ಮಧ್ಯಪ್ರದೇಶದಲ್ಲಿ ವಾಯುಪಡೆ ವಿಮಾನಗಳ ಡಿಕ್ಕಿ ಪ್ರಕರಣ ; ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಮೃತ್ಯು

28-01-23 10:35 pm       HK News Desk   ಕರ್ನಾಟಕ

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಮೊರೇನಾ ಎಂಬಲ್ಲಿ ನಡೆದ ವಾಯುಪಡೆ ವಿಮಾನಗಳ ಡಿಕ್ಕಿ ಪ್ರಕರಣದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ಸಾರಥಿ ಮೃತಪಟ್ಟಿದ್ದಾರೆ.

ಬೆಳಗಾವಿ, ಜ.28: ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಮೊರೇನಾ ಎಂಬಲ್ಲಿ ನಡೆದ ವಾಯುಪಡೆ ವಿಮಾನಗಳ ಡಿಕ್ಕಿ ಪ್ರಕರಣದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತ ರಾವ್ ಸಾರಥಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಒಬ್ಬರು ಪೈಲಟ್ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅವರು ಯಾರೆನ್ನುವುದು ದೃಢವಾಗಿರಲಿಲ್ಲ. ಇದೀಗ ಬೆಳಗಾವಿ ನಗರದ ಗಣೇಶಪುರದ ನಿವಾಸಿ ಹನುಮಂತ ರಾವ್ ಮೃತಪಟ್ಟಿದ್ದಾರೆಂದು ಕುಟುಂಬಸ್ಥರಿಗೆ ಸೇನಾ ಮೂಲಗಳು ಖಚಿತಪಡಿಸಿವೆ. ಹನುಮಂತ ರಾವ್, ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದು ಪೈಲಟ್ ಗಳಿಗೆ ತರಬೇತು ನೀಡುತ್ತಿದ್ದರು. ಹನುಮಂತ ರಾವ್, ತಂದೆ, ತಾಯಿ, ಸೋದರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರ ಭಾನುವಾರ ಬೆಳಗಾವಿ ತಲುಪಲಿದೆ.

IAF fighter pilot from Belagavi killed in Madhya Pradesh crash - The South  First

IAF's Sukhoi-30, Mirage-2000 crash near MP's Gwalior; one pilot dead |  Latest News India - Hindustan Times

Pilot killed as Sukhoi, Mirage fighter jets crash in MP, IAF orders inquiry  | Top points - India Today

ಮಧ್ಯಪ್ರದೇಶದ ಮೊರೇನಾದಲ್ಲಿ ಸುಖೋಯ್ -30 ಮತ್ತು ಮೀರಜ್ 2000 ಎರಡು ವಾಯುಪಡೆ ವಿಮಾನಗಳು ಸಂಚಾರ ನಡೆಸುತ್ತಿದ್ದಾಗಲೇ ಡಿಕ್ಕಿಯಾಗಿ ಪತನಗೊಂಡಿದ್ದವು. ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು, ಸುಖೋಯ್ ಯುದ್ಧ ವಿಮಾನದಲ್ಲಿ ಮೂವರು ಪೈಲಟ್ ಗಳಿದ್ದರೆ, ಮೀರಜ್ ನಲ್ಲಿ ಒಬ್ಬರೇ ಪೈಲಟ್ ಇದ್ದರು. ಇಬ್ಬರು ಪೈಲಟ್ ಅಪಾಯದಿಂದ ಪಾರಾಗಿದ್ದರು. ಒಬ್ಬರು ಸ್ಥಳದಲ್ಲೇ ಸಾವು ಕಂಡಿದ್ದರೆ, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದರು ಎಂದು ಸೇನಾ ಮೂಲಗಳು ತಿಳಿಸಿದ್ದವು.

ಹನುಮಂತ ರಾವ್ ಸೋದರನೂ ವಾಯುಪಡೆಯಲ್ಲಿದ್ದು, ಪೈಲಟ್ ಆಗಿದ್ದಾರೆ.

The deceased pilot who lost his life in Saturday's Sukhoi-Mirage 2000 collision has been identified as Wing Commander Hanumanth Rao Sarathi who hailed from Karnataka's Belagavi.