ಬ್ರೇಕಿಂಗ್ ನ್ಯೂಸ್
09-02-23 10:18 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.9: ಎಚ್ಡಿ ಕುಮಾರಸ್ವಾಮಿ ಹೇಳಿ ಕೇಳಿ ತುಂಬ ಚಾಣಾಕ್ಷ ರಾಜಕಾರಣಿ. ಯಾವುದೇ ಹೇಳಿಕೆ ನೀಡುವುದಿದ್ದರೂ ಅಳೆದು ತೂಗಿಯೇ ಹೇಳಿಕೆ ಕೊಡುತ್ತಾರೆ. ಅಂತಹದ್ದರಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಿಎಂ ಕುರಿತ ಹೇಳಿಕೆ ಏನೂ ಬಾಯಿ ತಪ್ಪಿ ಬಂದಿದ್ದಂತೂ ಅಲ್ಲ. ಸರಕಾರವನ್ನು ಬಿಜೆಪಿ ನಡೆಸುವುದಿದ್ದರೂ, ಒಳಗಿನಿಂದ ಏನೇ ಫೈಲು ಆಚೀಚೆ ಆಗೋದಿದ್ದರೂ ಅದರ ಮಾಹಿತಿ ಕುಮಾರಸ್ವಾಮಿಗೆ ಹೋಗುತ್ತದೆ. ವಿಧಾನಸೌಧದ ಪ್ರತಿ ಇಂಚಿಂಚಲ್ಲೂ ಮಾಹಿತಿಗಾರರನ್ನು ಇಟ್ಟುಕೊಂಡಿರುವ ವ್ಯಕ್ತಿ ಕುಮಾರಸ್ವಾಮಿ. ಇಷ್ಟಕ್ಕೂ ಕುಮಾರಸ್ವಾಮಿ ಬ್ರಾಹ್ಮಣ ಮುಖ್ಯಮಂತ್ರಿ ದಾಳ ಎಸೆದಿದ್ದೇ ಚಾಣಾಕ್ಷ ರಾಜಕೀಯ ನಡೆ. ಇವರು ಎಸೆದ ರಾಜಕೀಯ ದಾಳಕ್ಕೆ ವಾರ ಕಳೆದರೂ ಕಮಲ ನಾಯಕರು ವಿಲ ವಿಲ ಒದ್ದಾಡುತ್ತಲೇ ಇದ್ದಾರೆ.
ವಾರದ ಹಿಂದೆ ಬಿಜೆಪಿ ಸರಕಾರ ಬಂದಲ್ಲಿ ಈ ಬಾರಿ ಬ್ರಾಹ್ಮಣ ಮುಖ್ಯಮಂತ್ರಿ, ಎಂಟು ಮಂದಿ ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಕುಮಾರಸ್ವಾಮಿ ಛೂಬಾಣ ಬಿಟ್ಟಿದ್ದರು. ಹೀಗಾದಲ್ಲಿ ಸದ್ಯದ ಅಂದಾಜು ಪ್ರಕಾರ, ಒಂದೋ ಪ್ರಹ್ಲಾದ ಜೋಷಿ ಸಿಎಂ ಸ್ಥಾನಕ್ಕೇರಬೇಕು. ಇಲ್ಲದೇ ಹೋದರೆ ಮೇಲೆ ಕುಳಿತು ರಾಜ್ಯ ಬಿಜೆಪಿಯನ್ನು ಕುಣಿಸುತ್ತಿರುವ ಮತ್ತೊಬ್ಬ ಬ್ರಾಹ್ಮಣ ಬಿಎಲ್ ಸಂತೋಷ್ ಮುಖ್ಯಮಂತ್ರಿ ಗಾದಿಗೇರಬೇಕು. ಶತಾಯಗತಾಯ ಈ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಅವರನ್ನು ಮುಗಿಸಿಬಿಡಬೇಕು ಎಂದು ತೊಡಗಿರುವ ಬಿ.ಎಲ್.ಸಂತೋಷ್ ಬೆಂಬಲಿಗರ ಬಣ, ತಮ್ಮ ಪರಮ ಗುರುವನ್ನೇ ಸಿಎಂ ಆಗಿಸಲು ಪಣ ತೊಟ್ಟಂತಿದೆ. ಈ ಬಗ್ಗೆ ಮಾಹಿತಿ ಇದ್ದಿದ್ದರಿಂದಲೋ ಏನೋ, ಎಚ್ಡಿಕೆ ಎದುರಾಳಿಯನ್ನು ಕಟ್ಟಿಹಾಕಲು ರಾಜಕೀಯ ದಾಳವನ್ನು ಉರುಳಿಸಿಯೇ ಬಿಟ್ಟಿದ್ದಾರೆ.
ರಾಜ್ಯದಲ್ಲಿ ಏನಿದ್ದರೂ, ಸದ್ಯಕ್ಕೆ ಲಿಂಗಾಯತರು ಮತ್ತು ಒಕ್ಕಲಿಗರೇ ನಿರ್ಣಾಯಕ ಮತದಾರರು. ಇವರು ಯಾರಿಗೆ ಮತ ಚಲಾಯಿಸುತ್ತಾರೋ ಅವರು ಅಧಿಕಾರಕ್ಕೇರುತ್ತಾರೆ. ಸದ್ಯದ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೀಸಲಾತಿಗೆ ಪಟ್ಟು ಹಿಡಿದು ಪಂಚಮಸಾಲಿಗಳು ಕೂಗೆಬ್ಬಿಸಿರುವುದರಿಂದ ಲಿಂಗಾಯತರು ಪೂರ್ತಿಯಾಗಿ ಬಿಜೆಪಿ ಬಗ್ಗೆ ಮುನಿಸಿಕೊಂಡಿದ್ದಾರೆ ಅನ್ನುವ ಲೆಕ್ಕಾಚಾರದಲ್ಲಿರುವ ಒಕ್ಕಲಿಗ ನಾಯಕ ಕುಮಾರಸ್ವಾಮಿ, ಮುಂದಿನ ಬಾರಿ ಬಿಜೆಪಿ ಬ್ರಾಹ್ಮಣ ಮುಖ್ಯಮಂತ್ರಿ ಮಾಡುತ್ತದೆ ಎಂದು ಬಾಂಬ್ ಹಾಕಿದ್ದಾರೆ. ಆಮೂಲಕ ಲಿಂಗಾಯತರನ್ನು ಮತ್ತಷ್ಟು ಉರಿಯುವಂತೆ ಮಾಡಿ ಬಿಜೆಪಿ ಓಟ್ ಬ್ಯಾಂಕನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ, ಮಂಡ್ಯ, ಮೈಸೂರಿನಲ್ಲಿ ತಮ್ಮ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿರುವ ಒಕ್ಕಲಿಗರ ಮೇಲೆ ಸವಾರಿ ಹೊರಟಿರುವ ಬಿಜೆಪಿ ನಾಯಕರಿಗೂ ಟಾಂಗ್ ಇಟ್ಟಿದ್ದಾರೆ.
ಇತ್ತ ಬಿಜೆಪಿ ನಾಯಕರಿಗೆ ಬ್ರಾಹ್ಮಣ ಸಿಎಂ ಹೇಳಿಕೆಯನ್ನು ನುಂಗಲೂ ಅಲ್ಲ, ಉಗುಳಲೂ ಆಗದಂತಹ ಸ್ಥಿತಿ. ಬಿಎಲ್ ಸಂತೋಷ್ ಸದ್ಯಕ್ಕೆ ರಾಜ್ಯ ಬಿಜೆಪಿ ಪಾಲಿಗೆ ಪರಮೋಚ್ಛ ನಾಯಕನಾಗಿರುವುದರಿಂದ ಬ್ರಾಹ್ಮಣ ಸಿಎಂ ಹೇಳಿಕೆಯ ಬಗ್ಗೆ ಒಳಗಡೆ ಅಸಮಾಧಾನ ಇದ್ದರೂ, ಸಮರ್ಥನೆಗೆ ಹೊರಟಿದ್ದಾರೆ. ಇತ್ತ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸುತ್ತಲೇ ಇದ್ದಾರೆ. ಅಲ್ಲದೆ, ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಪೇಶ್ವೆಗಳ ಪಾಳೆಗಾರಿಕೆ ಅನ್ನೋದನ್ನೂ ಸೂಚ್ಯವಾಗಿ ಹೇಳತೊಡಗಿದ್ದಾರೆ. ಕುಮಾರಸ್ವಾಮಿ ಈ ನಡೆಯಿಂದ ಬಿಜೆಪಿ ನಾಯಕರ ಸ್ಥಿತಿ ವಿಲ ವಿಲ ಅನ್ನುವಂತಾಗಿದೆ. ಬ್ರಾಹ್ಮಣ ಮುಖ್ಯಮಂತ್ರಿ ಅನ್ನೋ ವಿಚಾರ ಮಾಧ್ಯಮದಲ್ಲಿ ಚರ್ಚೆಯಾದಷ್ಟೂ ಬಿಜೆಪಿಗೆ ನಷ್ಟವಾದರೆ, ಇತ್ತ ಜೆಡಿಎಸ್, ಕಾಂಗ್ರೆಸಿಗೆ ಲಾಭವಾಗಲಿದೆ.
ಕಮಲ ನಾಯಕರು ಸಮರ್ಥನೆ ಮಾಡಿದಷ್ಟೂ ಮುಂದೆ ಬ್ರಾಹ್ಮಣರನ್ನೇ ಪಟ್ಟಕ್ಕೇರಿಸುತ್ತಾರೆ ಅನ್ನುವ ಭಾವನೆ ಜನರಲ್ಲಿ ಬೇರೂರುತ್ತದೆ. ಅಷ್ಟೇ ಅಲ್ಲ, ಈ ಸಂದೇಶ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಪೂರ್ತಿ ಹರಡುತ್ತದೆ. ಉತ್ತರದಲ್ಲಿ ದಲಿತ, ಎಸ್ಸಿ, ಎಸ್ಟಿ ವರ್ಗದ ಮತಗಳೂ ಚದುರುತ್ತವೆ. ಇತ್ತ ಮಧ್ಯ ಕರ್ನಾಟಕದ ಲಿಂಗಾಯತರು, ದಕ್ಷಿಣ ಕರ್ನಾಟಕದ ಒಕ್ಕಲಿಗರ ಮತಗಳೂ ಪಲ್ಲಟ ಆಗುತ್ತವೆ ಅನ್ನುವುದು ರಾಜಕೀಯ ಲೆಕ್ಕಾಚಾರ. ಇದನ್ನು ಅರಿತಿರುವ ಕಾಂಗ್ರೆಸ್ ನಾಯಕರು, ಈ ರೀತಿ ಕದಡಿದಷ್ಟೂ ಲಾಭ ಅನ್ನುವ ಚಿಂತನೆಯಲ್ಲಿದ್ದಾರೆ.
ಹಾಗೆ ನೋಡಿದರೆ, ಇಂಥ ರಾಜಕೀಯ ದಾಳಗಳು ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಕೇಳಿಬರುತ್ತವೆ. ಎದುರಾಳಿಗಳನ್ನು ಕಟ್ಟಿಹಾಕಲು ಚಾಣಾಕ್ಷ ರಾಜಕಾರಣಿಗಳು ರಾಜಕೀಯ ದಾಳಗಳನ್ನು ಉರುಳಿಸುತ್ತಲೇ ಇರುತ್ತಾರೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವಂತೆ ತಿರುಗೇಟು ನೀಡುತ್ತಾ ಹೋದರೆ, ಅದರಿಂದ ಉಂಟಾಗುವ ಕೆಡುಕುಗಳ ಬಗ್ಗೆ ರಾಜಕೀಯ ನಾಯಕರು ತಿಳಿಯದವರೇನಲ್ಲ. ಆದರೆ ಹಾಲಿ ಬಿಜೆಪಿ ಪಾಳಯದಲ್ಲಿ ಅಂಥ ಕುಶಾಗ್ರಮತಿಗಳ ಸಂಖ್ಯೆ ಕಡಿಮೆಯಿದೆ. ಮುತ್ಸದ್ಧಿ ಎನಿಸಿರುವ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ಸಕ್ರಿಯವಾಗುಳಿದಿಲ್ಲ. ಇದರ ನಡುವಲ್ಲೇ ಯಡಿಯೂರಪ್ಪ ಬಗ್ಗೆ ಕುಮಾರಸ್ವಾಮಿ ಮೃದು ಧೋರಣೆಯ ಮಾತುಗಳನ್ನು ಹೇಳುತ್ತಿದ್ದಾರೆ. ಆಮೂಲಕ ಲಿಂಗಾಯತರ ಪರವಾಗಿದ್ದೀನಿ ಎಂದೂ ತೋರಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ತಾನೇ ಸಿಎಂ ಮಾಡಿದ್ದು, ಆಮೂಲಕ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರದ ರುಚಿ ತೋರಿಸಿದ್ದೆ ಎಂದು ಹೇಳಿಕೆ ನೀಡಿಯೂ ನಾಯಕರನ್ನು ಕಟ್ಟಿಹಾಕಿದ್ದಾರೆ.
ಈಗಲೂ ಯಡಿಯೂರಪ್ಪ ವಿರೋಧಿ ಪಾಳಯವೇ ಆಗಿದ್ದರೂ, ಒಳಗಿನಿಂದ ಕುಮಾರಸ್ವಾಮಿ ಇವರ ಆಪ್ತರೇ ಆಗಿದ್ದಾರೆ. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಈ ಮೂವರ ಆಪ್ತರ ಬಳಗದಲ್ಲಿದ್ದಾರೆ. ಚುನಾವಣೆ ನಂತರದ ರಾಜಕೀಯ ನಡೆ ಏನಿರಬಹುದೋ ಗೊತ್ತಿಲ್ಲ. ಈ ಮೂವರು ಪರಸ್ಪರ ವಿರೋಧಿ ಹೇಳಿಕೆಗಳನ್ನಂತೂ ನೀಡುವುದಿಲ್ಲ. ಯಡಿಯೂರಪ್ಪ ಅವರನ್ನು ಕೆಲವರ ಸಂತೋಷಕ್ಕಾಗಿ ಬಿಜೆಪಿ ನಾಯಕರು ದೂರ ಇಟ್ಟಿದ್ದರೂ, ಇವರ ರಾಜಕೀಯ ಕುಶಾಗ್ರಮತಿಯನ್ನು ಅರಿಯೋದು ಕಷ್ಟ. ಆದರೆ ಕುಮಾರಸ್ವಾಮಿಯ ಬ್ರಾಹ್ಮಣ ಮುಖ್ಯಮಂತ್ರಿ ಅಸ್ತ್ರ ಎಲ್ಲಿಂದ ಹುಟ್ಟಿರಬಹುದು ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು.
Former Karnataka CM and Janata Dal (Secular) leader H D Kumaraswamy’s statement that he has information about the Rashtriya Swayamsevak Sangh (RSS) planning to make Union Minister Pralhad Joshi, a Brahmin, the next chief minister of Karnataka has stirred the proverbial hornets’ nest in political circles and is being viewed as an effort to polarise voters on caste lines.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 07:19 pm
Mangalore Correspondent
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am