ಕೆಆರ್ ಮಾರುಕಟ್ಟೆ ಫ್ಲೈಓವರಲ್ಲಿ ಹಣದ ಸುರಿಮಳೆ ; ಕಂತೆ ಕಂತೆ ನೋಟಿನ ರಾಶಿಯನ್ನು ಎಸೆಯುತ್ತಾ ಹೋದ ವ್ಯಕ್ತಿ..!

24-01-23 05:44 pm       Bangalore Correspondent   ಕರ್ನಾಟಕ

ಆಕಾಶದಿಂದ ಹಣದ ಮಳೆ ಸುರಿಯುತ್ತಾ ಎಂದು ಜನ ಕೇಳೋದು ಕೇಳಿರಬಹುದು. ಆದರೆ, ಲಾಲ್ ಬಾಗ್ ಬಳಿಯ ಕೆ.ಆರ್ ಮಾರುಕಟ್ಟೆ ಎದುರಿನ ಫ್ಲೈಓವರ್ ನಲ್ಲಿ ಮಂಗಳವಾರ ಬೆಳಗ್ಗೆ ಆಕಾಶದಿಂದ ಹಣದ ಮಳೆ ಸುರಿದ ವಿಲಕ್ಷಣ ಪ್ರಸಂಗ ನಡೆಯಿತು.

ಬೆಂಗಳೂರು, ಜ.24: ಆಕಾಶದಿಂದ ಹಣದ ಮಳೆ ಸುರಿಯುತ್ತಾ ಎಂದು ಜನ ಕೇಳೋದು ಕೇಳಿರಬಹುದು. ಆದರೆ, ಲಾಲ್ ಬಾಗ್ ಬಳಿಯ ಕೆ.ಆರ್ ಮಾರುಕಟ್ಟೆ ಎದುರಿನ ಫ್ಲೈಓವರ್ ನಲ್ಲಿ ಮಂಗಳವಾರ ಬೆಳಗ್ಗೆ ಆಕಾಶದಿಂದ ಹಣದ ಮಳೆ ಸುರಿದ ವಿಲಕ್ಷಣ ಪ್ರಸಂಗ ನಡೆಯಿತು. ವ್ಯಕ್ತಿಯೊಬ್ಬ ಚೀಲದಲ್ಲಿ ತಂದಿದ್ದ ಹಣದ ಕಂತೆಯನ್ನು ಯರ್ರಾಬಿರ್ರಿ ಎಸೆಯುತ್ತಾ ಹೋಗಿದ್ದು ಜನಸಾಮಾನ್ಯರು ನೋಟುಗಳನ್ನು ಹೆಕ್ಕಲು ಮುಗಿಬಿದ್ದಿದ್ದಾರೆ.

ಸೂಟು, ಬೂಟು ಹಾಕ್ಕೊಂಡಿದ್ದ ವ್ಯಕ್ತಿಯೊಬ್ಬ ಚೀಲದಲ್ಲಿ ಹಣದ ಕಂತೆಯನ್ನು ತುಂಬಿಕೊಂಡು ಬಂದು ಕೆಳಭಾಗಕ್ಕೆ ಎಸೆಯುತ್ತಾ ಹೋಗಿದ್ದಾನೆ. ಕೆಲವು ಕಾರ್ಮಿಕರು ಹಣವನ್ನು ನಮಗೆ ಕೊಡಿ, ಯಾಕೆ ಎಸೆಯುತ್ತಿದ್ದೀರಾ ಎಂದು ಕೇಳಿದರೂ, ಆತ ಯಾವುದೇ ಗೊಡವೆಗೂ ಹೋಗಲಿಲ್ಲ. 10, 50, 100, 200 ರೂಪಾಯಿ ನೋಟಿನ ಕಂತೆಯನ್ನು ಹಿಡಿದು ಎಸೆಯುತ್ತಲೇ ಹೋಗಿದ್ದು, ಹಾರಿಬರುತ್ತಿದ್ದ ನೋಟುಗಳನ್ನು ಹಿಡಿಯುವುದೇ ಕೆಳಗಿದ್ದ ಜನರಿಗೆ ಮಜವಾಗಿತ್ತು. ಜೊತೆಗೆ ಅಚ್ಚರಿಯೂ ಆಗಿತ್ತು. ಹಣ ಕೇಳುತ್ತಿದ್ದವರಿಗೆ ಎಲ್ಲರಿಗೂ ಇಂತಹದ್ದೇ ದಿನ ಬರುತ್ತದೆ ಎಂದು ಹೇಳುತ್ತಾ ಮುಂದೆ ಹೋಗುತ್ತಿದ್ದ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆತ ಜಾಗ ಖಾಲಿ ಮಾಡಿದ್ದ.

ಹಣದ ಕಂತೆ ಎಸೆಯುವ ವಿಡಿಯೋ ವೈರಲ್ ಆಗುತ್ತಲೇ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ವಿಡಿಯೋ ಆಧರಿಸಿ ವ್ಯಕ್ತಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಆನಂತರ ಪೊಲೀಸರು ವ್ಯಕ್ತಿಯನ್ನು ಪತ್ತೆ ಮಾಡಿದ್ದು, ವಶಕ್ಕೆ ಪಡೆದಿದ್ದಾರೆ. ನಾಗರಭಾವಿ ನಿವಾಸಿ ಅರುಣ್ ಎಂದು ಪೊಲೀಸರು ಗುರುತಿಸಿದ್ದಾರೆ. ಎದೆಗೆ ದೊಡ್ಡ ಗಡಿಯಾರ ಸಿಕ್ಕಿಸಿಕೊಂಡು ಕೈಯಲ್ಲಿ ಹಣದ ಚೀಲ ಇಟ್ಟುಕೊಂಡು ನೋಟುಗಳನ್ನು ಎಸೆಯುವ ವಿಡಿಯೋ ಭಾರೀ ವೈರಲ್ ಆಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅರುಣ್, ನಾನೇನು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಆಗಲು ಇಂಥ ಕೆಲಸ ಮಾಡಿಲ್ಲ. ನನ್ನ ಉದ್ದೇಶ ಸರಿಯಾಗಿಯೇ ಇದೆ, ಒಳ್ಳೆಯದ್ದೇ ಇದೆ. ಇದರ ಹಿಂದೆ ಉತ್ತಮ ಸಂದೇಶ ಇದೆ, ಅದನ್ನು ಮುಂದೆ ಹೇಳುತ್ತೇನೆ. ಈ ಹಣ ನನ್ನದೇ ಆಗಿದ್ದು, ಸರಿಯಾದ ದಿಕ್ಕಿನಲ್ಲಿಯೇ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೆ, ತನ್ನನ್ನು ಮಾರ್ಕೆಟಿಂಗ್ ಕೋಚ್, ಆಂಕರ್ ಎಂದು ಹೇಳಿಕೊಂಡಿದ್ದಾನೆ. ಸಿಟಿ ಮಾರ್ಕೆಟ್ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಏನಿಲ್ಲ ಅಂದ್ರೂ ಐದಾರು ಸಾವಿರ ರೂಪಾಯಿ ಹಣವನ್ನು ಎಸೆದಿದ್ದಾನೆ ಎಂದು ಹೇಳಲಾಗುತ್ತಿದೆ.

A man brought vehicles on a flyover in Bengaluru to a standstill after he threw money at people and on the crowd below in a busy market area of the city. Videos shot by motorists on the phone showed the man wearing coat and trouser walking with a wall clock on his neck on the flyover and throwing large sums of cash in the air. Some of the motorists are seen running to him and requesting money.