ಬ್ರೇಕಿಂಗ್ ನ್ಯೂಸ್
07-02-23 09:53 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.7 : ಒಂದೇ ಸೈಟನ್ನು ತೋರಿಸಿ ಹತ್ತಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪೀಕಿಸಿ ಜೆ.ಆರ್ ಪ್ರಾಪರ್ಟಿ ಹೆಸರಲ್ಲಿ ನಕಲಿ ರಿಯಲ್ ಎಸ್ಟೇಟ್ ದಂಧೆ ನಡೆಸುವ ಜಯಕುಮಾರ್ ಎಂಬ ಬಿಜೆಪಿ ಕಾರ್ಯಕರ್ತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಪ್ರತಿಷ್ಟಿತ ಏರಿಯಾಗಳಲ್ಲಿ ಸೈಟುಗಳನ್ನು ಗ್ರಾಹಕರಿಗೆ ತೋರಿಸಿ, ಮಾರುಕಟ್ಟೆ ಮೌಲ್ಯಕ್ಕಿಂತ 40 ಪರ್ಸೆಂಟ್ ಕಡಿಮೆ ಬೆಲೆಗೆ ತೆಗೆಸಿಕೊಡುತ್ತೇನೆಂದು ಹೇಳಿ ಗ್ರಾಹಕರ ಟೋಪಿ ಹಾಕುವ ಈತನ ವಿರುದ್ಧ ಗ್ರಾಹಕರು ಆರೋಪ ಮಾಡಿದ್ದಾರೆ. ಸೈಟು ಸಿಗದೆ ಮೋಸ ಹೋದ ಗ್ರಾಹಕರು ತಮ್ಮ ಹಣ ಕೇಳಲು ಹೋದರೆ ತಾನೊಬ್ಬ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಕೇಂದ್ರ ಸಚಿವರು, ಪ್ರಭಾವಿ ನಾಯಕರೊಂದಿಗೆ ಒಡನಾಟ ಇರುವುದಾಗಿ ಹೇಳಿ ಅವಾಜ್ ಹಾಕ್ತಾನೆ ಎಂದು ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಶಾಂತಿಪುರ ಗ್ರಾಮದ ಪಂಚಾಯಿತಿ ಸದಸ್ಯನಾಗಿರುವ ಜಯಕುಮಾರ್, ಸ್ಥಳೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ. 2007 ರಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿಶೀಟ್ ಹೊಂದಿದ್ದ. ಹತ್ತಾರು ವರ್ಷಗಳಿಂದ ರಿಯಲ್ ಎಸ್ಟೇಟ್ ಹೆಸರಲ್ಲಿ ಮೋಸ ಮಾಡುತ್ತಲೇ ಬಂದಿರುವ ಜಯಕುಮಾರ್ ಇಲೆಕ್ಟ್ರಾನಿಕ್ ಸಿಟಿಯ ಐಷಾರಾಮಿ ವಿಲ್ಲಾದಲ್ಲಿ ವಾಸವಿದ್ದಾನೆ.
ಕಡಿಮೆ ಬೆಲೆಗೆ ಸೈಟ್ ಹುಡುಕುವ ಐಟಿ ಉದ್ಯೋಗಿಗಳನ್ನು ಸುಲಭದಲ್ಲಿ ಬಲೆಗೆ ಬೀಳಿಸಿ, ಅವರಿಂದ ಹಣ ಪೀಕಿಸಿಕೊಂಡು ಆರೋಪಿ ಮೋಸ ಮಾಡಿದ್ದಾನೆ. 25- 30 ಲಕ್ಷ ಬೆಲೆಯ ಸೈಟನ್ನು 10 ರಿಂದ 12 ಲಕ್ಷಕ್ಕೆ ತೆಗೆಸಿ ಕೊಡೋದಾಗಿ ಹೇಳಿ 5 ಲಕ್ಷ ಅಡ್ವಾನ್ಸ್ ಪಡೆಯುತ್ತಾರೆ. ಇದೇ ರೀತಿ ಒಂದೇ ಸೈಟಿನ ಕ್ರಯ ಪತ್ರವನ್ನು 10-15 ಜನರಿಗೆ ತೋರಿಸಿ, ಮಾರಾಟದ ಹೆಸರಲ್ಲಿ ಅಡ್ವಾನ್ಸ್ ಪಡೆದು ಹಣ ವಾಪಾಸ್ ನೀಡದೇ ಮೋಸ ಮಾಡಿದ್ದಾನೆಂಬ ಆರೋಪ ಆನೇಕಲ್, ಇಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಕೇಳಿಬಂದಿದೆ. ಸದ್ಯಕ್ಕೆ ಈತ ಬಿಜೆಪಿ ಪ್ರಭಾವಿಗಳ ಜೊತೆಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದ್ದು ಕಾಂಗ್ರೆಸ್ ಟೀಕೆಗೆ ಆಹಾರವಾಗಿದೆ.
ವಂಚಕನ ಜೊತೆಗೆ ನಳಿನ್ ಕುಮಾರ್ ಒಡನಾಟ !
ಇದೇ ವೇಳೆ, ವಂಚಕ ಜಯ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು ಜೊತೆಗಿದ್ದ ಫೋಟೊವನ್ನು ಬಿಡುಗಡೆ ಮಾಡಿದೆ. ಟ್ವೀಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಕಾಂಗ್ರೆಸ್, ಈತನ ವಂಚನೆಯಲ್ಲಿ ನಿಮ್ಮದೂ ಪಾಲಿದೆಯೇ? ಎಂದು ನಳಿನ್ ಕುಮಾರ್ ಅವರನ್ನು ಪ್ರಶ್ನಿಸಿದೆ. ವಂಚಕನಿಗೆ ಬಿಜೆಪಿ ರಾಜ್ಯ ನಾಯಕರ ರಕ್ಷಣೆ ಇರುವಾಗ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜನರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದಿದೆ.
ಅತ್ಯಾಚಾರಿಗಳು, ಬ್ರೋಕರ್ ಗಳು, ವೇಶ್ಯಾವಾಟಿಕೆ ದಂಧೆಕೋರರು, ಭ್ರಷ್ಟರು, ವಂಚಕರು, ರೌಡಿಗಳು, ಕ್ರಿಮಿನಲ್ ಗಳ ಏಕೈಕ ತವರು ಮನೆ ಬಿಜೆಪಿ. ಬಿಜೆಪಿ ಎಂದರೆ ಭ್ರಷ್ಟರ ಕೂಟವಾಗಿರುವಾಗ ಈತ ಬಿಜೆಪಿ ಸದಸ್ಯನಾಗಿರುವುದರಲ್ಲಿ ವಿಶೇಷವೇನಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಸೈಟ್ ಹೆಸರಲ್ಲಿ ವಂಚನೆ ನಡೆಸಿದ ಜಯಕುಮಾರ್ ಬಿಜೆಪಿ ಅಧ್ಯಕ್ಷರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾನೆ.@nalinkateel ಅವರೇ,
— Karnataka Congress (@INCKarnataka) February 6, 2023
ಈತನ ವಂಚನೆಯಲ್ಲಿ ನಿಮ್ಮದೂ ಪಾಲಿದೆಯೇ?
ಈತನ ವಂಚನೆಗೆ ನಿಮ್ಮ ಶ್ರೀರಕ್ಷೆ ಇದೆಯೇ?
ಈ ವಂಚಕನಿಗೆ @BJP4Karnataka ನಾಯಕರ ರಕ್ಷಣೆ ಇರುವಾಗ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜನರಿಗೆ ನ್ಯಾಯ ಸಿಗಲು ಸಾಧ್ಯವೇ?
2/2 pic.twitter.com/PI1oDOgLdS
Fake real estate business busted, BJP member Jayakumar alleged of cheating people, case filed. Congress has also alleged that Jayakumar is close to BJP president Nalin Kumar kateel.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm