀ ಇಂತಹದ್ದೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡಿ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.‌ ಅವರಿಗೆ ಬೇರೆ ವಿಷಯಗಳೇ ಇಲ್ಲ.‌ ಚುನಾವಣೆ ಬಂದಾಗ ಪಾಕಿಸ್ತಾನ ಇನ್ನೊಂದು ಬರುತ್ತೆ.. ಬರೀ ಹಾನಿ ಮಾಡುವ ಕೆಲಸ ಮಾಡುತ್ತಾರೆ.‌

ಆಡಳಿತ ಪಕ್ಷದಲ್ಲಿದ್ದವರು ಇಂತಹ ಕಾರ್ಯಕ್ರಮ ಕೊಟ್ಟಿದ್ದೇವೆ ಅಂತ ಹೇಳಬೇಕು.‌ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ರು, 60 ಭರವಸೆ ಈಡೇರಿಲ್ಲ. ಯಾರಾದ್ರು ಪ್ರಶ್ನೆ ಮಾಡ್ತಾರಾ, ನಮ್ಮ ಸರ್ಕಾರ ಇದ್ದಾಗ 165 ಭರವಸೆ ಕೊಟ್ಟಿದ್ದು ಈಡೇರಿಸಿದ್ದೇವೆ. ಅದಕ್ಕಾಗಿ ಇವರು ಚುನಾವಣೆ ಬಂದಾಗ ಪಾಕಿಸ್ತಾನ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.‌ ಬಿಜೆಪಿ ಅವರದ್ದು ಎಲ್ಲದಕ್ಕೂ ಪಲಾಯನವಾದ ಎಂದು ಮೂದಲಿಸಿದರು.

Dhruvanarayan says Hassan MLA to join Congress very soon in touch with DK Shivakumar.