ಚಾರ್ಜ್ ಇಟ್ಟಿದ್ದ ಮೊಬೈಲ್ ಸ್ಫೋಟ ; ದಾವಣಗೆರೆಯ ಯುವಕ ಜರ್ಮನಿಯಲ್ಲಿ ಸಾವು 

16-12-22 02:29 pm       HK News Desk   ಕರ್ನಾಟಕ

ಚಾರ್ಜ್ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ದಾವಣಗೆರೆ ಮೂಲದ ಎಂಟೆಕ್ ವಿದ್ಯಾರ್ಥಿಯೊಬ್ಬ ಜರ್ಮನಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ದಾವಣಗೆರೆ, ಡಿ.16: ಚಾರ್ಜ್ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ದಾವಣಗೆರೆ ಮೂಲದ ಎಂಟೆಕ್ ವಿದ್ಯಾರ್ಥಿಯೊಬ್ಬ ಜರ್ಮನಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ದಾವಣಗೆರೆಯ ಸರಸ್ವತಿ ನಗರ ಬಡಾವಣೆಯ ನಿವಾಸಿಗಳಾದ ಶಿಕ್ಷಕ ದಂಪತಿ ಇಂದಿರಮ್ಮ ಮತ್ತು ಕೆ.ರೇವಪ್ಪ ಅವರ ಪುತ್ರ ಸಂತೋಷ್ ಕುಮಾರ್ (30) ಮೃತ ವಿದ್ಯಾರ್ಥಿ. ಉನ್ನತ ವ್ಯಾಸಂಗಕ್ಕೆಂದು ಜರ್ಮನಿಗೆ ತೆರಳಿದ್ದ ಸಂತೋಷ್ ಅಲ್ಲಿನ ಕೆಮ್ ನಿಟ್ಸ್ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ ವ್ಯಾಸಂಗ ನಡೆಸುತ್ತಿದ್ದರು.

ಜರ್ಮನಿಯ ಕೆಮ್ ನಿಟ್ಸ್ ನಗರದಲ್ಲಿ ಪಿಜಿಯಲ್ಲಿ ಇದ್ದುಕೊಂಡು ಓದುತ್ತಿದ್ದ ಸಂತೋಷ್ ಕುಮಾರ್ ನ.30ರಂದು ಮೃತಪಟ್ಟಿದ್ದಾರೆ. ತನ್ನ ಪಿಜಿಯಲ್ಲಿ ರಾತ್ರಿ ವೇಳೆ ಮೊಬೈಲನ್ನು ಚಾರ್ಜ್ ಇಟ್ಟು ನಿದ್ದೆ ಮಾಡಿದ್ದರು. ಈ ವೇಳೆ, ಮೊಬೈಲ್ ಸ್ಫೋಟಗೊಂಡಿದ್ದು ಶಾರ್ಟ್ ಸರ್ಕಿಟ್ ಉಂಟಾಗಿ ಹೊಗೆ ಹೊತ್ತಿಕೊಂಡಿತ್ತು. ಜರ್ಮನಿಯಲ್ಲಿ ತೀವ್ರ ಚಳಿ ಇರುವುದರಿಂದ ಕಿಟಕಿ, ಬಾಗಿಲು ಮುಚ್ಚಿ ನಿದ್ದೆ ಮಾಡುತ್ತಿದ್ದರು. ನಿದ್ದೆಯ ಸಂದರ್ಭದಲ್ಲಿ ಹೊಗೆ ಆವರಿಸಿಕೊಂಡು ಉಸಿರು ಕಟ್ಟಿ ಸಾವು ಸಂಭವಿಸಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾಗಿ ಸಂತೋಷ್ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ನ.30ರಂದು ರಾತ್ರಿ ಘಟನೆ ಸಂಭವಿಸಿದೆ. ಮರುದಿನ ಕರೆ ಸ್ವೀಕರಿಸದೇ ಇದ್ದುದರಿಂದ ಸ್ನೇಹಿತರ ಮೂಲಕ ಸಂಪರ್ಕಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಎಂಟೆಕ್ ಓದಿದ್ದ ಸಂತೋಷ್ ಕುಮಾರ್ ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದರು. ಆನಂತರ, ಉನ್ನತ ವ್ಯಾಸಂಗಕ್ಕೆಂದು 2017ರಲ್ಲಿ ಜರ್ಮನಿ ತೆರಳಿದ್ದರು. ಶಿಕ್ಷಕರಾಗಿರುವ ರೇವಪ್ಪ ದಂಪತಿಯ ಮೊದಲ ಮಗ ಶ್ರೀಧರ ಆರು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಎರಡನೇ ಮಗನನ್ನೂ ಕಳೆದುಕೊಂಡಿದ್ದಾರೆ. ಸಂತೋಷ್ ಕುಮಾರ್ ಮೃತದೇಹವನ್ನು ಹುಟ್ಟೂರಿಗೆ ತರಲು ಬಹಳಷ್ಟು ಪ್ರಯಾಸಪಡಬೇಕಾಯಿತು. ಸಂಸದ ಸಿದ್ದೇಶ್ವರ್ ಮೂಲಕ ಪ್ರಯತ್ನ ಪಟ್ಟು ಮೃತದೇಹ ಹುಟ್ಟೂರಿಗೆ ತರಲಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

An incident occurred recently in Germany in which a student of Saraswati Nagar barangay here died due to an electrical short circuit in the room as a result of the mobile phone equipment exploding. Residents like K. Revappa, A. Indiramma's son, Santoshkumar K.R., who was studying MS at Chemnitz University, Germany. (30) Deceased student. Santosh Kumar died on November 30 and the body reached the city on Thursday.