ಬ್ರೇಕಿಂಗ್ ನ್ಯೂಸ್
13-02-23 02:06 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.13: "ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನ, ಕೇವಲ ಪ್ರದರ್ಶನವಲ್ಲ. ಇದು ಭಾರತದ ಶಕ್ತಿಯ ಪ್ರದರ್ಶನವೂ ಹೌದು'' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಆಯೋಜಿಸಲಾಗಿರುವ 14ನೇ ಏರೋ ಇಂಡಿಯಾ ಪ್ರದರ್ಶನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಏರ್ ಶೋ ಭಾರತದ ಸಾಮರ್ಥ್ಯ ಸಾಕ್ಷಿ ಆಗಲಿದೆ. ಭಾರತದ ಮೇಲಿನ ವಿಶ್ವದ ವಿಶ್ವಾಸ ಹೆಚ್ಚಾಗುತ್ತಿದೆ. ಬಹುತೇಕ ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ಭಾಗಿಯಾಗುತ್ತಿವೆ. ದೇಶಗಳ ರಕ್ಷಣಾ ಸಚಿವರು, ವಿಶ್ವದ ಅನೇಕ ರಕ್ಷಣಾ ತಂತ್ರಜ್ಞಾನ ಹಾಗೂ ಪರಿಕರಗಳ ನಿರ್ಮಾತೃ ಕಂಪನಗಿಳ ಸಿಇಒಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
"ಈ ಪ್ರದರ್ಶನದಲ್ಲಿ ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉತ್ಪಾದನಾ ಕಂಪನಿಗಳು (ಎಂಎಸ್ಎಂಇ) , ಸ್ವದೇಶಿ ಸ್ಟಾರ್ಟ್ ಅಪ್ ಕೂಡಾ ಭಾಗಿಯಾಗುತ್ತಿವೆ. ಭೂಮಿಯಿಂದ ಆಕಾಶದವರೆಗೆ ಬಿಲಿಯನ್ ಅವಕಾಶಗಳ ರನ್ ವೇ ಇದಾಗಿದ್ದು, ಈ ಅವಕಾಶವನ್ನು ವಿಶ್ವದ ಎಲ್ಲಾ ರಕ್ಷಣಾ ಸಾಮಗ್ರಿಗಳ ತಯಾರಿಕಾ ಕಂಪನಿಗಳು ಸದ್ಬಳಕೆ ಮಾಡಿಕೊಳ್ಳಬೇಕು'' ಎಂದು ಅವರು ತಿಳಿಸಿದರು.



"ಏರೋ ಇಂಡಿಯಾವನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ ಶೋವನ್ನು ಆಯೋಜಿಸಿರುವುದಕ್ಕೆ ನಾನು ರಕ್ಷಣಾ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದ ಮೋದಿ, ಭಾರತದ ತಂತ್ರಜ್ಞಾನ ವಿಶ್ವದಲ್ಲೇ ಅತ್ಯಾಧುನಿಕವಾಗಿದೆ. ಈ ಏರ್ ಶೋನಲ್ಲಿ ಭಾಗವಹಿಸುವಂತೆ ಕರ್ನಾಟಕದ ಯುವಜನರಿಗೆ ನಾನು ಸ್ವಾಗತ ಕೋರುತ್ತೇನೆ. ಎಲ್ಲರೂ ಈ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ, ಹೊಸ ಸಂಶೋಧನೆಯಲ್ಲಿ ಭಾಗಿಯಾಗಬೇಕು'' ಎಂದು ಅವರು ತಿಳಿಸಿದರು.




ಭಾರತದಲ್ಲಿ ಅಭಿವೃದ್ಧಿಯಾಗುವ ತಂತ್ರಜ್ಞಾನಗಳ ವಿಶೇಷತೆಗಳನ್ನು ವಿವರಿಸಿದ ಅವರು, “ನಮ್ಮ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿರುತ್ತದೆ ಜೊತೆಗೆ, ನಂಬಲರ್ಹವಾದ ತಂತ್ರಜ್ಞಾನವೂ ಆಗಿರುತ್ತದೆ.ದೇಶಗಳ ರಕ್ಷಣಾ ಸಚಿವರು, ಸಿಇಒಗಳು ಭಾಗಿಯಾಗಿದ್ದಾರೆ. ಇದರ ಪ್ರಾತ್ಯಕ್ಷತೆಗೆ ಪ್ರಮಾಣತೆಯ ಅಗತ್ಯವಿಲ್ಲ. ಭಾರತದ ತಂತ್ರಜ್ಞಾನದ ಸಾಮರ್ಥ್ಯ ಏನು ಎಂಬುದು ತೇಜಸ್ ಎಂಬ, ಮೇಕ್ ಇನ್ ಇಂಡಿಯಾದಡಿ ಆರಂಭವಾದ ಬಹುಕಾರ್ಯ ನಿರ್ವಹಣೆಯ ಸಾಮರ್ಥ್ಯದ ಯುದ್ಧ ವಿಮಾನವೇ ಸಾಕ್ಷಿ. ಇದನ್ನು ಭಾರತದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದೆ. ತುಮಕೂರಿನಲ್ಲಿ ಎಚ್ ಎಎಲ್ ನ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನಗಳನ್ನು ನಿರ್ಮಿಸುವ ದೊಡ್ಡ ಕೇಂದ್ರ ಆರಂಭವಾಗಿದೆ. ಇದೆಲ್ಲವೂ ಆತ್ಮನಿರ್ಭರ ಭಾರತದ ಉದಾಹರಣೆಗಳಷ್ಟೇ'' ಎಂದು ಪ್ರಧಾನಿ ಮೋದಿ ವಿವರಿಸಿದರು.


"ಈಗ ಅವಕಾಶಗಳು ತೆರೆಯುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿ ಆಗುತ್ತಿದೆ. ರಕ್ಷಣಾ ಸಾಮಗ್ರಿಗಳನ್ನು ಹಿಂದೆ ವಿವಿಧ ದೇಶಗಳಿಂದ ತರಿಸಿಕೊಳ್ಳುತ್ತಿದ್ದ ಭಾರತ, ಇಂದು ಅತ್ಯಾಧುನಿಕವಾದ ರಕ್ಷಣಾ ಸಾಮಗ್ರಿಗಳನ್ನು ಸ್ವದೇಶದಲ್ಲೇ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಈವರೆಗೆ 12 ಸಾವಿರ ಕೋಟಿ ರೂ.ಗಳಷ್ಟು ರಕ್ಷಣಾ ಸಾಮಗ್ರಿಗಳು ವಿದೇಶಗಳಿಗೆ ಭಾರತದಿಂದ ರಫ್ತಾಗಿದೆ'' ಎಂದು ತಿಳಿಸಿದರು.


"ಭಾರತದ ರಕ್ಷಣಾ ಮಾರುಕಟ್ಟೆ ಬಹಳ ಸೂಕ್ಷ್ಮವಾಗಿದ್ದು, ಇದು ಭಾರತವನ್ನು ವಿಶ್ವದ ದೈತ್ಯ ರಕ್ಷಣಾ ಸಾಮಗ್ರಿಗಳ ನಿರ್ಮಾತೃ ರಾಷ್ಟ್ರಗಳ ಪೈಕಿ ಭಾರತವನ್ನು ನಿಲ್ಲಿಸಲಿರುವ ಲಾಂಚ್ ಪ್ಯಾಡ್ ರೀತಿ ಕೆಲಸ ಮಾಡಲಿದೆ. ಮುಂದೊಂದು ದಿನ, ಅತಿಹೆಚ್ಚು ರಕ್ಷಣಾ ಸಲಕರಣೆಗಳನ್ನು ವಿದೇಶಗಳಿಗೆ ರಫ್ತು ಮಾಡುವ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಲಿದೆ. ಹಾಗಾಗಿಯೇ, ನಾನು ಭಾರತದ ರಕ್ಷಣಾ ಸಾಮಗ್ರಿಗಳ ತಯಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಶ್ವದ ಕಂಪನಿಗಳಿಗೆ ಆಹ್ವಾನಿಸುತ್ತೇನೆ. ಹಾಗೆಯೇ, ಭಾರತದ ಖಾಸಗಿ ವಲಯಗಳಿಗೂ ಆಹ್ವಾನಿಸುತ್ತೇನೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Prime Minister Narendra Modi today inaugurated Asia's largest aero show, Aero India 2023, in Bengaluru. The 14th edition of the event will display indigenous equipment and technologies to forge partnerships with foreign companies.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm