ದೇಶದಲ್ಲಷ್ಟೆ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಭ್ರಷ್ಟ ಸರ್ಕಾರ ಎಂಬ ಅಪಕೀರ್ತಿ ಬಂದಿದೆ ; ಪ್ರಿಯಾಂಕ್ ಖರ್ಗೆ

06-01-23 08:41 pm       HK News Desk   ಕರ್ನಾಟಕ

ರಾಜ್ಯದಲ್ಲಿ ಬಿಜೆಪಿ ಪಕ್ಷವಾಗಲಿ, ಮುಖ್ಯಮಂತ್ರಿಯವರಾಗಲಿ ಸರ್ಕಾರ ನಡೆಸುತ್ತಿಲ್ಲ. ಬದಲಾಗಿ ರೌಡಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. 

ಕಲಬುರ್ಗಿ, ಜ.6: ರಾಜ್ಯದಲ್ಲಿ ಬಿಜೆಪಿ ಪಕ್ಷವಾಗಲಿ, ಮುಖ್ಯಮಂತ್ರಿಯವರಾಗಲಿ ಸರ್ಕಾರ ನಡೆಸುತ್ತಿಲ್ಲ. ಬದಲಾಗಿ ರೌಡಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದೇಶದಲ್ಲಷ್ಟೆ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಭ್ರಷ್ಟ ಸರ್ಕಾರ ಎಂಬ ಅಪಕೀರ್ತಿ ಬಂದಿದೆ. ಬಿಜೆಪಿ ಭಾರತೀಯ ಜನತಾ ಪಕ್ಷವಾಗಿ ಉಳಿದಿಲ್ಲ, ಬ್ರೋಕರ್ಸ್ ಜನತಾ ಪಕ್ಷವಾಗಿದೆ ಎಂದು ಕಿಡಿಕಾರಿದರು.

Anulment of PSI exams: Candidates approach Tribunal | udayavani

ಪವಿತ್ರವಾದ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಲಾಗಿದೆ. ಬಿಜೆಪಿಯವರ ಭ್ರಷ್ಟಚಾರದಿಂದ ವಿಧಾನಸೌಧ ತನ್ನ ಪಾವಿತ್ರ್ಯವನ್ನು ಕಳೆದುಕೊಂಡು, ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಸರ್ಕಾರಿ ಉದ್ಯೋಗ, ವರ್ಗಾವಣೆ, ಸರ್ಕಾರಿ ಗುತ್ತಿಗೆಗಳು ಮಾರಾಟಕ್ಕಿವೆ. ವಿಧಾನಸೌಧದಲ್ಲಿ ಬೆಸ್ಟ್ ಸೆಲ್ಸ್ ಮನ್‍ಗಳಾಗಿ ಹಿರಿಯ ಅಧಿಕಾರಿಗಳು, ಸಚಿವರು, ಬ್ರೋಕರ್ಸ್ ಪಕ್ಷದ ಶಾಸಕರೇ ಕೆಲಸ ಮಾಡುತ್ತಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟ ಸಾಬೀತಾಗಿದೆ ಎಂದರು.

ಜನವರಿ 4ರಂದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಒಬ್ಬರು 10.5 ಲಕ್ಷ ರೂಪಾಯಿ ಹಣದೊಂದಿಗೆ ಸಿಕ್ಕಿ ಬಿದಿದ್ದಾರೆ. ಆ ಅಧಿಕಾರಿಗೆ ಅಷ್ಟು ಹಣ ಎಲ್ಲಿಂದ ಬಂತು. ಯಾರಿಗೆ ಕೊಡಲು ಹೋಗಿದ್ದರು ಎಂಬೆಲ್ಲಾ ವಿಷಯಗಳು ತನಿಖೆಯಾಗಿಬೇಕಿದೆ ಎಂದು ಒತ್ತಾಯಿಸಿದರು.

Karnataka: CM Basavaraj Bommai shares an update on lifting Covid curbs in  state | Mint

ಬಿಜೆಪಿ ಹೈಕಮಾಂಡ್‍ಗೆ ಮುಖ್ಯಮಂತ್ರಿ, ಮುಖ್ಯಮಂತ್ರಿಗೆ ಸಚಿವರು, ಸಚಿವರಿಗೆ ಶಾಸಕರು, ಶಾಸಕರಿಗೆ ಅಧಿಕಾರಿಗಳು ಮಧ್ಯವರ್ತಿಗಳಾಗಿದ್ದಾರೆ. ಈ ನಡುವೆ ಮತ್ತೊಂದು ವ್ಯವಸ್ಥೆ ಮಧ್ಯವರ್ತಿ ಸ್ಥಾನಕ್ಕೆ ಎಂಟ್ರಿಯಾಗಿದೆ. ರೌಡಿಗಳು ಮಧ್ಯವರ್ತಿಗಳಾಗಿದ್ದಾರೆ. ಕಳೆದೆರಡು ದಿನಗಳಿಂದ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ನೋಡಿದರೆ ಸರ್ಕಾರ ಯಾರು ನಡೆಸುತ್ತಿದ್ದಾರೆ ಎಂಬ ಅನುಮಾನ ಬರುತ್ತಿದೆ. ಮುಖ್ಯಮಂತ್ರಿಗಳಂತೂ ಸರ್ಕಾರ ನಡೆಸುತ್ತಿಲ್ಲ ಎಂದು ಆರೋಪಿಸಿದರು.

Karnataka Congress Tweets, Santro Ravi Case - ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ  ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ?: ಕಾಂಗ್ರೆಸ್ ಪ್ರಶ್ನೆ  - congress ...

Coward home minister': Karnataka home minister Araga Jnanendra faces heat  from ABVP members | Deccan Herald

Karnataka on high alert over COVID-19: Dr K Sudhakar | Deccan Herald

ನಿನ್ನೆ ಬೆಳಕಿಗೆ ಬಂದ ಸ್ಯಾಂಟ್ರೋ ರವಿ ಆಡಿಯೋ ಕ್ಲಿಪ್‍ನಲ್ಲಿ ತನಗೆ ಮುಖ್ಯಮಂತ್ರಿಯೊಂದಿಗೆ ನೇರ ಸಂಪರ್ಕ ಇದೆ ಎಂದು ಆತ ಹೇಳಿಕೊಂಡಿದ್ದಾನೆ. ಗೃಹ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿ ಜೊತೆ ಇರುವ ಜೊತೆಗೆ ಫೋಟೊಗಳು, ಮುಖ್ಯಮಂತ್ರಿ ಪುತ್ರನನ್ನು ನನ್ನ ಸ್ವೀಟ್‍ಬ್ರದರ್ ಎಂದು ಹೇಳಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

ಮುಖ್ಯಮಂತ್ರಿಯೇ ನನಗೆ ಸರ್ ಎಂದು ಕರೆಯುತ್ತಾರೆ ನೀನು ನನ್ನನ್ನು ಏಕವಚನದಲ್ಲಿ ಮಾತನಾಡುತ್ತೀಯಾ ಎಂದು ಸ್ಯಾಂಟ್ರೊ ರವಿ ಪೊಲೀಸ್ ಅಕಾರಿಯೊಬ್ಬರಿಗೆ ಧಮಕಿ ಹಾಕಿದ್ದಾರೆ. ಅದನ್ನು ಕೇಳಿ ಪೊಲೀಸ್ ಅಧಿಕಾರಿ ಕ್ಷಮೆ ಕೇಳಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರು.

The name of Karnataka has spoilt in international level slams Priyank Kharge, BJP is rowdy party.