ಪ್ರತಿ ಮತದಾರನಿಗೆ ಆರು ಸಾವಿರ ಲಂಚದ ಆಮಿಷ ; ಬೊಮ್ಮಾಯಿ, ನಡ್ಡಾ, ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು 

25-01-23 06:09 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಪ್ರತಿ ಮತದಾರನಿಗೆ 6000 ರೂ. ಲಂಚದ ಬಹಿರಂಗ ಆಮಿಷ ಒಡ್ಡಿದ್ದಾರೆ. ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಪೊಲೀಸ್ ದೂರು ನೀಡಿದ್ದಾರೆ. 

ಬೆಂಗಳೂರು, ಜ.25 : ರಾಜ್ಯದಲ್ಲಿ ಪ್ರತಿ ಮತದಾರನಿಗೆ 6000 ರೂ. ಲಂಚದ ಬಹಿರಂಗ ಆಮಿಷ ಒಡ್ಡಿದ್ದಾರೆ. ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಪೊಲೀಸ್ ದೂರು ನೀಡಿದ್ದಾರೆ. 

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 

Image

Healthcare facility for advocates to open soon: Karnataka CM Bommai |  Bengaluru - Hindustan Times

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ಮತದಾರರ ಖರೀದಿಗೆ ಸಂಚು ರೂಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್‌ ಕಟೀಲ್, ರಮೇಶ್ ಜಾರಕಿಹೊಳಿ ಸೇರಿ ಸಂಚು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರ ಮೇಲೆ ದೂರು ಕೊಟ್ಟಿದ್ದೇವೆ ಎಂದರು. 

Not even one MLA is unhappy with B S Yediyurappa: Nalin Kumar Kateel |  Deccan Herald

Ramesh Jarkiholi clarification on his statement 6k for vote belagavi news | Ramesh  Jarkiholi: ವೋಟ್​ಗೆ 6 ಸಾವಿರ ಹೇಳಿಕೆ ಸಮರ್ಥಿಸಿಕೊಂಡ ರಮೇಶ್ ಜಾರಕಿಹೊಳಿ| TV9 Kannada

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಇವರಿಗೆ ಖಚಿತವಾಗಿದೆ. ಇಂದು ಲಂಚ ಇಲ್ಲದೇ ಕೆಲಸ ಆಗುತ್ತಿಲ್ಲ. ಲಂಚದಿಂದ ಬೇಕಾದಷ್ಟು ದುಡ್ಡು ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 5 ಕೋಟಿ ಮತದಾರರಿದ್ದಾರೆ. ಒಬ್ಬರಿಗೆ 6 ಸಾವಿರ ಆದರೇ 30 ಸಾವಿರ ಕೋಟಿ ಆಯ್ತು. ಅವರನ್ನು ಖರೀದಿ ಮಾಡಲು ಸಂಚು ನಡೆಸುತ್ತಿದ್ದು, ಈ ಬಗ್ಗೆ ದೂರು ನೀಡಿದ್ದೇವೆ ಎಂದಿದ್ದಾರೆ.

Karnataka Pradesh Congress Committee (KPCC) has accused the ruling BJP leaders of ‘hatching a conspiracy’ to woo voters in the forthcoming Legislative Assembly elections by distributing ₹30,000 crore, and urged the police to register a case against Chief Basavaraj Bommai, BJP national president J.P. Nadda, State BJP president Nalin Kumar Kateel and former Minister and BJP MLA Ramesh Jarkiholi.