ಬೆಂಗಳೂರಿನಲ್ಲಿ ನಡೆಯಲಿದೆ ಏಷ್ಯಾದ ಅತಿ ದೊಡ್ಡ ಏರ್‌ಶೋ ; ಇ-ಟಿಕೆಟ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್

09-02-23 06:52 pm       Bangalore Correspondent   ಕರ್ನಾಟಕ

ಏಷ್ಯಾದ ಅತಿ ದೊಡ್ಡ ಏರ್‌ ಶೋ ಆಗಿರುವ ಏರೋ ಇಂಡಿಯಾ ಬೆಂಗಳೂರಿನಲ್ಲಿ ಫೆಬ್ರವರಿ 13-17ರಂದು ನಡೆಯಲಿದೆ.

ಬೆಂಗಳೂರು, ಫೆ.9 : ಏಷ್ಯಾದ ಅತಿ ದೊಡ್ಡ ಏರ್‌ ಶೋ ಆಗಿರುವ ಏರೋ ಇಂಡಿಯಾ ಬೆಂಗಳೂರಿನಲ್ಲಿ ಫೆಬ್ರವರಿ 13-17ರಂದು ನಡೆಯಲಿದೆ.

1996ರಿಂದ ಯಲಹಂಕಾ ಏರ್‌ಫೋರ್ಸ್‌ ಸ್ಟೇಶನ್‌ನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಷ್ಠಿತ ಏರ್‌ ಶೋಗೆ ಚಾಲನೆ ನೀಡಲಿದ್ದಾರೆ. ಹಲವಾರು ದೇಶಗಳ ರಕ್ಷಣಾ ಸಚಿವರುಗಳು ಕೂಡ ಶೋದಲ್ಲಿ ಭಾಗವಹಿಸಲಿದ್ದಾರೆ. ಈ ಸಲದ ಏರ್‌ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ವೀಕ್ಷಕರು ಆಸ್ವಾದಿಸಲು ಅವಕಾಶ ಸೃಷ್ಟಿಯಾಗಿದೆ. ಏರ್‌ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್‌, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ.

ಏರೋ ಇಂಡಿಯಾ ವೆಬ್‌ಸೈಟ್‌ ಪ್ರಕಾರ 731 ಪ್ರದರ್ಶಕರು (೬೩೩ ದೇಶೀಯ ಹಾಗೂ 98 ವಿದೇಶಿ) ಭಾಗವಹಿಸಲಿದ್ದಾರೆ. ಏರೋಸ್ಪೇಸ್‌, ಭಾರತೀಯ ವಾಯುಪಡೆ ಮತ್ತು ರಕ್ಷಣಾ ವಲಯದ ಟ್ರೇಡ್‌ ಎಕ್ಸ್‌ಪೊ ಕೂಡ ನಡೆಯಲಿದೆ. ಏರೋಸ್ಪೇಸ್‌ ವಲಯದ ಹೂಡಿಕೆದಾರರು, ಪರಿಣತರು ಕೂಡ ಪಾಲ್ಗೊಳ್ಳಲಿದ್ದಾರೆ.

The world's top jets will soar through Bengaluru skies for Aero Show 2023

ಇ-ಟಿಕೆಟ್‌ ಬುಕ್‌ ಮಾಡುವುದು ಹೇಗೆ?

  • ಏರೋ ಇಂಡಿಯಾ ವೆಬ್‌ಸೈಟ್‌ಗೆ ಲಾಗಿನ್‌ ಆಗಿ. aeroindia.gov.in
  • ಟಿಕೆಟ್ಸ್‌ ಮೇಲೆ ಕ್ಲಿಕ್ಕಿಸಿ
  • ಡ್ರಾಪ್‌ ಡೌನ್‌ ಮೆನುವಿನಲ್ಲಿ ಬುಕ್‌ ಟಿಕೆಟ್ಸ್‌ ಆಯ್ಕೆ ಮಾಡಿಕೊಳ್ಳಿ
  • ಅಗತ್ಯವಿರುವ ಸ್ಥಳಗಳನ್ನು ತುಂಬಿ. ಸೂಕ್ತ ಟಿಕೆಟ್‌ ಆಯ್ಕೆ ಮಾಡಿಕೊಳ್ಳಿ
  • ಟಿಕೆಟ್‌ ಸೆಲೆಕ್ಟ್‌ ಮಾಡಿದ ಬಳಿಕ ಅವುಗಳನ್ನು ರಿಸರ್ವ್‌ ಮಾಡಿಕೊಳ್ಳಬಹುದು.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಸಂಚಾರ ವ್ಯತ್ಯಯ: ಏರೋ ಇಂಡಿಯಾ ಏರ್‌ ಶೋ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.8ರಿಂದ 10 ದಿನಗಳ ಕಾಲ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಈ ಬಗ್ಗೆ ಏರ್‌ ಪೋರ್ಟ್‌ ಟ್ವೀಟ್‌ ಮಾಡಿದೆ.

ಫೆಬ್ರವರಿ 8ರಿಂದ ಫೆ.17 ತನಕ ಏರ್‌ಪೋರ್ಟ್‌ನಲ್ಲಿ ಪ್ರತಿ ದಿನ ಕೆಲ ಗಂಟೆಗಳ ಕಾಲ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

Kempegowda International Airport: Flight operations at Bengaluru Airport to  be partially affected for 10 days due to Aero India Show 2023 - Details here

ಏರೋ ಇಂಡಿಯಾ ಟಿಕೆಟ್‌ ದರಗಳು:

ಪ್ರವಾಸಿಗರು ಮೂರು ವಿಧದ ಟಿಕೆಟ್‌ಗಳನ್ನು ಆಯ್ದುಕೊಳ್ಳಬಹುದು. ಅವುಗಳೆಂದರೆ air display viewing area (ADVA̧) General visitor ಮತ್ತು Admittance.

ವಸ್ತುಪ್ರದರ್ಶನ ವೀಕ್ಷಣೆ ಮತ್ತು ಎಡಿವಿಎ (ADVA) ಟಿಕೆಟ್‌ ದರ ಭಾರತೀಯ ನಾಗರಿಕರಿಗೆ 2,500 ರೂ. ಹಾಗೂ ವಿದೇಶಿಯರಿಗೆ 50 ಡಾಲರ್‌. ಎಡಿವಿಎ ಗೆಸ್ಟ್‌ ಟಿಕೆಟ್‌ಗೆ ಭಾರತೀಯ ನಾಗರಿಕರು 1,000 ರೂ. ಹಾಗೂ ವಿದೇಶಿಯರು 50 ಡಾಲರ್‌ ನೀಡಬೇಕು.

This time the Bangalore Air Show was inaugurated by Prime Minister Narendra  Modi Pipa News | PiPa News

ಶೋದಲ್ಲಿ ಭಾಗವಹಿಸಲಿರುವ ವಿಮಾನಗಳು:

ಏರೋ ಇಂಡಿಯಾ ಶೋದಲ್ಲಿ ಎಫ್-‌21 ಯುದ್ಧ ವಿಮಾನ, ಸಿ-130 ಜೆ ಟ್ರಾನ್ಸ್‌ಪೋರ್ಟ್‌ ವಿಮಾನ, ಎಂಎಚ್-‌60 ಆರ್‌ ಮಲ್ಟಿ-ಮಿಶನ್‌ ಹೆಲಿಕಾಪ್ಟರ್, ಜಾವೆಲಿನ್‌ ವೆಪನ್‌ ಸಿಸ್ಟಮ್‌, ಎಸ್-‌91 ಮಲ್ಟಿ ರೋಲ್‌ ಹೆಲಿಕಾಪ್ಟರ್‌, 737,787 ಡ್ರೀಮ್‌ಲೈನರ್‌, 777X ಭಾಗವಹಿಸಲಿವೆ. ಲಘು ಯುದ್ಧ ವಿಮಾನ ತೇಜಸ್‌ ಮಾರ್ಕ್‌ 1 A (LCA Tejas) ಭಾಗವಹಿಸಲಿದೆ.

ಏರೋ ಇಂಡಿಯಾ 2033 ಆಯಪ್ ಪಟ್ಟಿ ಮಾಡಿರುವ ಪ್ರಕಾರ ರಾಕ್‌ವೆಲ್‌ ಬಿ-1 ಲ್ಯಾನ್ಸರ್‌, ಸಿ-17 ಗ್ಲೋಬ್‌ಮಾಸ್ಟರ್‌, ಬೋಯಿಂಗ್‌ ಸಿ-40 ಕ್ಲಿಪ್ಪರ್‌, ಬೋಯಿಂಗ್‌ ಎಫ್-‌15, ಡಸಾಲ್ಟ್‌ ಫಾಲ್ನ್‌ 8x, ಲುಕ್‌ಹೀಡ್‌ ಮಾರ್ಟಿನ್‌ ಎಫ್-‌16, ಬೋಯಿಂಗ್‌ ಎಫ್‌ -18, ಕೆಸಿ-040, ಏರಿಯಲ್‌ ರಿಫ್ಯುಯೆಲರ್‌, ಕೆಸಿ-135 ಟ್ಯಾಂಕರ್‌, ಲುಕ್‌ಹೀಡ್‌ ಮಾರ್ಟಿನ್‌ ಎಫ್-‌36 ವಿಮಾನಗಳು ಭಾಗವಹಿಸಲಿವೆ.

Airbus to hire engineering, IT talent at Aero India

ಏರ್‌ ಬಸ್‌ನಿಂದ ಎಂಜಿನಿಯರಿಂಗ್‌, ಐಟಿ ಪ್ರತಿಭಾವಂತರ ನೇಮಕ:

ಏರೊ ಇಂಡಿಯಾ ಶೋದಲ್ಲಿ ಭಾಗವಹಿಸಲಿರುವ‌ ಐರೋಪ್ಯ ಏರೋಸ್ಪೇಸ್‌ ದಿಗ್ಗಜ ಕಂಪನಿಯಾದ ಏರ್‌ ಬಸ್, ಎಂಜಿನಿಯರಿಂಗ್‌ ಪದವೀಧರರು ಹಾಗೂ ಐಟಿ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಾಗತಿಕ ಮಟ್ಟದಲ್ಲಿ 13,000 ಮಂದಿಗೆ ಉದ್ಯೋಗ ನೀಡಲು ಕಂಪನಿ ಉದ್ದೇಶಿಸಿದೆ.

Prime Minister Narendra Modi will inaugurate the five-day Aero India 2023 on February 13, the ministry of defence said on Wednesday. "A premier exhibition in the global aviation industry, Aero India is India's aerospace and defence exhibition, held biennially at Air Force Station, Yelahanka in an area of around 35,000 sqm. The show is a unique opportunity to the industry to showcase its capabilities, products and services. In this edition, 731 exhibitors will participate across the world," the ministry said.