ಬ್ರೇಕಿಂಗ್ ನ್ಯೂಸ್
18-01-23 10:15 pm Bangalore Correspondent ಕರ್ನಾಟಕ
ಬೆಂಗಳೂರು, ಜ.18 : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳಿದ್ದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ಜೊತೆಗೆ ಕುಳಿತು ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಉಭಯ ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದ್ದು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಬಿಎಸ್ ಯಡಿಯೂರಪ್ಪ ಅವರ ಜನಪ್ರಿಯತೆ ಬಳಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ಅಧಿಕಾರದಲ್ಲಿರಲಿ, ಇಲ್ಲದಿರಲಿ, ಕರ್ನಾಟಕದ ಬಿಜೆಪಿ ಮಟ್ಟಿಗೆ ಬಿಎಸ್ವೈ ಅವರೇ ಪರಮೋಚ್ಛ ನಾಯಕ ಎಂಬುದು ಕಳೆದ ಹಲವು ಚುನಾವಣೆಗಳಲ್ಲಿ ಸಾಬೀತಾಗಿತ್ತು. ಇದೇ ಕಾರಣಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಅವರನ್ನೇ ನೆಚ್ಚಿಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ಕರ್ನಾಟಕಕ್ಕೆ ಮೋದಿ ಮತ್ತು ಅಮಿತ್ ಶಾ ಭೇಟಿ ನೀಡಿದ ವೇಳೆ ಯಡಿಯೂರಪ್ಪ ನೇಪಥ್ಯಕ್ಕೆ ಸರಿದಿದ್ದು ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿತ್ತು. ಇದರಿಂದ ಯಡಿಯೂರಪ್ಪ ಬೆಂಬಲಿಗರು ಸಿಟ್ಟಾಗಿದ್ದರು. ಈ ರೀತಿಯಾದರೆ ಚುನಾವಣೆಯಲ್ಲಿ ಬಿಜೆಪಿ ಸ್ಥಿತಿ ಹೀನಾಯ ಆಗುವುದರಲ್ಲಿ ಸಂಶಯವಿಲ್ಲ ಎಂದು ಮೂಗು ಮುರಿದಿದ್ದರು. ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಲೀ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಾಗಲೀ ಸಾಧ್ಯವಿಲ್ಲ ಎಂಬುದನ್ನೂ ಹೇಳುತ್ತಿದ್ದರು. ಹಾಗಿದ್ದರೂ ಯಡಿಯೂರಪ್ಪ ವಿರೋಧಿ ಬಣ ಹಿಂದುತ್ವ ಆಧಾರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿತ್ತು. ಆದರೆ ಸದ್ಯ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವುದು, ಆಡಳಿತ ವಿರೋಧಿ ಅಲೆ ಏಳುವ ಆತಂಕ, ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿರುವುದು, ರಾಜ್ಯ ರಾಜಕೀಯದಲ್ಲಿ ಕಳೆದ 37 ವರ್ಷಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದು ಮತ್ತೊಮ್ಮೆ ಅಧಿಕಾರಕ್ಕೇರಿದ ಉದಾಹರಣೆ ಇಲ್ಲದಿರುವುದು, ಇತ್ತೀಚಿನ ಹಲವು ಚುನಾವಣೆಗಳಲ್ಲಿ ಯಡಿಯೂರಪ್ಪ ಮಾತ್ರ ಬಿಜೆಪಿ ಅಸ್ತ್ರ ಆಗಿರುವುದು, ರಾಜ್ಯ ಇತಿಹಾಸದಲ್ಲಿ ಬಿಜೆಪಿ ಈವರೆಗೂ ಬಹುಮತ ಗಳಿಸದೇ ಇರುವುದು ಇತ್ಯಾದಿ ವಿಚಾರಗಳು ರಾಜ್ಯವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿದೆ.
ಹೀಗಾಗಿ ಯಡಿಯೂರಪ್ಪ ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತಂದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸುವಂತೆ ಮಾಡುವ ಚಿಂತನೆ ಕೇಂದ್ರ ನಾಯಕರಲ್ಲಿದೆ. ಈ ಬಗ್ಗೆ ಹಲವು ಶಾಸಕರು ಕೇಂದ್ರ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ, ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕವು ಯಡಿಯೂರಪ್ಪ ಇಲ್ಲದೆ ಎಂದಿಗೂ ಚುನಾವಣೆ ಎದುರಿಸಿದ್ದಿಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಕಾರ್ಯತಂತ್ರಗಳಿಲ್ಲದೆ, ಪವಾಡವನ್ನು ನಿರೀಕ್ಷಿಸುವುದು ಕಷ್ಟ ಎನ್ನುವುದು ನಾಯಕರಿಗೂ ಅರಿವಿಗೆ ಬಂದಿದೆ. ಈವರೆಗೂ ಯಡಿಯೂರಪ್ಪ ವಿರುದ್ಧ ವಿರೋಧಿ ಗುಂಪು ಪಕ್ಷ ಮತ್ತು ಸರ್ಕಾರದಲ್ಲಿ ಹಿಡಿತ ಸಾದಿಸಿತ್ತು. ಇದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಆದರೆ ಆ ಗುಂಪಿನ ಹಿಂದುತ್ವ ಕಾರ್ಡ್ ಪ್ರಯೋಗ ನಿರೀಕ್ಷಿತ ಫಲಿತಾಂಶ ದೊರಕಿಸದು ಎಂಬುದನ್ನು ಅರ್ಥ ಮಾಡಿಕೊಂಡ ಬಿಜೆಪಿ ಹೈಕಮಾಂಡ್, ಚುನಾವಣೆ ಎದುರಿಸಲು ಯಡಿಯೂರಪ್ಪ ಅವರನ್ನೇ ನೆಚ್ಚಿಕೊಳ್ಳಲು ಮುಂದಾಗಿದೆ. ಪ್ರಧಾನಿ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ನಡುವಿನ ಮಾತುಕತೆ ಹಲವು ವಿಚಾರದಲ್ಲಿ ಮಹತ್ವ ಪಡೆದಿದ್ದು ಬಿಎಸ್ವೈ ಇಲ್ಲದೇ ರಾಜ್ಯ ಬಿಜೆಪಿ ಇಲ್ಲ ಎಂಬ ಬೆಂಬಲಿಗರ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
Prime Minister Narendra Modi had a 15-minute meeting with Karnataka's former Chief Minister BS Yediyurappa on Monday on the sidelines of the BJP national executive. Karnataka is one of the states going to polls this year. Poll strategy for these nine states was the key agenda of the ongoing two-day executive meet in New Delhi, which is being attended by PM Modi and the key leaders and ministers of the party.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm