ರೈತರ ಸಾಲಮನ್ನಾದಿಂದ ದೇಶಕ್ಕೆ ನಷ್ಟ ; 14 ಲಕ್ಷ ಕಾರ್ಪೊರೇಟ್ ಸಾಲಮನ್ನಾದಿಂದ ಯಾರಿಗೆ ನಷ್ಟ ? ತೇಜಸ್ವಿ ಸೂರ್ಯನಲ್ಲ ಅಮಾವಾಸ್ಯೆ! 

09-02-23 01:05 pm       HK News Desk   ಕರ್ನಾಟಕ

ಬಿಜೆಪಿ ಸಂಸದ ತೇಜಸ್ವಿ ಆತ ಸೂರ್ಯನಲ್ಲ ಅಮಾವಾಸ್ಯೆ, ಅದಕ್ಕೆ ನಾನು ಅಮಾವಾಸ್ಯೆ ಎಂತಲೇ ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. 

ಕಲಬುರಗಿ, ಫೆ.9: ಬಿಜೆಪಿ ಸಂಸದ ತೇಜಸ್ವಿ ಆತ ಸೂರ್ಯನಲ್ಲ ಅಮಾವಾಸ್ಯೆ, ಅದಕ್ಕೆ ನಾನು ಅಮಾವಾಸ್ಯೆ ಎಂತಲೇ ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. 

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಹೇಳಿಕೆಯನ್ನು ತೇಜಸ್ವಿ ಸೂರ್ಯ ಅವರು ನೀಡಿದ್ದು, ಈ ಮಾತನ್ನು ಯಾರೂ ಸಹ ಖಂಡಿಸಿಲ್ಲ ಎಂದು ಹೇಳಿದರು. 

Bengaluru floods: 'Missing' BJP MP Tejasvi Surya trolled - Rediff.com India  News

ಕಾರ್ಪೊರೇಟ್‌ ವಲಯದ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಬಿಜೆಪಿ ಪಕ್ಷದವರಿಗೆ ಎಂದು ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿದರು. ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ, ಇದು ಬಿಜೆಪಿಯ ಆಂತರಿಕ ಚಿಂತನೆ. ಇದರ ಬಗ್ಗೆ ಜನರೇ ನಿರ್ಧರಿಸಬೇಕು ಎಂದು ಏಕವಚನದಲ್ಲೇ ಕಿಡಿಕಾರಿದರು.

Tejasvi Surya over farmers loan waiver remark, Siddaramaiah slams surya says hes a amavasya speaking to Media persons at Kalburgi. Speaking at a Congress Prajadhvani programme at depot ground in Chittapur in Kalaburagi district on Wednesday, the leader of opposition in the assembly said BJP too may have a similar opinion on farm loan waivers. The BJP government never waived off farmers’ loan in country, he said.