ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ; ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಬಿಟ್ರೆ ಬೇರೆ ಯಾರಿಗೆ ಅವಕಾಶ ಇದೆ ?

07-02-23 04:19 pm       Bangalore Correspondent   ಕರ್ನಾಟಕ

ಪ್ರಲ್ಹಾದ ಜೋಶಿ ಹೆಸರಿನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಬೆಂಗಳೂರು, ಫೆ.7 : ಪ್ರಲ್ಹಾದ ಜೋಶಿ ಹೆಸರಿನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ಕೀಳುಮಟ್ಟದ ಹೇಳಿಕೆಯನ್ನು ಈವರೆಗೆ ಆಡಿದ್ದಿಲ್ಲ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.

RSS planning to install Joshi as CM, claims Kumaraswamy | Deccan Herald

ಈ ರೀತಿ ಹೇಳಿಕೆ ನೀಡಿ, ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರನ್ನು ಬಿಜೆಪಿಯಿಂದ ದೂರ ಮಾಡಬಹುದು ಎಂಬ ಅವರ ಟ್ರಿಕ್ ಕೆಲಸ ಮಾಡಲ್ಲ. ಜನರಿಗೆ ಕುಮಾರಸ್ವಾಮಿ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರ ಆಟ ನೋಡುತ್ತಾ ಇದ್ದಾರೆ ಎಂದರು.

ಪ್ರಲ್ಹಾದ ಜೋಶಿ ಮುಖ್ಯಮಂತ್ರಿ ಆಗಲು ಅರ್ಹತೆ ಹೊಂದಿರುವವರು. ನಮ್ಮ ಪಕ್ಷದಲ್ಲಿರುವ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರಿಗೆ ಅರ್ಹತೆ ಮತ್ತು ಅವಕಾಶ ಇದೆ ಹೇಳಲಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅರುಳು ಮರುಳಾದವರಂತೆ ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿಯವರನ್ನು ನಾಯಿ ಮರಿಗೆ ಹೋಲಿಸುತ್ತಾರೆ. ನಮ್ಮ ಪಕ್ಷದ ಅಧ್ಯಕ್ಷರನ್ನು ಜೋಕರ್ ಎನ್ನುತ್ತಾರೆ. ಉಗ್ರ ಭಾಷಣಗಳ ಮೂಲಕ ಉಗ್ರವಾದಿಯೇ ಆಗುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

Except Kumaraswamy no one has the opportunity to be the CM from JDS slams Ashwath Narayan.