ಕಡು ಭ್ರಷ್ಟ ಮಂತ್ರಿ ಇದ್ರೆ ಸುಧಾಕರ್ ಮಾತ್ರ, ಕೊರೊನಾ ಹೆಸರಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾನೆ ; ಸಿದ್ದರಾಮಯ್ಯ 

23-01-23 09:51 pm       HK News Desk   ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್. ನಾನು, ಪರಮೇಶ್ವರ್ ಸುಧಾಕರ್ ಗೆ ಟಿಕೆಟ್ ಕೊಟ್ಟು ಪಶ್ಚಾತ್ತಾಪ ಪಡ್ತಿದ್ದೇವೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷದ ಸಚಿವರ ವಿರುದ್ಧ ಮಾತಾಡ್ತಾನೆ.

ಚಿಕ್ಕಬಳ್ಳಾಪುರ, ಜ.23 : ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್. ನಾನು, ಪರಮೇಶ್ವರ್ ಸುಧಾಕರ್ ಗೆ ಟಿಕೆಟ್ ಕೊಟ್ಟು ಪಶ್ಚಾತ್ತಾಪ ಪಡ್ತಿದ್ದೇವೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷದ ಸಚಿವರ ವಿರುದ್ಧ ಮಾತಾಡ್ತಾನೆ. ಆತ ಡಾಕ್ಟರ್ ಓದಿದ್ದಾನಾ, ಕಾಪಿ ಮಾಡಿದ್ದಾನೋ ಗೊತ್ತಿಲ್ಲ. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಅಂತ ಇದ್ರೆ ಅದು‌ ಸುಧಾಕರ್ ಮಾತ್ರ. ಕೊರೊನಾ ಹೆಸರಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾನೆ. ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 

ಚಿಕ್ಕಬಳ್ಳಾಪುರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಶಾಸಕನಾಗಿದ್ದಾಗ ಭ್ರಷ್ಟಾಚಾರದ‌ ಬಗ್ಗೆ ಮಾತಾಡಿದ್ನಾ..ಸಿದ್ದರಾಮಯ್ಯ ರೀಡೂ ಮಾಡಿದ್ದಾರೆ ಅಂತ ಹೇಳ್ತಾನೆ. ಅದನ್ನ ನಾವು ಮಾಡಿದ್ದಲ್ಲ. ಕೋರ್ಟ್ ಮಾಡಿದ್ದು. ಆರೋಗ್ಯ ಸಚಿವರಾಗಿ ಕೊರೋನಾ ಸಂದರ್ಭದಲ್ಲಿ ಮಾಸ್ಕ್, ವೆಂಟಿಲೇಟರ್, ಆಕ್ಸಿಜನ್ ಹೆಸರಲ್ಲಿ 2000 ಸಾವಿರ ಕೋಟಿ ಲಂಚ ಹೊಡೆದಿದ್ದಾನೆ ಅಂತ ದಾಖಲೆ ಕೊಟ್ರೆ ಬಾಯಿ ಬಿಡಲಿಲ್ಲ. ಚಾಮರಾಜನಗರ ನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 36 ಜನ ಸತ್ರು. ಆದರೆ ಜನ ಸತ್ರೂ ಇವ ಸುಳ್ಳು ಹೇಳಿ ಬರೇ ಮೂರು ಜನ ಸತ್ತಿದ್ದು ಅಂತ ಹೇಳಿದ್ದ.‌ ಆಕ್ಸಿಜನ್ ಕೊಟ್ಟಿದ್ರೆ ಅಲ್ಲಿ 36 ಜನ ಬದುಕುತ್ತಿದ್ರು. ಅಲ್ಲಿನ ಆಡಳಿತವೇ ಹೇಳಿದೆ 36 ಜನ ಸತ್ರು ಅಂತ. ಕೊನೆಗೆ ಅವರ ಮನೆಗಳಿಗೆ ಸಾಂತ್ವನ ಹೇಳೋಕೂ ಹೋಗಲಿಲ್ಲ. ಪರಿಹಾರ ಕೊಡಲಿಲ್ಲ.

Siddaramaiah backs DKS, accuses BJP of twisting statement | Deccan Herald

ರಾಜ್ಯದಲ್ಲಿ ಕೊರೊನಾಗೆ 4.5 ಲಕ್ಷ ಜನ ಸತ್ರೂ ಇವರು ಪರಿಹಾರ ಕೊಡಲಿಲ್ಲ. ಆರೋಗ್ಯ ಮಂತ್ರಿ‌ ಆಗೋಕೆ ಯೋಗ್ಯತೆ ಇಲ್ಲದ ವ್ಯಕ್ತಿ ಸುಧಾಕರ್. ಆಪರೇಷನ್ ಕಮಲಕ್ಕೊಳಗಾಗಬೇಡ ಅಂತ ನಾನು‌ ಮಧ್ಯರಾತ್ರಿ ಪರಿಪರಿಯಾಗಿ ಹೇಳಿದೆ. ಆದರೆ ಬೆಳಿಗ್ಗೆನೇ ಬಾಂಬೆಗೆ ಹೋಗ್ಬಿಟ್ಟ. ಇವನು ಭ್ರಷ್ಟಾಚಾರದ‌ ಬಗ್ಗೆ ಮಾತಾಡ್ತಾನಾ.. ನಮ್ಮ ಕಾಲದಲ್ಲಿ ಮತ್ತು ನಿಮ್ಮ ಕಾಲದಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಬಗ್ಗೆ ಮಾತಾಡ್ತಿಯಾ, ನಮ್ಮ ಜೊತೆಗೆ ಇದ್ದಾಗ ಗಂಟಲಲ್ಲಿ‌ ಕಡಬು ಸಿಕ್ಕಾಕ್ಕೊಂಡಿತ್ತಾ.. ಔಷಧ ಹಗರಣ ಸೇರಿ ಬಿಜೆಪಿ ಭ್ರಷ್ಟಾಚಾರಗಳು ಬಯಲಾಗಬೇಕು. ಅಧಿಕಾರದಲ್ಲಿರಲು ಈತ ನಾಲಾಯಕ್ಕು. ಅಧಿಕಾರಕ್ಕಾಗಿ‌ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದವರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರೇ ಸುಧಾಕರ್ ಫ್ರಾಡ್ ಅಂತ ಹೇಳಿದ್ದರು. ನಾನು ಕೇಳಲಿಲ್ಲ. ಆಂಜಿನಪ್ಪಗೆ ಅನ್ಯಾಯ ಮಾಡಿದೆ.

There cannot be a parallel Congress': Veerappa Moily on G-23 leaders  holding frequent parleys- The New Indian Express

ಈ ಬಾರಿ ಸುಧಾಕರ್ ಸೋಲಿಸೋರನ್ನ ನಿಲ್ಲಿಸಿರಯ್ಯ... ಕೊತ್ತೂರು ಮಂಜುನಾಥ್, ಎಲ್ಲರೂ ನಿನ್ನ‌ ಹೆಸರೇ ಹೇಳ್ತಾರಲ್ಲಯ್ಯ. ನೀವೆಲ್ಲ ಯಾರ ಹೇಸರೇಳ್ತಿರೋ ಅವರಿಗೆ ಟಿಕೆಟ್ ಕೊಡ್ತೀವಿ ಎಂದು ಹೇಳಿದ ಸಿದ್ದರಾಮಯ್ಯ, 40% ಲಂಚ‌ ಪಡೆಯೋ ಇವರು ಕಮೀಷನ್ ಪಡೆಯಲ್ಲ ಅಂತಾರೆ. ಮತ್ತೆ ಎಡಿಜಿಪಿ‌ ಯಾಕೆ ಜೈಲಿಗೆ ಹೋದ. ಇಲ್ಲಿನ ಕ್ವಾರಿಯವರು ಸುಧಾಕರ್ ಗೆ ಮಂತ್ಲಿ ಕೊಡಬೇಕಂತೆ. ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ, ಎತ್ತಿನಹೊಳೆ ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್, ಸುಧಾಕರ್ ಮಾಡಿದ್ನಾ. ಲೂಟಿ ಮಾಡಿದ್ದೇ ಸುಧಾಕರ್ ಕೆಲಸ. 

Karnataka Speaker | KR Ramesh Kumar: Karnataka Speaker, a jovial arbiter,  finds himself in unfamiliar terrain

India's first 2 Omicron cases in Karnataka: CM Bommai to chair a meeting  today | Mint

2013ರಲ್ಲಿ‌ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ರಚಿಸಿತ್ತು. 165 ಆಶ್ವಾಸನೆ ಕೊಟ್ಟು 158 ಭರವಸೆಗಳನ್ನು ಈಡೇರಿಸಿದ್ದೇವೆ. ನಾನು ಅನೇಕ ಸಾರಿ‌ ಬಿಜೆಪಿಯಯವರಿಗೆ ಆಹ್ವಾನ ನೀಡಿದ್ದೇನೆ. 2018ರಲ್ಲಿ  ಬಿಜೆಪಿ 600 ಭರವಸೆಗಳನ್ನು ನೀಡಿದ್ದರು, ಚರ್ಚೆಗೆ ಬನ್ನಿ ಅಂತ ಸವಾಲ್. ಧಮ್ಮಿದ್ದರೆ, ತಾಕತ್ ಇದ್ರೆ ವೇದಿಕೆಗೆ ಬನ್ನಿ ಚರ್ಚೆ ಮಾಡೋಣ ಬಸವರಾಜ ಬೊಮ್ಮಾಯಿಗೆ ಧಮ್ಮು, ತಾಕತ್ ಇಲ್ಲ ಎಂದು ಮೂದಲಿಸಿದರು.

Most corrupted minister in the state is Sudhakar slams Siddaramaiah.