ಚಂಡಮಾರುತದಿಂದ ದಿಢೀರ್ ತಾಪಮಾನ ಕುಸಿತ ; ವೈರಸ್ ಸೋಂಕು ಹರಡುವ ಸಾಧ್ಯತೆ ಬಗ್ಗೆ ವೈದ್ಯರ ಎಚ್ಚರಿಕೆ 

11-12-22 10:42 pm       Bangalore Correspondent   ಕರ್ನಾಟಕ

ಚಂಡಮಾರುತದ ಪರಿಣಾಮ ದಿಢೀರ್ ತಾಪಮಾನದ ಕುಸಿತ ಮತ್ತು ವಾತಾವರಣದಲ್ಲಿ ತೇವಾಂಶದ ಹೆಚ್ಚಳ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಬಹುದು. ಉಸಿರು ಕಟ್ಟುವುದು, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.‌ 

ಬೆಂಗಳೂರು, ಡಿ.11 : ಚಂಡಮಾರುತದ ಪರಿಣಾಮ ದಿಢೀರ್ ತಾಪಮಾನದ ಕುಸಿತ ಮತ್ತು ವಾತಾವರಣದಲ್ಲಿ ತೇವಾಂಶದ ಹೆಚ್ಚಳ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಬಹುದು. ಉಸಿರು ಕಟ್ಟುವುದು, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.‌ 

ಮಾಂಡೋಸ್ ಚಂಡಮಾರುತದ ಕಾರಣ ಡಿಸೆಂಬರ್ 14ರ ವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮನೆಯಲ್ಲಿ ಕ್ರಾಸ್ ವೆಂಟಿಲೇಷನ್ ಮುಖ್ಯ, ಮನೆಯ ಎಲ್ಲಾ ಕಿಟಕಿಗಳನ್ನು ಮುಚ್ಚಿದಾಗ ಗಾಳಿಗೆ ಯಾವುದೇ ಮಾರ್ಗವಿರುವುದಿಲ್ಲ. ಯಾರಾದರೂ ಮನೆಯಲ್ಲಿ ಸೀನುತ್ತಿದ್ದರೆ, ಉಳಿದವರಿಗೂ ಕೂಡ ಸೋಂಕು ತಗುಲಿ, ಶೀತ, ಜ್ವರ ಮತ್ತಿತರೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ ಎಂದು ಮಕ್ಕಳ ತಜ್ಞ ಡಾ. ಎಚ್​ ಪರಮೇಶ್ ಅವರು ಡೆಕ್ಕನ್ ಹೆರಾಲ್ಡ್ ಗೆ ತಿಳಿಸಿದ್ದಾರೆ. 

ಕ್ರಾಸ್ ವೆಂಟಿಲೇಷನ್ ಕೊರತೆ ಕುಟುಂಬ ಸದಸ್ಯರಲ್ಲಿ ವೇಗವಾಗಿ ಸೋಂಕು ಹರಡಲು ಕಾರಣವಾಗುತ್ತದೆ. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ, ಮೇಲಾಗಿ ಹತ್ತಿ ಅಥವಾ ಕರವಸ್ತ್ರವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಳಪಡಿಸಲು ಹಣ್ಣುಗಳು, ತರಕಾರಿಗಳು ಬಹಳ ಮುಖ್ಯ. ಏಕೆಂದರೆ ಅವುಗಳು ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಶೀತ ವಾತಾವರಣದಲ್ಲಿ ಆವಿಯಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದು ಸೂಕ್ತ.  ವೈರಲ್​ ಜ್ವರ ಕಾಲಾನಂತರದಲ್ಲಿ ಹೆಚ್ಚುತ್ತಿದೆ, ಇದನ್ನು ಕಡಿಮೆ ಮಾಡಲು ಮನೆಯಲ್ಲಿಯೇ ತಯಾರಿಸಿದ ಆಹಾರಗಳ ಕಡೆ ಹೆಚ್ಚು ಗಮನಕೊಡಿ. ಫ್ರಿಜ್​ನಲ್ಲಿರಿಸಿರುವ ಆಹಾರವನ್ನು ಸೇವಿಸುವ ಮೊದಲು ಸ್ವಲ್ಪ ಹೊತ್ತು ಹೊರಗೆ ತೆಗೆದಿಡಿ, ಇದು ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೀನುವಾಗ ಅಥವಾ ಜ್ವರ ಇರುವವರಿಂದ ಸ್ವಲ್ಪ ದೂರವಿರಿ. ಆರ್ದ್ರ ವಾತಾವರಣದಲ್ಲಿ ಸುಲಭವಾಗಿ ಸೋಂಕು ಮತ್ತೊಬ್ಬರಿಗೆ ತಗುಲುತ್ತದೆ. ರೋಗಾಣುಗಳು ಹರಡುವುದನ್ನು ತಡೆಯಲು ಮಾಸ್ಕ್​ ಬಳಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

With the mercury hovering low and cyclonic weather prevailing, the city is under the grip of flu-like illnesses, including viral influenza and respiratory tract infections. This, even as the onslaught of dengue and other vector-borne diseases continues.