ಬೆಂಗಳೂರಿನಲ್ಲಿ  ಗೋಫಸ್ಟ್ ಫ್ಲೈಟ್ ಅವಸ್ಥೆ  ; 54 ಪ್ರಯಾಣಿಕರು ಬರುವ ಮೊದಲೇ ವಿಮಾನ ಟೇಕ್​ ಆಫ್, ಟ್ವಿಟರ್ ನಲ್ಲಿ ಪ್ರಯಾಣಿಕರ ಆಕ್ರೋಶ !

10-01-23 06:09 pm       Bangalore Correspondent   ಕರ್ನಾಟಕ

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋಫಸ್ಟ್ ಸಂಸ್ಥೆಯ ವಿಮಾನ 54 ಪ್ರಯಾಣಿಕರನ್ನ ಬಿಟ್ಟು ಟೇಕ್​ ಆಫ್​ ಆಗಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಸೋಷಿಯಲ್​​ ಮೀಡಿಯಾದಲ್ಲಿ ವಿಮಾನ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಜ.10: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋಫಸ್ಟ್ ಸಂಸ್ಥೆಯ ವಿಮಾನ 54 ಪ್ರಯಾಣಿಕರನ್ನ ಬಿಟ್ಟು ಟೇಕ್​ ಆಫ್​ ಆಗಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಸೋಷಿಯಲ್​​ ಮೀಡಿಯಾದಲ್ಲಿ ವಿಮಾನ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ G8-116 ಎಂಬ ಗೋಫಸ್ಟ್ ಕಂಪನಿಯ ವಿಮಾನದಲ್ಲಿ ಮೊದಲ ಬಾರಿಗೆ ಬಸ್​ನಲ್ಲಿ ಬಂದ 50 ಪ್ರಯಾಣಿಕರು ಕುಳಿತ್ತಿದ್ದರು. ಬಳಿಕ ಬಸ್​ನಲ್ಲಿ 2ನೇ ಟ್ರಿಪ್​ನಲ್ಲಿ ಬರುತ್ತಿದ್ದ 54 ಪ್ರಯಾಣಿಕರು ಬರುವ ಮೊದಲೇ ವಿಮಾನ ಟೇಕ್​ ಆಫ್ ಆಗಿದೆ.

ಹೀಗಾಗಿ ಪ್ರಯಾಣಿಕರು ಏರ್​ಲೈನ್ಸ್​ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೇವನಹಳ್ಳಿ ಏರ್​ಪೋರ್ಟ್​ನಲ್ಲೇ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಗೋಫಸ್ಟ್ ಹಾಗೂ ಡಿಜಿಸಿಎಗೆ ಪ್ರಯಾಣಿಕರು ಟ್ವಿಟ್​ ಟ್ಯಾಗ್​ ಮಾಡಿದ್ದರು. ಈ ಟ್ವಿಟ್​ಗೆ ಸ್ಪಂದಿಸಿದ ಗೋಫಸ್ಟ್ ಸಂಸ್ಥೆ, ಪ್ರಯಾಣಿಕರ ಡೀಟೈಲ್ಸ್ ಪಡೆದುಕೊಂಡು ಕ್ಷಮೆ ಕೇಳಿದೆ.

Aviation regular directorate general of civil aviation (DGCA), on Tuesday, issued a show cause notice to low-cost airline Go First for leaving behind 54 passengers that were to board G8 116 to Delhi, on the passenger coach at Bengaluru airport on Monday.