ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ; ಆರೋಪಿ ಶಂಕರ್ ಮಿಶ್ರಾ ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ 

07-01-23 12:10 pm       Bangalore Correspondent   ಕರ್ನಾಟಕ

ನ್ಯೂಯಾರ್ಕ್​​ನಿಂದ ದೆಹಲಿಗೆ ನವೆಂಬರ್ 26ರಂದು ಆಗಮಿಸುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ 72 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬಯಿ ಮೂಲದ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರು, ಜ.7: ನ್ಯೂಯಾರ್ಕ್​​ನಿಂದ ದೆಹಲಿಗೆ ನವೆಂಬರ್ 26ರಂದು ಆಗಮಿಸುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ 72 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬಯಿ ಮೂಲದ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಹಾಗೇ, ಆತನನ್ನು ದೆಹಲಿಗರೆ ಕರೆದೊಯ್ಯುತ್ತಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡುತ್ತಿದ್ದಂತೆ ಶಂಕರ್ ಮಿಶ್ರಾ ತನ್ನ ಮೊಬೈಲ್​​ನ್ನೆಲ್ಲ ಸ್ವಿಚ್​ ಆಫ್ ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಸಂಜಯ್​ನಗರದಲ್ಲಿರುವ ಒಂದು ಗೆಸ್ಟ್​ಹೌಸ್​​ನಲ್ಲಿ ಒಬ್ಬನೇ ತಂಗಿದ್ದ. ಇಂದು ಮಧ್ಯಾಹ್ನದ ಹೊತ್ತಿಗೆ ಶಂಕರ್​ ಮಿಶ್ರಾನನ್ನು ಪೊಲೀಸರು ದೆಹಲಿ ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ. 

Air India urination case: Civil Aviation Ministry directs airline to  conduct internal probe, submit report

ನವೆಂಬರ್​ 26ರಂದು ಈ ವ್ಯಕ್ತಿ ಕುಡಿದು ಅಮಲೇರಿದ ಸ್ಥಿತಿಯಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ. ಆದರೆ ಇತ್ತೀಚೆಗೆ ಮಹಿಳೆ ಏರ್​ ಇಂಡಿಯಾ ಅಧ್ಯಕ್ಷನಿಗೆ ಪತ್ರದ ಮೂಲಕ ದೂರು ಸಲ್ಲಿಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು. 'ಏರ್ ಇಂಡಿಯಾ ಸಿಬ್ಬಂದಿ ಈ ಸಂದರ್ಭವನ್ನು ಸರಿಯಾಗಿ ನಿಭಾಯಿಸಲಿಲ್ಲ. ಸೀಟು ಬದಲಿಸಿಕೊಡಲು ಪೈಲೆಟ್​ ಒಪ್ಪಲಿಲ್ಲ. ನಾನು ಆ ವ್ಯಕ್ತಿಯನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಹೇಳಿದರೂ, ಬಲವಂತವಾಗಿ ನನ್ನೆದುರು ಕರೆತಂದು ನಿಲ್ಲಿಸಿ, ಕ್ಷಮೆ ಕೇಳಿಸಿದರು' ಎಂಬಿತ್ಯಾದಿ ವಿಷಯವನ್ನೂ ಆ 72 ವರ್ಷದ ಮಹಿಳೆ ಹೇಳಿಕೊಂಡಿದ್ದರು.

ಘಟನೆ ನಡೆದ ಏರ್​ ಇಂಡಿಯಾ ವಿಮಾನದ ಪೈಲೆಟ್​, ಸಹ ಪೈಲೆಟ್​ಗೂ ಪೊಲೀಸರು ಸಮನ್ಸ್​ ನೀಡಿ, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅವರು ಪೊಲೀಸರ ಎದುರು ಬಂದಿರಲಿಲ್ಲ. ಹೀಗಾಗಿ ಇಂದು  ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದೂ ಹೇಳಲಾಗಿದೆ.

Delhi Police has arrested from Bengaluru the man who allegedly urinated on a woman co-passenger on an Air India flight, officials said on Saturday. The accused, Shankar Mishra, allegedly urinated on the woman, a senior citizen, in an inebriated condition in the business class of the Air India flight from New York to Delhi on November 26 last year.