ಸಿಗದ ಸಚಿವ ಸ್ಥಾನ ; ಇಮೋಶನಲ್ ಬ್ಲಾಕ್ಮೇಲ್ ಗಿಳಿದ ಕೆ.ಎಸ್ ಈಶ್ವರಪ್ಪ, ಅಧಿವೇಶನಕ್ಕೆ ಹೋಗದೆ ಅತೃಪ್ತಿಯ ಸುದ್ದಿಗೋಷ್ಠಿ!  

20-12-22 03:11 pm       Bangalore Correspondent   ಕರ್ನಾಟಕ

ಸಚಿವ ಸ್ಥಾನ ಸಿಗದ ಬೇಸರದಲ್ಲಿರುವ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಅತ್ತ ಬೆಳಗಾವಿಯಲ್ಲಿ ಅಧಿವೇಶನ ಆಗುತ್ತಿದ್ದರೆ ಇತ್ತ ಇಮೋಶನಲ್ ಬ್ಲಾಕ್ಮೇಲ್ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರು, ಡಿ.20: ಸಚಿವ ಸ್ಥಾನ ಸಿಗದ ಬೇಸರದಲ್ಲಿರುವ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಅತ್ತ ಬೆಳಗಾವಿಯಲ್ಲಿ ಅಧಿವೇಶನ ಆಗುತ್ತಿದ್ದರೆ ಇತ್ತ ಇಮೋಶನಲ್ ಬ್ಲಾಕ್ಮೇಲ್ ನಡೆಸಲು ಮುಂದಾಗಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ಕರೆದ ಈಶ್ವರಪ್ಪ, ತನಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. 30-40 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೂ ಸಚಿವ ಸ್ಥಾನಕ್ಕಾಗಿ ಗೋಗರೆಯಬೇಕಾದ ಸ್ಥಿತಿ ಬಂದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಇತ್ತೀಚೆಗೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೇಶ್ ಜಾರಕಿಹೊಳಿ ಮತ್ತು ನನ್ನನ್ನು ಮತ್ತೆ ಸಚಿವ ಸ್ಥಾನಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದರು. ಈಗಲೂ ನಿರೀಕ್ಷೆ ಹೊಂದಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಆಗಬಾರದು ಎಂದು ಬಾಯಿ ಕಟ್ಟಿ ಕುಳಿತಿದ್ದೆ. ಪಕ್ಷಕ್ಕಾಗಿ 30-40 ವರ್ಷಗಳಿಂದ ಯಡಿಯೂರಪ್ಪ, ಅನಂತ ಕುಮಾರ್ ಜೊತೆಗೆ ದುಡಿದಿದ್ದೇನೆ. ಇಂಥ ವ್ಯಕ್ತಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಯಾಕೆಂದು ಜನರೇ ನನಗೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ನನಗೆ ನಂಬಿಕೆ ಇದೆ, ಜೊತೆಗೆ ಪ್ರತಿಭಟಿಸುವ ಹಕ್ಕೂ ಇದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಲ್ಲ ಎಂದು ಪತ್ರವನ್ನೂ ಕೊಟ್ಟಿದ್ದೆ ಎಂದರು.

Karnataka | Viral sex clip lands BJP leader Ramesh Jarkiholi in a spot.  Will he resign as minister? | coastaldigest.com - The Trusted News Portal  of India

ನನಗೇನು ಸಚಿವನಾಗಬೇಕೆಂದು ಆಸೆ ಇಲ್ಲ. ಆದರೆ ಆಪಾದನೆ ಬಂದ ಕಾರಣಕ್ಕೆ ನೈತಿಕ ಹೊಣೆಯಲ್ಲಿ ರಾಜಿನಾಮೆ ನೀಡಿದ್ದೆ. ಈಗ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಮರಳಿ ಸಚಿವ ಸ್ಥಾನಕ್ಕೆ ಬಂದು ನನ್ನ ಮೇಲಿನ ಆಪಾದನೆಯಿಂದ ಮುಕ್ತನಾಗಲು ಬಯಸಿದ್ದೇನೆ. ನಾನು ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಆರೋಪ ಮುಕ್ತರಾಗಿದ್ದೇವೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ಅಧಿವೇಶನಕ್ಕೆ ಹೋಗುವುದಿಲ್ಲವೇ ಎಂದು ಕೇಳಿದ್ದಕ್ಕೆ, ಆ ಬಗ್ಗೆ ಪಕ್ಷದ ಹಿರಿಯರ ಜೊತೆಗೆ ಮಾತನಾಡಿ ನಿರ್ಧರಿಸುತ್ತೇನೆ ಎಂದು ಹೇಳಿ ನುಣುಚಿಕೊಂಡರು. ಅತ್ತ ಅಧಿವೇಶನಕ್ಕೆ ಹಾಜರಾಗುವಂತೆ ಮತ್ತು ಹಲವು ಮಸೂದೆಗಳ ಮಂಡನೆ ಆಗುವುದರಿಂದ ಕಡ್ಡಾಯ ಹಾಜರಾತಿ ಬಗ್ಗೆ ವಿಪ್ ಜಾರಿ ಮಾಡಿರುತ್ತಾರೆ. ಹಾಗಿದ್ದರೂ, ಈಶ್ವರಪ್ಪ ತಮ್ಮ ಮೊಂಡು ಹಠ ಸಾಧಿಸಲು ಹೊರಟಿದ್ದಾರೆ. ಪಕ್ಷ ಮತ್ತು ಹೈಕಮಾಂಡನ್ನು ಎದುರು ಹಾಕಿ ಸಚಿವ ಸ್ಥಾನಕ್ಕಾಗಿ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ.

BJP Ended 'Appeasement Politics' In Gujarat: Amit Shah

ವಿಸ್ತರಣೆಗೆ ನೋ ಎಂದಿದ್ದ ದೆಹಲಿ ನಾಯಕರು

ಇತ್ತೀಚೆಗಷ್ಟೆ ದೆಹಲಿ ತೆರಳಿದ್ದ ಸಿಎಂ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ್ದರು. ದೆಹಲಿ ನಾಯಕರಿಂದ ಸಂಪುಟ ವಿಸ್ತರಣೆಗೆ ಅನುಮತಿ ಸಿಕ್ಕಿರಲಿಲ್ಲ. ಚುನಾವಣೆ ಹೊತ್ತಿನಲ್ಲಿ ಸಂಪುಟ ವಿಸ್ತರಣೆಗೆ ಕೈಹಾಕಿ ಕೈಸುಟ್ಟುಕೊಳ್ಳುವುದು ಬೇಡ ಎಂದು ಸಲಹೆ ಮಾಡಿದ್ದರು. ಹೀಗಾಗಿ ಸಂಪುಟಕ್ಕೆ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಸೇರಿಸಿಕೊಳ್ಳುವ ಮುಖ್ಯಮಂತ್ರಿ ಇರಾದೆಗೆ ಇಂಬು ಸಿಕ್ಕಿರಲಿಲ್ಲ.

In the case of suicide of a contractor, the investigation has proved that the allegations against him are baseless. So former minister KS Eshwarappa insisted that he should be reinstated in the cabinet and held a press conference in this regard today in Bangalore. Eshwarappa, who spoke during the press conference, has got the promise of inclusion in the cabinet! So thanking CM Bommai (Basavaraj Bommai) he clarified that he will not take any tough decision for now.