ಸಚಿವ ಸಂಪುಟ, ಪಕ್ಷ ಎರಡರಲ್ಲೂ ಬದಲಾವಣೆ ನಿರೀಕ್ಷೆ ; ಸಿಪಿ ಯೋಗೀಶ್ವರ್ ಹೇಳಿಕೆ 

16-01-23 08:01 pm       Bangalore Correspondent   ಕರ್ನಾಟಕ

ಸಂಕ್ರಾಂತಿ ನಂತರ ರಾಜ್ಯ ಸಚಿವ ಸಂಪುಟ ಹಾಗೂ ಪಕ್ಷ ಎರಡರಲ್ಲೂ ಬದಲಾವಣೆಯ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರವೇ ಅಂತಿಮ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಬೆಂಗಳೂರು, ಜ.16 : ಸಂಕ್ರಾಂತಿ ನಂತರ ರಾಜ್ಯ ಸಚಿವ ಸಂಪುಟ ಹಾಗೂ ಪಕ್ಷ ಎರಡರಲ್ಲೂ ಬದಲಾವಣೆಯ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರವೇ ಅಂತಿಮ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಮುಖ್ಯಮಂತ್ರಿ ಅವರಿಗೂ ಸಂಪುಟ ವಿಸ್ತರಣೆಯ ಆಸೆ ಇದೆ. ಈಗಿನ ಸಂಪುಟ ಪರಿ‍ಪೂರ್ಣವಾಗಿಲ್ಲ ಎಂಬುದು ಗೊತ್ತಿದೆ. ಈ ವಿಚಾರದಲ್ಲಿ ಅಂತಿಮ ಪ್ರಯತ್ನ ನಡೆಯುತ್ತಿದೆ. ಮುಂದಿನದ್ದು ವರಿಷ್ಠರಿಗೆ ಬಿಟ್ಟ ತೀರ್ಮಾನ ಎಂದರು. ಹಳೇ ಮೈಸೂರು ಭಾಗದಲ್ಲಿ ಇಷ್ಟು ವರ್ಷ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷಕ್ಕೆ ಹಿನ್ನಡೆ ಆಗಿತ್ತು. ಇದೆಲ್ಲ ಪಕ್ಷದ ವರಿಷ್ಠರ ಗಮನಕ್ಕೆ ಹೋಗಿದೆ. ಬೆಂಗಳೂರು ಸುತ್ತಮುತ್ತ ಯಾಕೆ ಬಿಜೆಪಿ ಬೆಳೆದಿಲ್ಲ ಎಂಬುದರ ಕುರಿತು ಪಕ್ಷದ ನಾಯಕರಿಗೆ ಗೊತ್ತಾಗಿದೆ. ಹೊಂದಾಣಿಕೆ ರಾಜಕೀಯದ ಕುರಿತು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು. ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಈ ಭಾಗದ ಮುಖಂಡರಲ್ಲಿ ಮನವಿ ಮಾಡಿದ್ದೇವೆ. ಸುಮಲತಾ ಅವರಿಗೂ ಮನವಿ ಮಾಡಿದ್ದೇವೆ ಎಂದರು.

ಅಧಿಕೃತ ಮಾತನಾಡಿಲ್ಲ, ವೈಯಕ್ತಿಕ ವಿಚಾರ 

ತಮ್ಮ ಆಡಿಯೋ ಬಹಿರಂಗ ವಿಚಾರದಲ್ಲಿ ಪ್ರತಿಕ್ರಿಯಿಸಿದ ಯೋಗೀಶ್ವರ್ ' ನಾನು ಅಧಿಕೃತವಾಗಿ ಎಲ್ಲಿಯೂ ಮಾತನಾಡಿಲ್ಲ. ಖಾಸಗಿಯಾಗಿ ಮಾತನಾಡಿದ್ದ ವಿಚಾರ ಇರಬಹುದು. ವೈಯಕ್ತಿಕವಾಗಿ, ಸ್ವಾಭಾವಿಕವಾಗಿ ಮಾತನಾಡಿರೋದನ್ನು ಮಾಧ್ಯಮಗಳು ಬಿತ್ತರಿಸಿವೆ' ಎಂದು ಸ್ಪಷ್ಟನೆ ನೀಡಿದರು.

CP Yogeshwars says rectification expected in Karnataka Cabinet.