ಹೊಸ ವರ್ಷಾಚರಣೆ ವೇಳೆ ಉದ್ಯಮಿ ಆತ್ಮಹತ್ಯೆ ; ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್ 

02-01-23 12:24 pm       Bangalore Correspondent   ಕರ್ನಾಟಕ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್‌ಎಸ್‌ಆರ್ ಲೇಔಟ್‌ ನಿವಾಸಿ ಪ್ರದೀಪ್ (47) ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು, ಜ.2: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್‌ಎಸ್‌ಆರ್ ಲೇಔಟ್‌ ನಿವಾಸಿ ಪ್ರದೀಪ್ (47) ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಡೆತ್ ನೋಟ್ ಆಧರಿಸಿ ಪ್ರದೀಪ್‌ ಪತ್ನಿ ನೀಡಿದ ದೂರಿನಂತೆ ಪೊಲೀಸರು ಆತ್ಮಹತ್ಯೆ ಪ್ರಚೋದನೆ ಆರೋಪದಡಿ ಕೇಸು ದಾಖಲಿಸಿದ್ದಾರೆ. 

ಸಾವಿಗೂ ಮುನ್ನ ಪ್ರದೀಪ್ ಡೆತ್ ನೋಟ್ ಬರೆದಿದ್ದು ಅದರಲ್ಲಿ ಮಾಜಿ ಸಚಿವ ಅರವಿಂದ್‌ ಲಿಂಬಾವಳಿ ಸೇರಿ ಆರು ಮಂದಿಯ ಹೆಸರನ್ನು ಉಲ್ಲೇಖಿಸಿದ್ದರು. ಗೋಪಿ ಮತ್ತು ಸೋಮಯ್ಯ ಅವರಿಗೆ ಬೆಂಬಲ ನೀಡಿದ್ದರು ಎಂದು ನಮೂದಿಸಿದ್ದರು. ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದೆ. 

ಪ್ರದೀಪ್‌ ಆತ್ಮಹತ್ಯೆ ಬೆನ್ನಲ್ಲೇ ಅರವಿಂದ್‌ ಲಿಂಬಾವಳಿಯವರು ಮನೆಯಿಂದ ಹೊರಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಮೃತ ಪ್ರದೀಪ್‌ ಅವರು ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾರಿನಲ್ಲಿ ಕುಳಿತು ತಲೆಗೆ ಗುಂಡು ಹಾರಿಸಿಕೊಂಡಿದ್ದರು.

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್‌ ನಿರ್ಮಾಣಕ್ಕೆ ಪ್ರದೀಪ್ ಹಣ ಹೂಡಿಕೆ ಮಾಡಿದ್ದು ಸ್ನೇಹಿತರು ಹಣ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ಪ್ರಕಾರ, ಎರಡೂವರೆ ಕೋಟಿ ರೂಪಾಯಿ ಪ್ರದೀಪ್ ಗೆ ಬರಬೇಕಿತ್ತು. ಈ ವಿಚಾರದಲ್ಲಿ ಶಾಸಕ ಲಿಂಬಾವಳಿ ಬ್ರೋಕರ್ ಕೆಲಸ ಮಾಡಿದ್ದು ಎಲ್ಲರನ್ನೂ ಕೂರಿಸಿ ಮಾತುಕತೆ ನಡೆಸಿದ್ದರು. ತಿಂಗಳಿಗೆ ಹತ್ತು ಲಕ್ಷದಂತೆ ಹಣ ಕೊಡಲು ಸೂಚಿಸಿದ್ದರು. ಆದರೆ ಸ್ನೇಹಿತರು ಒಂದು ಕಂತಿನ ಹಣ ಕೊಟ್ಟು ಬಳಿಕ ವಂಚಿಸಿದ್ದರು.‌ ಆನಂತರ, ಆರೋಪಿಗಳಿಗೆ ಲಿಂಬಾವಳಿ ಸಹಕಾರ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ರೆಸಾರ್ಟ್‌ ನಿರ್ಮಾಣಕ್ಕಾಗಿ ತನ್ನ ಮನೆ ಮಾರಿ, ಒಂದೂವರೆ ಕೋಟಿ ರೂಪಾಯಿಯನ್ನು ಪ್ರದೀಪ್‌ ಹೂಡಿಕೆ ಮಾಡಿದ್ದರು. ಆದರೆ, ಬಳಿಕ ಇತರರು ಮೋಸ ಮಾಡಿದ್ದರು ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

A Bengaluru man shot himself in an alleged case of suicide and named six including BJP MLA Aravind Limbavali as the people responsible for his death.
The names of the six people including Mahadevapura MLA Aravind Limbavali were mentioned by the man in what is alleged to be a suicide note. A resident of the HSR Layout, the man identified as Pradeep fatally shot himself.