ಬ್ರೇಕಿಂಗ್ ನ್ಯೂಸ್
05-01-23 03:48 pm HK News Desk ಕರ್ನಾಟಕ
ಹಾಸನ, ಜ.5: ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಚಾಲಕ ಪಾನಮತ್ತನಾಗಿ ಅಡ್ಡಾದಿಡ್ಡಿ ಬಸ್ ಚಲಾಯಿಸಿದ್ದನ್ನು ನೋಡಿ ಪ್ರಯಾಣಿಕರೇ ಬಸ್ ನಿಲ್ಲಿಸಿ ತರಾಟೆಗೆತ್ತಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ನಡೆದಿದೆ.
ಆನಂದ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ಸನ್ನು ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ್ದು ಚನ್ನರಾಯಪಟ್ಟಣ ಹೊರ ವಲಯಕ್ಕೆ ತಲುಪಿದಾಗ ಪ್ರಯಾಣಿಕರೇ ಬಸ್ ನಿಲ್ಲಿಸಿದ್ದಾರೆ. ರಸ್ತೆ ತುಂಬೆಲ್ಲಾ ಅಡ್ಡಾದಿಡ್ಡಿ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ಕೆಳಕ್ಕಿಳಿಸಿ ಜೋರು ಮಾಡಿದ್ದಾರೆ. ಬಸ್ ಸರಿ ಇಲ್ಲ, ಹಾಗಾಗಿ ಅಡ್ಡಾದಿಡ್ಡಿ ಹೋಗ್ತಾ ಇದೆಯೆಂದು ಚಾಲಕ ಹೇಳಿದ್ದಕ್ಕೆ, ಬಸ್ಸನ್ನು ಗ್ಯಾರೇಜ್ ಕರ್ಕೊಂಡು ಹೋಗುವ ಬದಲು ಯಾಕೆ ತಗೊಂಡು ಬಂದಿದ್ದು ಎಂದು ಜೋರು ಮಾಡಿದ್ದಾರೆ.
ಚಾಲಕನ ವರ್ತನೆ ಗಮನಿಸಿ, ಪೊಲೀಸ್ ಕಂಟ್ರೋಲ್ 112 ನಂಬರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಪ್ರಯಾಣಿಕರ ದೂರಿನಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಚನ್ನರಾಯಪಟ್ಟಣ ಟ್ರಾಫಿಕ್ ಪೊಲೀಸರು, ಚಾಲಕ ಕುಡಿದಿದ್ದನ್ನು ಖಚಿತಪಡಿಸಿ ಬಸ್ ಸೀಜ್ ಮಾಡಿದ್ದಾರೆ. ಚಾಲಕ ಮಲ್ಲೇಶ್ ಎಂಬಾತನಿಗೆ ದಂಡ ವಿಧಿಸಿದ್ದು ಬಸ್ಸನ್ನು ಚನ್ನರಾಯಪಟ್ಟಣ ಟ್ರಾಫಿಕ್ ಠಾಣೆ ಮುಂದೆ ಇರಿಸಿದ್ದಾರೆ.
ವಿಷಯ ತಿಳಿದು ಪ್ರಯಾಣಿಕರ ಸಂಚಾರಕ್ಕೆ ಮಧ್ಯರಾತ್ರಿಯೇ ಬೇರೆ ಬಸ್ಸನ್ನು ಆನಂದ್ ಟ್ರಾವಲ್ಸ್ ಸಂಸ್ಥೆಯಿಂದ ವ್ಯವಸ್ಥೆ ಮಾಡಲಾಗಿದೆ.
#Mangalore #AnandTravels #Bus Driver found Drunk major accident averted at #Hassan, bus seized pic.twitter.com/u92gOHJwVo
— Headline Karnataka (@hknewsonline) January 5, 2023
Mangalore Anand Travels Bus Driver found Drunk major accident averted at Hassan, bus seized and driver has been arrested after a passenger saw the bus going right and left. A case has been registered by the Hassan Police.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 05:12 pm
Mangalore Correspondent
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm