ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ, ಅಶಕ್ತರು ಮಾತ್ರ ಇಂಥ ಹುಳ, ಹುಪ್ಪಟೆ ಸಹಕಾರ ತಗೊಳ್ತಾರೆ, ಸಿಡಿ ಇಲ್ದಿದ್ರೆ ಇವರು ಹೈಕೋರ್ಟ್ ಸ್ಟೇ ತಗೊಳ್ತಿದ್ರಾ..? 

09-01-23 11:04 pm       HK News Desk   ಕರ್ನಾಟಕ

ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ. ಆತನ ಮೇಲೆ ಸಾಕಷ್ಟು ಕೇಸುಗಳಾಗಿವೆ. ಈ ಹಿಂದೆ ಕಮಿಷನರ್ ಆಗಿದ್ದ ಪ್ರವೀಣ್ ಸೂದ್ ಅವರು ಅವನ ಮೇಲೆ ಸಾಕಷ್ಟು ಕೇಸುಗಳನ್ನು ಹಾಕಿದ್ದರು.

ಶಿವಮೊಗ್ಗ, ಜ.10: ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ. ಆತನ ಮೇಲೆ ಸಾಕಷ್ಟು ಕೇಸುಗಳಾಗಿವೆ. ಈ ಹಿಂದೆ ಕಮಿಷನರ್ ಆಗಿದ್ದ ಪ್ರವೀಣ್ ಸೂದ್ ಅವರು ಅವನ ಮೇಲೆ ಸಾಕಷ್ಟು ಕೇಸುಗಳನ್ನು ಹಾಕಿದ್ದರು. ಅಶಕ್ತವಾಗಿರುವ ಸರ್ಕಾರ ಮಾತ್ರ ಇಂತಹ ಹುಳ, ಹುಪ್ಟಟೆ, ನರಿಗಳ ಸಹಕಾರ ತೆಗೆದುಕೊಳ್ಳುತ್ತವೆ. ಬ್ರೋಕರ್ ಗಳು, ಏಜೆಂಟರ ಸಹಕಾರ ತೆಗೆದುಕೊಳ್ಳಲು ಹೋಗುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದ್ದಾರೆ. 

ಜನರಿಗೆ ಉತ್ತರ ನೀಡುವ ಸರ್ಕಾರ ಹೇಗಿರಬೇಕು...? ಗಟ್ಟಿಯಾಗಿರುವ ಸರ್ಕಾರಗಳಿಗೆ, ಇಂತಹ ರೌಡಿಗಳು, ತಲೆ ಹಿಡುಕರ ಸಹವಾಸ ಮಾಡುವ ಅಗತ್ಯವಿಲ್ಲ. ಈ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ಕೊಟ್ಟರಾ...? ಎಲ್ಲಾ ಗೂಂಡಾಗಳಿಗೆ ಆಗ ಬಲಿ ಹಾಕಿದ್ರಲ್ಲಾ. ನೀವು ಕೂಡ ಈ ರೀತಿಯ ಗೂಂಡಾಗಳಿಗೆ ಬಲಿ ಹಾಕಿ. ಸಚಿವರ ಹೆಸರುಗಳನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣಿಗಳ ಬಗ್ಗೆ ಅಗೌರವವಾಗಿ ನೋಡುತ್ತಿದ್ದಾರೆ. ಸಿಡಿ ಪ್ರಕರಣ ಅದು, ಇದು ಅಂತಾ ನೋಡುತ್ತಿದ್ದಾರೆ. 

ಏನು ಇಲ್ಲದೇ, ಅವರೆಲ್ಲಾ ಯಾಕೆ ಸ್ಟೇ ತೆಗೆದುಕೊಂಡು ಬಂದರು. ಏನಾದರೂ ಇದ್ದರೆ ತಾನೆ ಸ್ಟೇ ತೆಗೆದುಕೊಂಡು ಬರೋದು. ನಮ್ಮ ಮೇಲೆ, ನಿಮ್ಮ ಮೇಲೆ ಸಿಡಿ ಆರೋಪ ಬಂದರೆ, ಏನಾದರೂ ಮಾಡಿಕೊಂಡು ಹೋಗಿ ಅನ್ನುತ್ತೇವೆ. ಯಾಕಂದ್ರೆ ನಾವೆಲ್ಲರೂ ಸ್ವಚ್ಛವಾಗಿರುವವರು. ಸಿಡಿ ಬಿಡುಗಡೆ ಮಾಡುತ್ತೇವೆ ಎಂದರೆ ಹೈಕೋರ್ಟ್ ನಲ್ಲಿ ಹೋಗಿ ಸ್ಟೇ ತೆಗೆದುಕೊಂಡು ಬರುತ್ತಾರೆ. ಹೀಗೆ ಮಾಡಿದರೆ ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿದ ಎಂಬಂತಾಗುತ್ತದೆ.‌ 

ಸ್ಯಾಂಟ್ರೋ ರವಿ ನೋಟುಗಳನ್ನಿಟ್ಟುಕೊಂಡು ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಇದೆಲ್ಲದರ ಹಿಂದೆ ರಾಜಕಾರಣಿಗಳಿದ್ದಾರೆ. ಇಂತಹವರನ್ನು ರಾಜಕಾರಣಿಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು.ಕೇಂದ್ರ ಸರ್ಕಾರದಲ್ಲಿ ಒಂದು ಡಿಸಿಪ್ಲಿನ್ ಇದೆ. ಅದೇ ರೀತಿ ಇಲ್ಲಿಯೂ ಇರಬೇಕು. ಯಾರ ಜೊತೆ ಫೋಟೋ ತೆಗೆಸಿಕೊಳ್ಳಬೇಕು.ಬೆಂಗಳೂರಿನಲ್ಲಿ ಈ ರೀತಿಯ ಬಹಳಷ್ಟು ಅಫೆನ್ಸ್ ಗಳು ನಡೆಯುತ್ತಿವೆ. ನಾನು ಇವರ ಬಳಿ ಬಹಳ ಹತ್ರ ಇದ್ದೇನೆ. ಇವರು ನನ್ನ ಬಳಿ ಚೆನ್ನಾಗಿದ್ದಾರೆ ಎಂದು ಫೋಟೋ ತೋರಿಸುತ್ತಾರೆ. ಒನ್ ಟು ಒನ್ ನಾನು ಇವರ ಬಳಿ ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ. ಹೀಗೊಂದು ಹೊಸ ರೀತಿಯ ಟ್ರೆಂಡ್ ಶುರುವಾಗಿದೆ. 

ಪೊಲೀಟಿಕಲ್ಲಾಗಿ ಇವರೆಲ್ಲಾ ಸ್ಟ್ರಾಂಗ್ ಆಗಿಲ್ಲದೇ ಹೋದರೆ ಇವೆಲ್ಲಾ ನಡೆಯುತ್ತದೆ. ರಾಜಕಾರಣಿಗಳು ಸ್ಟ್ರಾಂಗ್ ಆಗಿ ಇರಬೇಕು ಎಂದು ಭಾಸ್ಕರ ರಾವ್, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Santro ravi is a rapist, slams Aap party former IPS officer Bhaskar Rao.