ಬ್ರೇಕಿಂಗ್ ನ್ಯೂಸ್
10-01-23 10:51 pm HK News Desk ಕರ್ನಾಟಕ
ಮೈಸೂರು, ಜ.10: ಸದ್ಯ ರಾಜ್ಯ ಸರ್ಕಾರದ ಕುತ್ತಿಗೆ ಹಿಡಿದುಕೊಂಡಿರುವ ರಾಜಕಾರಣಿಗಳ ಸೆಕ್ಸ್ ದಂಧೆಯ ರೂವಾರಿ ಸ್ಯಾಂಟ್ರೋ ರವಿ ಕಳೆದ 20 ವರ್ಷಗಳಿಂದಲೂ ತನ್ನ ಮಾರುವೇಷದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಜೊತೆಗೆ ಶಾಮೀಲಾಗಿದ್ದಾನೆ ಅನ್ನೋ ವಿಚಾರ ಬಯಲಾಗಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸ್ಯಾಂಟ್ರೋ ರವಿಯದ್ದು 20 ವರ್ಷಗಳ ಇತಿಹಾಸ ಇದೆ, ಎಲ್ಲರ ಜೊತೆಗೂ ಆತನ ನಂಟಿದೆ, ಅದನ್ನು ಹೊರಗೆ ತರಲಾಗುವುದು ಎಂದಿದ್ದಾರೆ.
ಈಗಲೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಆತನ ಲೊಕೇಶನ್ ಮೈಸೂರಿನಲ್ಲಿಯೇ ತೋರಿಸ್ತಿದೆ. ಹೀಗಾಗಿ ಆತ ಮೈಸೂರು ಹೊರವಲಯದಲ್ಲಿ ಖಾಸಾ ದೋಸ್ತ್ ಹೊಂದಿರುವ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಡಗಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸಿಮ್ ತೆಗೆದಿಟ್ಟು ಕೇವಲ ವಾಟ್ಸಪ್ ಕಾಲ್ ಮತ್ತು ಮೆಸೇಜ್ ಗಳ ಮೂಲಕ ನಿಕಟವರ್ತಿಗಳ ಜೊತೆ ಸಂಪರ್ಕದಲ್ಲಿದ್ದಾನೆ. ಕೋರ್ಟಿನಲ್ಲಿ ಜಾಮೀನು ಸಿಗೋ ವರೆಗೂ ಇದೇ ರೀತಿ ಕಾಲ ತಳ್ಳುವುದು ಅಥವಾ ನೇರ ಶರಣಾಗತಿ ಆಗೋದು ಇವರೆಡರಲ್ಲಿ ಒಂದನ್ನು ಮಾಡುವ ಬಗ್ಗೆ ಪ್ಲಾನ್ ಹಾಕಿದ್ದಾನೆ ಎನ್ನಲಾಗುತ್ತಿದೆ.
ಹತ್ತಾರು ಮದುವೆ, ಫುಲ್ ಟೈಮ್ ದಂಧೆ
ರವಿ ಅಲಿಯಾಸ್ ಮಂಜುನಾಥನ ಕಾಮ ಪುರಾಣ ಬಯಲಾಗುತ್ತಿದ್ದಂತೆ ಆತ ಒಂದಲ್ಲ, ಎರಡಲ್ಲ ಲೆಕ್ಕ ಇಲ್ಲದಷ್ಟು ಹುಡುಗಿಯರನ್ನು ಮದುವೆಯಾಗಿದ್ದಾನೆ ಎನ್ನುವ ಮಾಹಿತಿಗಳೂ ಹೊರಬೀಳುತ್ತಿವೆ. ಮೊಟ್ಟಮೊದಲಿಗೆ ಮಂಡ್ಯದಲ್ಲಿ ಅಪ್ರಾಪ್ತ ಹುಡುಗಿಯನ್ನು ಮದುವೆಯಾಗಿದ್ದ ಆಕೆಯನ್ನು ಬೇರೆ ವ್ಯಕ್ತಿಗಳ ಜೊತೆ ಮಲಗಲು ಸೂಚಿಸಿ, ಆನಂತರ ಕೈಬಿಟ್ಟಿದ್ದ. ಅದೇ ರೀತಿ ಹೋದಲ್ಲಿ ಬಂದಲ್ಲಿ ಹುಡುಗಿಯರನ್ನು ಪ್ರೀತಿಸುವ ನೆಪದಲ್ಲಿ ದೇವಸ್ಥಾನಗಳಲ್ಲಿ ಮದುವೆಯಾಗುತ್ತಿದ್ದ. ಎಲ್ಲಿಯೂ ಮದುವೆಯಾದ ಬಗ್ಗೆ ದಾಖಲೆ ಇಟ್ಟುಕೊಂಡಿಲ್ಲ. ಮದುವೆಯಾಗಿ ಒಂದಷ್ಟು ದಿನ ಜೊತೆಗಿದ್ದು ಆನಂತರ ಅವರನ್ನು ಪುಸಲಾಯಿಸಿ ಬೇರೆ ವ್ಯಕ್ತಿಗಳ ಜೊತೆ ಮಲಗುವಂತೆ ಪ್ರೇರೇಪಿಸುತ್ತಿದ್ದ. ಇದಕ್ಕೆ ಒಪ್ಪಿದವರನ್ನು ಒಂದಷ್ಟು ದಿನ ಇಟ್ಟುಕೊಳ್ಳುತ್ತಿದ್ದ. ನಿರಾಕರಿಸಿದವರನ್ನು ಅರ್ಧ ದಾರಿಯಲ್ಲೇ ಬಿಟ್ಟು ಕಳುಹಿಸುತ್ತಿದ್ದ. ಈತನಿಗೆ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಸರಕಾರದ ಅಧಿಕಾರಿಗಳು, ರಾಜಕಾರಣಿಗಳ ನಂಟು ಇದ್ದುದರಿಂದ ಹುಡುಗಿ ಕಡೆಯವರು ದೂರು ಕೊಡಲು ಹಿಂಜರಿಯುತ್ತಿದ್ದರು. ದೂರು ಕೊಡಲು ಮುಂದಾದ ಹುಡುಗಿಯರನ್ನು ಹೆದರಿಸಿ, ಬಾಯಿ ಮುಚ್ಚಿ ಕುಳಿತುಕೊಳ್ಳುವಂತೆ ಮಾಡುತ್ತಿದ್ದ. ಸದ್ಯಕ್ಕೆ ಆತನ ಮೂರನೇ ಪತ್ನಿ ಜೊತೆಗಿದ್ದಾಳೆ ಎನ್ನಲಾಗುತ್ತಿದ್ದು, ಆಕೆಗೆ 16 ವರ್ಷದ ಮಗ ಮತ್ತು ಇನ್ನೊಬ್ಬ ಮಗಳು ಕಾಲೇಜು ಓದುತ್ತಿದ್ದಾಳೆ. ಸ್ಯಾಂಟ್ರೋ ರವಿಯ ಎಲ್ಲ ವ್ಯವಹಾರಕ್ಕೂ ಮೂರನೇ ಹೆಂಡತಿ ಸಾಥ್ ಕೊಟ್ಟಿದ್ದು ಸೆಕ್ಸ್ ದಂಧೆಯನ್ನೂ ಮ್ಯಾನೇಜ್ ಮಾಡುತ್ತಿದ್ದಳು.
ವೈದ್ಯರದ್ದೂ ಗೆಳೆತನ, ಗರ್ಭಪಾತಕ್ಕೆ ಬಳಕೆ
ಇದಲ್ಲದೆ, ಮೈಸೂರಿನಲ್ಲಿ ಕೆಲವು ವೈದ್ಯರನ್ನೂ ಬುಟ್ಟಿಗೆ ಹಾಕ್ಕೊಂಡಿದ್ದ ರವಿ, ಅವರಿಗೆ ಸಾಕಷ್ಟು ಹಣ ಕೊಟ್ಟು ತನ್ನ ದುಷ್ಕೃತ್ಯಗಳಿಗೆ ಬಳಸಿಕೊಳ್ತಿದ್ದ. ಹುಡುಗಿಯರು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಗರ್ಭಿಣಿಯರಾದರೆ, ವೈದ್ಯರಲ್ಲಿ ತೋರಿಸಿ ಗರ್ಭಪಾತ ಮಾಡಿಸಿಕೊಳ್ತಿದ್ದ. ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಠ ಐವರು ಹುಡುಗಿಯರನ್ನು ಮಾತ್ರ ಗರ್ಭಪಾತ ಮಾಡಿಸುತ್ತಿದ್ದ. ತನ್ನ ವ್ಯವಹಾರದ ಬಗ್ಗೆ ಸಂಶಯ ಬಾರದಂತೆ, ಆನಂತರ ಬೇರೊಬ್ಬ ವೈದ್ಯರನ್ನು ಪರಿಚಯ ಮಾಡಿಕೊಂಡು ಅವರಿಂದ ಕೆಲಸ ಮಾಡಿಸುತ್ತಿದ್ದ. ವೈದ್ಯರ ಜೊತೆಗಿನ ಫೋಟೋ ತೆಗೆದು ಸ್ಟೇಟಸ್ ಹಾಕ್ಕೊಳ್ತಿದ್ದ ಈತ, ಆಮೂಲಕ ತನಗೆ ವೈದ್ಯರದ್ದೂ ಕನೆಕ್ಷನ್ ಇದೆಯೆಂದು ತೋರಿಸುತ್ತಿದ್ದ.
ನೂರಾರು ಕೋಟಿ ಒಡೆಯ ಸ್ಯಾಂಟ್ರೋ ರವಿ
ಒಂದು ಕಾಲದಲ್ಲಿ ಸ್ಯಾಂಟ್ರೋ ಕಾರಲ್ಲಿ ಓಡಾಡುತ್ತಿದ್ದ ರವಿ, ಈಗ ಐಷಾರಾಮಿ ಕಾರುಗಳನ್ನು ಹೊಂದಿದ್ದಾನೆ. ಅಷ್ಟೇ ಅಲ್ಲ, ನೂರಾರು ಕೋಟಿ ಆಸ್ತಿಯನ್ನೂ ಗಳಿಸಿದ್ದಾನೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಆಯಕಟ್ಟಿ ಎಲ್ಲ ಹಂತದ ಪ್ರಮುಖರಿಗೂ ಹುಡುಗಿಯರನ್ನು ಸಪ್ಲೈ ಮಾಡಿ ಬುಟ್ಟಿಗೆ ಹಾಕ್ಕೊಳ್ತಿದ್ದ ಖದೀಮ ಅವರಿಂದಲೇ ಹಣ ಪೀಕಿಸಿಕೊಂಡು ನೂರಾರು ಕೋಟಿ ಗಳಿಸಿದ್ದಾನೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ವಿಲ್ಸನ್ ಗಾರ್ಡನ್ ಸೇರಿ ಐದು ಐಷಾರಾಮಿ ಮನೆ ಹೊಂದಿದ್ದಾನೆ. ಒಂದು ಮನೆಯನ್ನು ವಾಸಕ್ಕೆ ಇಟ್ಟುಕೊಂಡು ಉಳಿದವನ್ನು ಬಾಡಿಗೆ ಕೊಟ್ಟು ಲಕ್ಷಾಂತರ ರೂಪಾಯಿ ತಿಂಗಳಿಗೆ ಬಾಡಿಗೆ ಪಡೆಯುತ್ತಾನೆ. ಮೈಸೂರಿನ ದಟ್ಟಗಳ್ಳಿ, ಶ್ರೀರಾಮಪುರ, ವಿಜಯನಗರದಲ್ಲೂ ಮನೆ, ಆಸ್ತಿ ಮಾಡಿಕೊಂಡಿದ್ದಾನೆ. ಮೂರನೇ ಪತ್ನಿಯ ಹೆಸರಲ್ಲೂ ಸಾಕಷ್ಟು ಆಸ್ತಿ ಮಾಡಿದ್ದಾನೆ. ಆಸ್ತಿಯ ಕಾರಣಕ್ಕೆ ಲಕ್ಷಾಂತರ ರೂಪಾಯಿ ಆದಾಯ ತೆರಿಗೆಯನ್ನೂ ಕಟ್ಟುತ್ತಿದ್ದಾನೆ. ಇದರೊಂದಿಗೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾನೆ.
ಹುಡುಗಿಯರಿಗೆ ಐಷಾರಾಮಿ ಕಾರಿನ ಕೋಡ್ ಸನ್ನೆ
ಬೆಂಗಳೂರು ಹೊರವಲಯದಲ್ಲಿ ವಿಲ್ಲಾಗಳನ್ನು ಹೊಂದಿದ್ದು, ಅಲ್ಲಿಯೇ ಸುಂದರಿಯರನ್ನು ಮುಂದಿಟ್ಟು ರಾಜಕಾರಣಿಗಳನ್ನು ಬಲಿಗೆ ಹಾಕುತ್ತಿದ್ದ. ಐಎಎಸ್, ಐಪಿಎಸ್ ಅಧಿಕಾರಿಗಳನ್ನೂ ಈತ ಬಲೆಗೆ ಹಾಕಿದ್ದು, ಸ್ಯಾಂಟ್ರೋ ರವಿಯ ರಾಜಾತಿಥ್ಯ ಪಡೆಯದವರೇ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳಿಗೆ ಹುಡುಗಿಯರನ್ನು ಪೂರೈಕೆ ಮಾಡುವ ವಿಚಾರದಲ್ಲಿ ಐಷಾರಾಮಿ ಕಾರುಗಳ ಹೆಸರಲ್ಲಿ ಕೋಡ್ ವರ್ಡ್ ಇಟ್ಕೊಂಡಿದ್ದ. ಇವತ್ತೊಂದು ಜಾಗ್ವಾರ್ ಇದೆ, ಬೇಕಿದ್ರೆ ಇಂಥ ಪ್ಲೇಸಲ್ಲಿ ರೆಡಿಯಿದೆ ಎಂದು ಮೆಸೇಜ್ ಮಾಡುತ್ತಿದ್ದ. ಜಾಗ್ವಾರ್, ಆಡಿ ಹೀಗೆ ಐಷಾರಾಮಿ ಕಾರುಗಳ ಹೆಸರೇ ಹುಡುಗಿಯರ ಕೋಡ್ ವರ್ಡ್ ಆಗಿತ್ತು.
ಇದೇ ವೇಳೆ ಸ್ಯಾಂಟ್ರೋ ರವಿಯ ಆದಾಯ ಮೂಲದ ಬಗ್ಗೆ ತನಿಖೆ ನಡೆಸುವಂತೆ ಮೈಸೂರಿನ ಒಡನಾಡಿ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸ್ಯಾಂಟ್ರೋ ರವಿ ಹೆಸರನ್ನು ಮುಂದಿಟ್ಟು ಪ್ರತಿಪಕ್ಷಗಳ ನಾಯಕರು ಆಡಳಿತಾರೂಢ ಬಿಜೆಪಿ ನಾಯಕರನ್ನು ಜಗ್ಗಾಡುತ್ತಿರುವುದರಿಂದ ಪ್ರಕರಣದ ತನಿಖೆಗಾಗಿ ಮೈಸೂರು ಮತ್ತು ಬೆಂಗಳೂರು ಪೊಲೀಸರನ್ನು ಒಳಗೊಂಡು ಆರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಮಂಡ್ಯ, ರಾಮನಗರ, ಮೈಸೂರು ಹಾಗೂ ಬೆಂಗಳೂರು ಹೊರ ವಲಯದಲ್ಲಿ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Santro ravi case, sex business since 20 years, supply of girls to businessmen and prostitutions. Santro Ravi is said to be crorepathi and is said to be involved in sex trafficking and prostitution business.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm