ಬ್ರೇಕಿಂಗ್ ನ್ಯೂಸ್
09-01-23 08:26 pm Bangalore Correspondent ಕರ್ನಾಟಕ
ಬೆಂಗಳೂರು, ಜ.9 : ರಾಜ್ಯದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ಪುಸ್ತಕ ವಾರ್ ಶುರುವಾಗಿದೆ. ಸಿದ್ದರಾಮಯ್ಯ ಸರ್ಕಾರದ ಅಧಿಕಾರಾವಧಿ ಬಗ್ಗೆ 'ಸಿದ್ದು ನಿಜ ಕನಸುಗಳು' ಎಂಬ ಪುಸ್ತಕ ಬಿಡುಗಡೆಗೆ ಬಿಜೆಪಿ ಮುಂದಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಕೋರ್ಟ್ ಮೆಟ್ಟಿಲೇರಿ ಪುಸ್ತಕ ಬಿಡುಗಡೆಗೆ ತಡೆ ಹೇರಿದ್ದಾರೆ. ಈ ನಡುವೆ, ನಗರದ ಟೌನ್ ಹಾಲ್ ಸುತ್ತ ಸೇರಿದ ಎರಡೂ ಪಕ್ಷಗಳ ಕಾರ್ಯಕರ್ತರು ಧಿಕ್ಕಾರ ಕೂಗಿ ತಳ್ಳಾಟ ನಡೆಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ʼಸಿದ್ದು ನಿಜಕನಸುಗಳು ಸಂಪುಟ 1' ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ್ ಪುಸ್ತಕವನ್ನು ಬಿಡುಗಡೆಗೊಳಿಸಬೇಕಿತ್ತು. ಪುಸ್ತಕ ಬಿಡುಗಡೆ ವಿಚಾರದ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಕೋರ್ಟ್ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನಗರದ ಸಿಟಿ ಸಿವಿಲ್ ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.
ಪುಸ್ತಕ ಬಿಡುಗಡೆ, ಮಾರಾಟ ಮಾತ್ರವಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿದೆ. ಬಿಜೆಪಿ ನಾಯಕರು ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಮಾಡ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿದ್ದರು. ಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ ಕಾರ್ಯಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದಿದ್ದು ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ.
ಕಾರ್ಯಕ್ರಮ ರದ್ದಾಗುತ್ತಿದ್ದಂತೆ ಟೌನ್ ಹಾಲ್ ಮುಂಭಾಗಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಇದಕ್ಕೂ ಮುನ್ನ, ಸಿದ್ದು ನಿಜ ಜೀವನಗಳ ಪುಸ್ತಕ ಕುರಿತ ಬ್ಯಾನರ್ ಹಾಗೂ ಭಿತ್ತಿ ಪತ್ರ ಹಿಡಿದು ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ವೇಳೆ ಅದನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದು ಪರಿಣಾಮ ಕೈ ಹಾಗೂ ಕಮಲ ಕಾರ್ಯಕರ್ತರ ನಡುವೆ ತಳ್ಳಾಟ - ನೂಕಾಟ ನಡೆಯಿತು.
ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ಬಂದ ಕಾರಣ ಟೌನ್ಹಾಲ್ ಬಳಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯಗೆ ಹೆದರಿಕೆ ಶುರುವಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡುತ್ತಿದ್ದೇವೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಶತಸಿದ್ಧ. ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರಕ್ಕೆ ಯಾಕೆ ಹೋದರೋ ಗೊತ್ತಿಲ್ಲ. ಅವರನ್ನು ಸ್ವಪಕ್ಷದವರೇ ಸೋಲಿಸುತ್ತಾರೆ. ಮತ್ತೆ ಸಿದ್ದರಾಮಯ್ಯನವರು ಅಲ್ಲಿಂದ ವರುಣಾ ಕ್ಷೇತ್ರಕ್ಕೆ ಓಡಿ ಬರುತ್ತಾರೆ ಎಂದು ಹೇಳಿದರು.
ಇದೇ ವೇಳೆ, ಪ್ರಧಾನಿ ಮೋದಿ ಅಧಿಕಾರಾವಧಿ, ಗುಜರಾತ್ ಹತ್ಯಾಕಾಂಡ ಕುರಿತು ಪುಸ್ತಕ ಹೊರತರಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಒಟ್ನಲ್ಲಿ ಧರ್ಮ ದಂಗಲ್, ಪೇಸಿಎಂ ಬಳಿಕ ಕಾಂಗ್ರೆಸ್,ಬಿಜೆಪಿ ನಾಯಕರು ಪುಸ್ತಕ ವಾರ್ ಶುರು ಮಾಡಿದ್ದಾರೆ. ಬಿಜೆಪಿ ಟಿಪ್ಪು ನಿಜಕನಸುಗಳು ಪುಸ್ತಕದ ರೀತಿ ಸಿದ್ದರಾಮಯ್ಯ ಅವರನ್ನು ಚಿತ್ರಿಸಿ ಪುಸ್ತಕ ಹೊರ ತರಲು ಯೋಜನೆ ಹಾಕಿತ್ತು. ಆದರೆ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೆಣೆದಿದೆ.
Days after controversy erupted over a book titled Siddu Nijakanasugalu (The real dreams of Siddu), which allegedly portrays senior Congress leader and former Karnataka chief minister Siddaramaiah in a bad light, a sessions court in Bengaluru has prevented its launch. The book launch, scheduled for Monday, was cancelled after Siddaramaiah’s son Yathindra Siddaramaiah, also a Congress MLA, got an interim injunction from the court of an additional city civil and sessions judge.
13-11-24 07:07 pm
Bangalore Correspondent
Marakumbi atrocity case, Bail: ಮರಕುಂಬಿ ದಲಿತ ದ...
13-11-24 06:45 pm
Chikkamagaluru, Naxals: ದಶಕದ ಬಳಿಕ ಮಲೆನಾಡಿಗೆ ನ...
13-11-24 12:37 pm
White rumped vulture, Karwar: ಕಾರವಾರದಲ್ಲಿ ಆತಂ...
12-11-24 10:31 pm
Zammer Vs HD Kumaraswamy: ಕರಿಯಣ್ಣ ಹೇಳಿಕೆಯಿಂದ...
12-11-24 09:53 pm
12-11-24 09:00 pm
HK News Desk
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
ತಮಿಳು ಚಿತ್ರರಂಗಕ್ಕೆ ಬಿಗ್ ಶಾಕ್ ; 400ಕ್ಕೂ ಹೆಚ್...
10-11-24 04:09 pm
ದೇಶದಲ್ಲಿ ಬಿಜೆಪಿ ಇರೋ ವರೆಗೂ ಧರ್ಮಾಧರಿತ ಮೀಸಲಾತಿ...
10-11-24 11:33 am
13-11-24 11:19 pm
Mangalore Correspondent
Nirmala sitharaman, Mangalore: ಮಕ್ಕಳು ಕಲಿಯಬೇಕ...
13-11-24 11:05 pm
Mangalore, Gloria Rodrigues death, St Aloysiu...
13-11-24 08:17 pm
Mangalore Bondel new church, St Lawrence; ಬೋಂ...
13-11-24 05:24 pm
Bantwal, Mangalore Accident, Video: ಶಾಲಾ ಮಕ್ಕ...
13-11-24 04:13 pm
12-11-24 07:02 pm
Mangalore Correspondent
Mangalore crime, Bajarang Dal, Ullal News: ಉಳ...
12-11-24 11:41 am
Udupi police, lock up death, Crime: ಬ್ರಹ್ಮಾವರ...
11-11-24 12:16 pm
Mangalore crime, Bengare, Assult: ಹುಡುಗಿ ನೋಡ...
10-11-24 10:53 pm
Mulki Murder, Mangalore Crime, Pakshikere: ಪಕ...
10-11-24 06:57 pm