The government enhances the salary of Gram Panchyath staff,  presidents ane secretary.

">

ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ ಹೆಚ್ಚಳ ; ಅಧ್ಯಕ್ಷ, ಉಪಾಧ್ಯಕ್ಷರಿಗೆ ದುಪ್ಪಟ್ಟು 

18-12-22 06:24 pm       Bangalore Correspondent   ಕರ್ನಾಟಕ

ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಶುಭ ಸುದ್ದಿ ನೀಡಲಾಗಿದೆ. 

ಬೆಂಗಳೂರು, ಡಿ.18 : ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಶುಭ ಸುದ್ದಿ ನೀಡಲಾಗಿದೆ. 

ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನ ಹೊರಡಿಸಿದ್ದಾರೆ. ಅದರಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗೌರವ ಧನವನ್ನು ಡಬಲ್ ಮಾಡಲಾಗಿದೆ.  

ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರಿಗೆ ರೂ. 3,000, ಉಪಾಧ್ಯಕ್ಷರಿಗೆ ರೂ. 2,000 ಹಾಗೂ ಸದಸ್ಯರಿಗೆ ರೂ. 1000 ಮಾಸಿಕ ಗೌರವಧನವನ್ನು ನಿಗದಿಪಡಿಸಲಾಗಿತ್ತು. 

ಇದೀಗ ಗೌರವಧನವನ್ನು ಪರಿಷ್ಕರಿಸಲಾಗಿದ್ದು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ರೂ.6,000, ಉಪಾಧ್ಯಕ್ಷರಿಗೆ ರೂ.4,000 ಹಾಗೂ ಸದಸ್ಯರುಗಳಿಗೆ ರೂ.2,000 ಮಾಸಿಕ ಗೌರವಧನವನ್ನು ನಿಗದಿಗೊಳಿಸಿ ಆದೇಶಿಸಿದ್ದಾರೆ.

The government enhances the salary of Gram Panchyath staff,  presidents ane secretary.