ಬ್ರೇಕಿಂಗ್ ನ್ಯೂಸ್
12-02-23 03:03 pm HK News Desk ಕರ್ನಾಟಕ
ಬೆಂಗಳೂರು, ಫೆ.12: ಕಾಂತಾರ ಸಿನೆಮಾ ಅನುಕರಿಸಿ ದೈವದ ವೇಷ ಧರಿಸುವುದು, ವೇದಿಕೆ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ದೈವಕ್ಕೆ ಅಪಹಾಸ್ಯ ಮಾಡುವುದು ಹೆಚ್ಚುತ್ತಿದೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ನರ್ತಿಸುತ್ತಿದ್ದ ವಿದ್ಯಾರ್ಥಿ ಮೇಲೆ ದೈವ ಆವಾಹನೆ ಆಗಿರುವ ಘಟನೆ ನಡೆದಿದ್ದು ಅಲ್ಲಿದ್ದವರು ಶಾಕ್ ಆಗಿದ್ದಾರೆ.

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ. ದ್ವೀತಿಯ ಪಿಯುಸಿ ವಿದ್ಯಾರ್ಥಿ ವಿಶಾಲ್, ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದ. ಕಾಂತಾರ ಸಿನಿಮಾದ ರೀತಿಯಲ್ಲೇ ಪಂಜುರ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗುತ್ತಿದ್ದು ವೇದಿಕೆ ಮೇಲಿಂದ ಕೆಳಗೆ ಹಾರಿ ಆವೇಶಕ್ಕೊಳಗಾಗಿದ್ದಾನೆ. ಕೂಡಲೇ ಎಚ್ಚೆತ್ತ ಕಾಲೇಜು ಸಿಬಂದಿ ಹಾಡನ್ನು ನಿಲ್ಲಿಸಿದ್ದಾರೆ. ವಿದ್ಯಾರ್ಥಿಯನ್ನು ಹಿಡಿದು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಹಾಡು ನಿಲ್ಲಿಸಿದರೂ, ವಿಶಾಲ್ ಆರ್ಭಟ ನೋಡಿದ ಪೋಷಕರು, ಕಾಲೇಜು ಸಿಬಂದಿ ದಂಗಾಗಿದ್ದಾರೆ. ಕಾಂತಾರ ಸಿನಿಮಾ ಬಂದ ಬಳಿಕ ಎಲ್ಲೆಲ್ಲೋ ದೈವದ ವೇಷ ಧರಿಸಿ ಕುಣಿಯುವುದನ್ನು ಮಾಡುತ್ತಾರೆ. ಕಾಲೇಜಿನ ವೇದಿಕೆಗಳಲ್ಲಿ ಭೂತ ನರ್ತನ ಸಾಮಾನ್ಯ ಎನ್ನುವಂತಾಗಿದೆ. ವಿದ್ಯಾರ್ಥಿಯ ಮೈಮೇಲೆ ಆವೇಶ ಬಂದಿರುವುದು ದೈವದ ಬಗ್ಗೆ ಅಪಹಾಸ್ಯ ಮಾಡುವವರಿಗೆ ಪಾಠ ಕಲಿಸಿರಬಹುದು.
College Student possessed by Panjurli Daiva in Bangalore after imitating like kantara
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 12:25 pm
HK News Staffer
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am