ಅಪ್ರಾಪ್ತ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ; ಬಿಜೆಪಿ ಕಾರ್ಯಕರ್ತನ ಲವ್ ದೋಖಾ, ಕಿರುಕುಳ, ಕೇಸ್​ ದಾಖಲಿಸಿಕೊಳ್ಳದ ಪೊಲೀಸ್ರಿಗೆ SP ಕ್ಲಾಸ್..!

16-01-23 11:31 am       HK News Desk   ಕರ್ನಾಟಕ

ಅಪ್ರಾಪ್ತ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಚಿಕ್ಕಮಗಳೂರು, ಜ.16: ಅಪ್ರಾಪ್ತ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಆತ್ಮಹತ್ಯೆಗೆ ಕಾರಣ ?

ಸಾವಿಗೆ ಶರಣಾಗಿರುವ ವಿದ್ಯಾರ್ಥಿನಿ ದೀಪ್ತಿ, ಬಿಜೆಪಿ ಕಾರ್ಯಕರ್ತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಬಿಜೆಪಿ ಕಾರ್ಯಕರ್ತ ನಿತೇಶ್ (25) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ . ಹಿತೇಶ್ ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಡೆತ್​ನೋಟ್​ನಲ್ಲಿ ಆರೋಪಿಸಿದ್ದಾಳೆ.

ಜನವರಿ 10 ರಂದು ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿದ್ದಳು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಜನವರಿ 14ರಂದು  ಚಿಕಿತ್ಸೆ ಫಲಿಸದೆ ದೀಪ್ತಿ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ದೂರು ನೀಡಲು ಹೋದರರೆ ಕುದುರೆಮುಖ ಪೊಲೀಸರು ಸ್ವೀಕರಿಸಿಲ್ಲ ಎನ್ನಲಾಗಿದೆ. ಇದರಿಂದ ನೊಂದ ಪೋಷಕರು, ಎಸ್​ಪಿ ಉಮಾಪ್ರಶಾಂತ್ ಮೊರೆ ಹೋಗಿದ್ದಾರೆ. ಕೊನೆಗೆ ಕುದುರೆಮುಖ ಪೊಲೀಸರಿಗೆ ಎಸ್​ಪಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ತೀವ್ರ ತರಾಟೆ ಬಳಿಕ ಪೊಲೀಸರು ನಿತೇಶ್ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

The suicide case of a minor girl in Chikkamagaluru district took a curious turn with the police recovering her death note in which she blamed a BJP worker. The victim has been identified as a 17-year-old student, studying at a Pre-University college. She died on Saturday in a hospital. She had written a suicide note before breathing last.