ರಾಜ್ಯ ಕಾಂಗ್ರೆಸ್ ಗೆ ಶಾಕ್ ; ಡಿಕೆಶಿ, ಸಿದ್ದರಾಮಯ್ಯ ನಡೆಗೆ ಬೇಸತ್ತ ಪರಮೇಶ್ವರ್ ರಾಜೀನಾಮೆ, ಪಕ್ಷದಲ್ಲಿ ತಳಮಳ 

03-02-23 11:33 am       Bangalore Correspondent   ಕರ್ನಾಟಕ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರ ಒಳಗಿನ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಗೆ ಬೇಸತ್ತ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಬೆಂಗಳೂರು, ಫೆ.3: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರ ಒಳಗಿನ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಗೆ ಬೇಸತ್ತ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸಮಿತಿಯಲ್ಲಿ ಚರ್ಚಿಸದೆ, ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ತಮ್ಮದೇ ಭರವಸೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಹೀಗಾಗಿ ನಾಮಕೆವಾಸ್ತೆ ಪ್ರಣಾಳಿಕೆ ಸಮಿತಿಯಲ್ಲಿ ಇರುವುದಿಲ್ಲ ಎಂದು ಹಿರಿಯ ನಾಯಕ ಪರಮೇಶ್ವರ್ ರಾಜೀನಾಮೆ ಪತ್ರ ಬರೆದು ನೀಡಿದ್ದಾರೆ ಎನ್ನಲಾಗಿದೆ. 

ಪ್ರಣಾಳಿಕೆ ಘೋಷಣೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಪರಮೇಶ್ವರ ಅಸಮಾಧಾನಕ್ಕೆ ಕಾರಣ. ಈ ಬಗ್ಗೆ ತಮ್ಮ ಆಪ್ತರ ಬಳಿಯೂ ಬೇಸರ ಹೊರ ಹಾಕಿದ್ದರು ಎಂಬುದು ಮಾಹಿತಿ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.‌ ಅಷ್ಟೇ ಏಕೆ, ಡಿಸಿಎಂ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನದೇ ಆದ ಕೊಡುಗೆ ಇದೆ. ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದೇನೆ. ಆದರೂ ತನ್ನನ್ನು ಕಡೆಗಣಿಸಿ ಉಚಿತ ಯೋಜನೆಗಳನ್ನು ನಾಯಕರೇ ಘೋಷಣೆ ಮಾಡುತ್ತಿದ್ದಾರೆಂದು ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Siddaramaiah vs D K Shivakumar: Factionalism within Karnataka Congress over  CM face comes to the fore | Deccan Herald

Congress rally to be decisive against 'arrogant' Modi government, says  Surjewala | Deccan Herald

ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪರಮೇಶ್ವರ್ ರಾಜಿನಾಮೆ ಪಕ್ಷದ ಒಳಗಡೆ ಭಿನ್ನವಾದ ಸಂದೇಶ ಹೋಗಲಿದೆ ಎಂಬುದನ್ನು ಅರಿತ ಸುರ್ಜೇವಾಲಾ, ಪರಮೇಶ್ವರ್ ಅವರನ್ನು ಮನವೊಲಿಸಿದ್ದಾರೆ. ಪ್ರಬಲ ದಲಿತ ವರ್ಗಕ್ಕೆ ಸೇರಿರುವ ಪರಮೇಶ್ವರ್ ರಾಜಿನಾಮೆ ಪಕ್ಷದ ಕಾರ್ಯಕರ್ತರ ನಡುವೆ ಭಿನ್ನವಾದ ಸಂದೇಶ ನೀಡುವುದರಿಂದ ಅವರನ್ನು ಮನವೊಲಿಸಿ ಆ ಹುದ್ದೆಯಲ್ಲೇ ಮುಂದುವರಿಸುವ ಸಾಧ್ಯತೆಯಿದೆ.

Simmering discontent has reportedly erupted the congress party in the state.