ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿಯನ್ನು ಬಿಟ್ಟಿದ್ದೀರಿ, ನನ್ನ 3-4 ಕೋಟಿ ವಂಚನೆ ಏನು ಮಹಾ ಎಂದು ಪ್ರಶ್ನಿಸಿದ ಆರೋಪಿ ! 

31-01-23 09:17 pm       Bangalore Correspondent   ಕರ್ನಾಟಕ

ವಿಜಯ್ ಮಲ್ಯ, ನೀರವ್ ಮೋದಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ.  ಅವರನ್ನು ಏನೂ ಮಾಡದೆ ಬಿಡಲಾಗಿದೆ. ನಾನು ಕೇವಲ ಮೂರು-ನಾಲ್ಕು ಕೋಟಿಯಷ್ಟೇ ವಂಚನೆ ಮಾಡಿದ್ದೇನೆ. ನಿಮಗ್ಯಾಕೆ ಚಿಂತೆ, ನಾನು ನೋಡಿಕೊಳ್ಳುತ್ತೇನೆ.

ಬೆಂಗಳೂರು, ಜ.31 : ವಿಜಯ್ ಮಲ್ಯ, ನೀರವ್ ಮೋದಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ.  ಅವರನ್ನು ಏನೂ ಮಾಡದೆ ಬಿಡಲಾಗಿದೆ. ನಾನು ಕೇವಲ ಮೂರು-ನಾಲ್ಕು ಕೋಟಿಯಷ್ಟೇ ವಂಚನೆ ಮಾಡಿದ್ದೇನೆ. ನಿಮಗ್ಯಾಕೆ ಚಿಂತೆ, ನಾನು ನೋಡಿಕೊಳ್ಳುತ್ತೇನೆ. ಹೀಗೆಂದು ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ. 

ನಿವೇಶನ ಖರೀದಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸುತ್ತಿದ್ದ ತಿಪಟೂರು ಮೂಲದ ಲೋಕೇಶ್‌(43)ನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆ ವೇಳೆ ಈ ರೀತಿ ಪ್ರಶ್ನೆ ಮಾಡಿದ್ದಾನೆ.

Osun man arraigned for stealing motorcycle - Daily Post Nigeria

ಆರೋಪಿ 2018ರಲ್ಲಿ ನಿವೇಶನ ಖರೀದಿ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದಿದ್ದು ಬಳಿಕ ಅವನ್ನೇ ಬಳಸಿ ನಕಲಿ ದಾಖಲೆ ಸೃಷ್ಟಿಸಿದ್ದು ಎಸ್‌ಬಿಐ ಬ್ಯಾಂಕ್‌ಗೆ ಸಲ್ಲಿಸಿ ಅದೇ ನಿವೇಶನದ ಮೇಲೆ 83 ಲಕ್ಷ ರೂ. ಸಾಲ ಪಡೆದಿದ್ದ. ಈ ಬಗ್ಗೆ ಬ್ಯಾಂಕ್ ಕಡೆಯಿಂದ ಶೇಷಾದ್ರಿಪುರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆರೋಪಿ ಲೋಕೇಶ್ ಸಹಚರರಾದ ಅಯೂಬ್ ಹಾಗೂ ನಾಗರಾಜ್ ಎಂಬವರನ್ನು ಬಂಧಿಸಿದ್ದರು. ಅಂದಿನಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಲೋಕೇಶ್ ಐದು ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಹಿಂದೆಯೂ ನಿವೇಶನ ಖರೀದಿಸುವ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ವಂಚಕ ಲೋಕೇಶ್ ಹಾಗೂ ಆತನ ಸಹಚರರ ವಿರುದ್ಧ ಶಂಕರಪುರ, ವಿದ್ಯಾರಣ್ಯಪುರ, ಜಿಗಣಿ, ಕೆ.ಜಿ.ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಬಂಧನದ ಬಳಿಕವೂ ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಕೆಲಸ ಮುಂದುವರಿಸಿದ್ದರು. 

Fraud Theories and White Collar Crimes: Lessons for the Nigerian Banking  Industry - Research leap

ಪತ್ರಿಕೆಗಳಲ್ಲಿ ಬರುವ ನಿವೇಶನ ಮಾರಾಟದ ಜಾಹೀರಾತು ಹಾಗೂ ನಿವೇಶನಗಳಲ್ಲಿ ಅಂಟಿಸುವ ಮಾಹಿತಿ ಫಲಕಗಳಲ್ಲಿ ಸಂಪರ್ಕ ಸಂಖ್ಯೆ ಪಡೆದು ಬಳಿಕ ನಿವೇಶನ ಖರೀದಿಸುವ ನೆಪದಲ್ಲಿ ಮಾಲೀಕರಿಗೆ ಕರೆ ಮಾಡುತ್ತಿದ್ದ. ಬಳಿಕ ನಿವೇಶನ ಖರೀದಿಸುವುದಾಗಿ ವ್ಯವಹಾರ ಕುದುರಿಸುತ್ತಿದ್ದ. 20 ಸಾವಿರ ರೂ. ಮುಂಗಡ ಹಣ ಕೊಟ್ಟು ನಿವೇಶನದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದು ನಂತರ ತಾನೇ ನಕಲಿ ದಾಖಲೆ ಸೃಷ್ಟಿಸಿ ತನ್ನ ಸಹಚರರನ್ನು ಖರೀದಿದಾರರನ್ನಾಗಿ ತೋರಿಸಿ ಅದೇ ಜಾಗದ ಮೇಲೆ ಸಾಲ ಪಡೆಯುತ್ತಿದ್ದರು.

Why there is no arrest of Vijay Mallya, Nirav Modi, accused questions Police after his arrest on cheating in Bangalore.