ಬ್ರೇಕಿಂಗ್ ನ್ಯೂಸ್
18-12-22 10:00 pm HK News Desk ಕರ್ನಾಟಕ
ಮೈಸೂರು, ಡಿ.18: ಸಿದ್ದರಾಮಯ್ಯ ವಿರುದ್ಧ ಮಾತಿನ ಛೂಬಾಣ ಬಿಡುತ್ತಿರುವ ಬಿಜೆಪಿ ಮುಖಂಡ ಸಿಟಿ ರವಿ ಅವರ ಜಾತಕ ಬಿಚ್ಚಿಡಲು ಕಾಂಗ್ರೆಸ್ ಮುಂದಾಗಿದೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಕೆಪಿಸಿಸಿ ಕಾರ್ಯದರ್ಶಿ ಎಂ. ಲಕ್ಷ್ಮಣ್, ಸಾಕ್ಷ್ಯ ಸಮೇತ ಸಿಟಿ ರವಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿಟಿ ರವಿ ಬೆಂಗಳೂರು ಮತ್ತು ವಿದೇಶದಲ್ಲಿ 3 ಸಾವಿರ ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಲಕ್ಷ್ಮಣ್, ಸಿಟಿ ರವಿ ಒಬ್ಬ ರೌಡಿ ಶೀಟರ್ ಆಗಿದ್ದರು. ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಅವರ ಹೆಸರು ರೌಡಿಶೀಟರ್ ಪಟ್ಟಿಯಲ್ಲಿತ್ತು. ಅವರ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ. ತನ್ನ ಚುನಾವಣಾ ಅಫಿಡವಿಟ್ ನಲ್ಲಿಯೇ ದಾಖಲಾಗಿರುವ ಪ್ರಕರಣಗಳನ್ನು ನಮೂದಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೇರಿದಂತೆ ಅನೇಕ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವರೇ ತಮ್ಮ ವಿರುದ್ಧದ ಪ್ರಕರಣಗಳನ್ನು ನಮೂದಿಸಿರುವ ಹಿನ್ನೆಲೆಯಲ್ಲಿ ಸಿಟಿ ರವಿಯನ್ನು ಕ್ರಿಮಿನಲ್ 420 ರವಿ ಎಂದು ಹೇಳಬೇಕಾಗಿದೆ ಎಂದರು.
ಚಿಕ್ಕಮಗಳೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಸಿಟಿ ರವಿ, ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡ್ಕೊಂಡಿದ್ದಾರೆ. ಚಿಕ್ಕಮಗಳೂರಿನ 95 ಶೇಕಡಾ ಕಾಮಗಾರಿಗಳನ್ನು ಇವರ ಭಾವ ಎಚ್.ವಿ ಸುದರ್ಶನ್ ಒಬ್ಬರೇ ಗುತ್ತಿಗೆ ಪಡೆದಿದ್ದಾರೆ. ಇವರ ಭಾವ ಹೇಗಂದ್ರೆ, ಸುದರ್ಶನ್ ಚಿಕ್ಕಮ್ಮನ ಮಗಳನ್ನು ಸಿಟಿ ರವಿ ಮದುವೆಯಾಗಿದ್ದಾರೆ. ನಗರಸಭೆ ಸೇರಿ ಎಲ್ಲ ಕಾಮಗಾರಿಗಳನ್ನು ಅವರೇ ಪಡೆದಿದ್ದಾರೆ. ತಮ್ಮ ಹೆಸರಿನಲ್ಲಿ ಅಲ್ಲದೆ, ಬೇನಾಮಿ ಹೆಸರಲ್ಲೂ ಗುತ್ತಿಗೆ ಪಡೆದಿದ್ದಾರೆ. ಇತ್ತೀಚೆಗೆ ಮಂಜೂರಾಗಿದ್ದ ಚಿಕ್ಕಮಗಳೂರು ಮೆಡಿಕಲ್ ಕಾಲೇಜು, ಹಾಸ್ಟೆಲ್ ವ್ಯವಸ್ಥೆ ಎಲ್ಲ ಸೇರಿ 350 ಕೋಟಿ ಮೊತ್ತದ ಕಾಮಗಾರಿಯನ್ನು ಇವರೇ ಪಡೆದಿದ್ದಾರೆ. ಚಿಕ್ಕಮಗಳೂರಿನಲ್ಲಿ ಇನ್ನೊಂದು ಸೂಪರ್ ಸ್ಪೆಷಾಲಿಟಿ ಹಾಸ್ಟಿಟಲ್ ಆಗುತ್ತಿದ್ದು, 150 ಕೋಟಿ ಮೊತ್ತದ ಕಾಮಗಾರಿಯೂ ಸುದರ್ಶನ್ ಅವರಿಗೇ ಸಿಕ್ಕಿದೆ.
ಬಾಲಾಜಿ ಶೇಖರ್ ಎಂಬ ಗುತ್ತಿಗೆದಾರರ ಜೊತೆ ಸಹಭಾಗಿತ್ವದಲ್ಲಿ ಗುತ್ತಿಗೆ ಪಡೆದಿದ್ದಾರೆ. ಇದಕ್ಕೆ ಟೆಂಡರ್ ಹಾಕಲು ಅರ್ಧದಷ್ಟು ಮೊತ್ತವನ್ನು ಭರಿಸಬೇಕು. ಅದಕ್ಕಾಗಿ ಬೆಂಗಳೂರಿನ ರಾಮಲಿಂಗಂ ಕನ್ಸಟ್ರಕ್ಷನ್ ಸಹಾಯ ಪಡೆದಿದ್ದು ಒಟ್ಟು 600 ಕೋಟಿ ಕಾಮಗಾರಿ ಮಾಡುತ್ತಿದ್ದಾರೆ. ಇದಲ್ಲದೆ, ಬಸವನಹಳ್ಳಿ ಕೆರೆಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು 36 ಕೋಟಿ ಅನುದಾನ ನೀಡಿದ್ದು, ಅದರ ಕಾಮಗಾರಿಯನ್ನೂ ಸುದರ್ಶನ್ ಪಡೆದಿದ್ದಾರೆ. ಇದಕ್ಕೂ ಮೊದಲು ಇದೇ ಕೆರೆಯ ಹೂಳು ತೆಗೆಯಲು 7 ಕೋಟಿ ಖರ್ಚು ಮಾಡಲಾಗಿದೆ. ಈ ಹೂಳು ತೆಗೆದಿದ್ದು ಮಳೆಯಲ್ಲಿ ಕೊಚ್ಚಿ ಹೋಗಿದ್ಯಂತೆ. ಹಾಗಂತ, ಅವರೇ ಹೇಳುತ್ತಿದ್ದಾರೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 60 ಕಿಮೀ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಬೇನಾಮಿ ಹೆಸರಲ್ಲಿ ಇವರೇ ಪಡೆದಿದ್ದಾರೆ ಅನ್ನುವ ಮಾಹಿತಿ ಇದೆ. ಹುಬ್ಬಳ್ಳಿಯಲ್ಲಿ ಜಯದೇವ ಹಾಸ್ಟಿಟಲ್ ನಿರ್ಮಾಣ ಆಗ್ತಿದೆ, ಅದರ ಕಾಮಗಾರಿಯನ್ನು ಪ್ರಹ್ಲಾದ ಜೋಷಿಗೆ ಹೇಳಿಸಿ ಕಾಮಗಾರಿ ಕೊಡಿಸುವಲ್ಲಿ ಸಿಟಿ ರವಿ ಪ್ರಯತ್ನ ಪಡುತ್ತಿದ್ದಾರೆ.
ಟ್ರಾಕ್ಟರ್ ಡ್ರೈವರ್ ಆಗಿದ್ದ ಸಿಟಿ ರವಿ
ಇಂಥ ಸಿಟಿ ರವಿ ಎಂಬ ಪ್ರಬಲ ವ್ಯಕ್ತಿಯ ಚರಿತ್ರೆಯನ್ನು ಸ್ವಲ್ಪ ಜನರಿಗೆ ತಿಳಿಸಬೇಕು. ಇವರ ತಂದೆಯ ಹೆಸರು ತಿಮ್ಮೇ ಗೌಡ. ಮೊದಲು ಓದು ಮುಗಿಸಿದ ಮೇಲೆ ಹತ್ತೀಕಟ್ಟೆ ಜಗನ್ನಾಥ್ ಎಂಬವರ ಬಳಿ ಟ್ರಾಕ್ಟರ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದರು. ಈಗ ಜಗನ್ನಾಥ್ ಅವರನ್ನೇ ತನ್ನ ಡ್ರೈವರ್ ಮಾಡ್ಕೊಳ್ತೀನಿ ಅಂತ ಇದೇ ವ್ಯಕ್ತಿ ಸವಾಲು ಹಾಕಿದ್ದಾರಂತೆ. ಇನ್ನು ಈತನ ಭಾವ ಸುದರ್ಶನ್ ಕಾರುಬಾರು ಎಷ್ಟೆಂದರೆ, ಚಿಕ್ಕಮಗಳೂರಿನಲ್ಲಿ ಡೀಸಿ, ಎಸ್ಪಿ, ತಹಸೀಲ್ದಾರ್ ಎಲ್ಲರನ್ನೂ ತನ್ನ ಮನೆಗೆ ಕರೆಸಿ ಅನಧಿಕೃತ ಮೀಟಿಂಗ್ ಮಾಡುತ್ತಾರೆ. ಅಲ್ಲೇನು ಡೈರೆಕ್ಷನ್ ಕೊಡ್ತಾರೆ, ಅದನ್ನಷ್ಟೇ ಮಾಡಬೇಕಾಗುತ್ತದೆ.
ನಮ್ಮ ಮಾಹಿತಿ ಪ್ರಕಾರ, ದುಬೈನಲ್ಲಿ ಎರಡು ಹೊಟೇಲ್ ಹೊಂದಿದ್ದಾರೆ, ಸಿಟಿ ರವಿಯವರು ಇದನ್ನು ನೇರವಾಗಿ ಹೊಂದಿಲ್ಲ. ಬೇನಾಮಿ ಹೆಸರಲ್ಲಿ ಹೊಟೇಲ್ ಹೊಂದಿದ್ದಾರೆ. ಬೆಂಗಳೂರಿನ ದೇವನಹಳ್ಳಿಯಲ್ಲಿ 2-3 ಅಪಾರ್ಟ್ಮೆಂಟ್ ಇದೆ, ಎಚ್ಎಎಲ್ ರಸ್ತೆಯಲ್ಲಿ ಹತ್ತು ಮನೆಗಳಿವೆ. ಅಂದಾಜು ಏನಿಲ್ಲ ಅಂದ್ರೂ 3 ಸಾವಿರ ಕೋಟಿಗೂ ಹೆಚ್ಚು ಬೇನಾಮಿ ಆಸ್ತಿಯನ್ನು ಸಿಟಿ ರವಿ ದೇಶ- ವಿದೇಶದಲ್ಲಿ ಹೊಂದಿದ್ದಾರೆ. 1996ರಲ್ಲಿ ನಾಲ್ಕು ವರ್ಷಗಳ ಕಾಲ ಏನೂ ಇಲ್ಲದಿದ್ದ ಈ ವ್ಯಕ್ತಿಯ ಬಳಿ ಇಷ್ಟೆಲ್ಲ ಆಸ್ತಿ ಸಂಪಾದನೆ ಹೇಗೆ ಆಗಿದ್ದು ಅನ್ನೋದನ್ನು ತನಿಖೆ ಮಾಡಬೇಕಾಗಿದೆ. ನಮ್ಮ ಸರಕಾರ ಬಂದಲ್ಲಿ ಖಂಡಿತ ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದರು ಲಕ್ಷ್ಮಣ್.
ಇದಲ್ಲದೆ, ಚಿಕ್ಕಮಗಳೂರಿನಲ್ಲಿ ಯಾರಾದ್ರೂ ಯಾವುದಾದ್ರೂ ಕಟ್ಟಡ ಕಾಮಗಾರಿ ಮಾಡಬೇಕಂದ್ರೆ ಸುದರ್ಶನ್ ಅವರ ಅಂಗಡಿಯಲ್ಲೇ ಸಿಮೆಂಟ್, ಇಟ್ಟಿಗೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಬೇಕು. ಅದಕ್ಕಾಗಿ ನಾನು ಇದನ್ನು ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಎನ್ನುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಚಿಕೆಗಳಲ್ಲಿ ಸಿಟಿ ರವಿ ಬಂಡವಾಳ ಬಯಲು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
BJP CT Ravi is alleged of Three Thousand crores of illegal wealth by Congress KPCC spokesperson Lakshman. CT Ravi is a Rowdysheeter. Ravi has made Chikmagaluru as Republic of Chikmagaluru he added.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm