ಬ್ರೇಕಿಂಗ್ ನ್ಯೂಸ್
26-07-23 08:10 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 26: ಡಿ.ಜೆ ಹಳ್ಳಿ,ಕೆ.ಜೆ ಹಳ್ಳಿ ಗಲಭೆ ಸೇರಿದಂತೆ ಇತರೆ ಕೋಮು ಗಲಭೆ ಕೇಸ್ಗಳಲ್ಲಿ ಬಂಧಿತರಾಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ಗೆ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಸಂಸದ ಎಸ್.ಮುನಿಸ್ವಾಮಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಕೋಲಾರದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಿದವರ ಮೇಲೆ ಕೇಸ್‌ಗಳನ್ನು ಹಾಕಿದ್ದಾರೆ. ಸುಮಾರು 70-80 ವರ್ಷಗಳಿಂದ ಇರುವವರ ಮೇಲಿನ ಕೇಸ್ ಗಳನ್ನೇ ಇದುವರೆಗೂ ವಾಪಸ್ ತಗೊಂಡಿಲ್ಲ. ಇಂಥ ಸಂದರ್ಭದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಇದ್ದು, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಜೀಪ್ ಗಳಿಗೆ ಬೆಂಕಿ ಇಟ್ಟಿರುವವರ ಮೇಲಿನ ಕೇಸ್ ಗಳನ್ನು ವಾಪಸ್ ತೆಗದುಕೊಳ್ಳಲು ಮುಂದಾಗಿದ್ದಾರೆಂದರೆ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ತನ್ವೀರ್ ಸೇಠ್ ಎಂದು ಕಿಡಿಕಾರಿದರು.
ಅವರದೇ ಸಂಘಟನೆ ಮುಖಂಡರು ಅವರನ್ನು ಕೊಲೆ ಮಾಡುವುದಕ್ಕೂ ಪ್ರಯತ್ನ ಪಟ್ಟಿದ್ದರು. ಅದನ್ನು ಸರಿ ಮಾಡಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಇವರ ಕೇಸ್ ಗಳನ್ನು ವಾಪಸ್ ತೆಗೆಸಿದ್ರೆ ನನ್ನನ್ನು ಬಿಟ್ಟು ಬಿಡ್ತಾರೆ ಎಂದು ಅಂದುಕೊಂಡಿದ್ದಾರೆ. ತನ್ವೀರ್ ಸೇಠ್ ಅವರೇ ನೀವು ಜೀವನ ಮಾಡುತ್ತಿರುವುದು ಭಾರತ ದೇಶದಲ್ಲಿ. ದೇಶ ವಿರೋಧಿಗಳು ಯಾರೇ ಇದ್ರು ಅಂತಹವರ ಮೇಲಿನ ಕೇಸ್ ಗಳನ್ನು ವಾಪಸ್ ತೆಗೆಸಿ ಅಂತ ಹೇಳುತ್ತಿರುವ ನಿಮಗೆ ನಾಚಿಕೆಯಾಗಲ್ವಾ. ನಿಮಗೆ ಜನ ಸತ್ಕಾರ ಮಾಡುವುದಿಲ್ಲ, ತಿರಸ್ಕಾರ ಮಾಡ್ತಾರೆ ಎಂದು ತನ್ವೀರ್ ಸೇಠ್ ವಿರುದ್ಧ ಸಂಸದ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ:
ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿ ಘಟನೆಯಲ್ಲಿ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ ಆರೋಪಿಗಳನ್ನು ಬಿಡುಗಡೆ ಮಾಡಲು ದಲಿತ ಗೃಹ ಸಚಿವರ ಮೇಲೆ ಒತ್ತಡ ತರಲಾಗಿದೆ. ಗೃಹ ಸಚಿವರು ತಪ್ಪಿತಸ್ಥರ ಬಿಡುಗಡೆಗೆ ಸೂಚಿಸಿದರೆ ಪಾಪ ಮಾಡಿದಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಪರಮೇಶ್ವರ್‌ಗೆ ಕಿವಿ ಮಾತು:
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ ಜಗನ್ನಾಥ ಭವನ ”ದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಶಾಸಕ ತನ್ವೀರ್ ಸೇಠ್ ಅವರು ಬರೆದ ಪತ್ರವನ್ನು ಸರಕಾರಕ್ಕೆ ಕಳಿಸಿದ್ದು, ಪತ್ರ ವಾಪಸ್ ಪಡೆಯಲು ಆಗ್ರಹಿಸಿದರು. ಇದರಲ್ಲಿ ನಿಮ್ಮನ್ನು ಸಿಲುಕಿಸುವ ಯತ್ನ ನಡೆದಿದೆ ಎಂದು ಡಾ.ಪರಮೇಶ್ವರರಿಗೆ ಕಿವಿಮಾತು " ಹೇಳಿದರು.
200 ಜನ ಬಂಧನ:
ಸುಮಾರು 200 ಜನರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗವಹಿಸದೆ ಇರುವ ಅನೇಕರನ್ನು ಅವತ್ತೇ ಬಿಡುಗಡೆ ಮಾಡಲಾಗಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿತ್ತು ಎಂದ ಅವರು, ಈಗ ಗೃಹ ಸಚಿವ ಡಾ. ಪರಮೇಶ್ವರರ ಮೇಲೆ ಒತ್ತಡ ಇರುವುದು ಸ್ಪಷ್ಟ. ಈ ಒತ್ತಡಕ್ಕೆ ಅವರು ಮಣಿಯಬಾರದಿತ್ತು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಇದು ಹಾಸ್ಯಾಸ್ಪದ ಎಂದರು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಪತ್ರ ಬರೆದವರು ಅಮಾಯಕರೇ ಎಂದು ಪ್ರಶ್ನಿಸಿದರು.
Tanveer Sait is the leader of Terror slams MP S Muniswamy after Tanveer Sait letter on DJ KJ Halli. The ruling Congress and BJP have come to confrontational mode yet again over the withdrawal of cases against the accused in the sensational DJ Halli-KG Halli violence case in the city.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 06:05 pm
Mangalore Correspondent
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
12-02-25 06:23 pm
Bangalore Correspondent
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm