ಬ್ರೇಕಿಂಗ್ ನ್ಯೂಸ್
15-08-23 10:53 pm HK News Desk ಕರ್ನಾಟಕ
ಬೀದರ್, ಆಗಸ್ಟ್ 15: ಬೀದರ್ ಜಿಲ್ಲೆಯ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿದ್ದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಬಿಜೆಪಿಯ ಶಾಸಕರೇ ಬಂಡಾಯ ಸಾರಿದ್ದಾರೆ. ಕೇಂದ್ರ ಸಚಿವ ಖೂಬಾ ವಿರುದ್ಧ 200 ಕೋಟಿ ರೂ. ಕೇಸ್ ಹಾಕಲು ಮಾಜಿ ಸಚಿವ ಪ್ರಭು ಚವ್ಹಾಣ್ ತಯಾರಿ ನಡೆಸಿದ್ದು ಪಕ್ಷದ ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಖೂಬಾ ವಿರುದ್ಧ ಕೇಸ್ ದಾಖಲು ಮಾಡುತ್ತೇನೆ ಎಂದು ಪ್ರಭು ಚವ್ಹಾಣ್ ಗುಡುಗಿದ್ದಾರೆ.
ನನ್ನ ಕ್ಷೇತ್ರ ಔರಾದ್ ನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಲು ಖೂಬಾ ಕಾರಣ. ಲೋಕಸಭೆ ಚುನಾವಣೆಗೆ ಅವರ ಬದಲಿಗೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು. ನಮ್ಮ ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ಖೂಬಾ ಕಾಂಗ್ರೆಸ್ ನಿಂದ ಬಂದವರು. ನಾನು ಮನೆಯಿಂದ ನೇರವಾಗಿ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ, ಬಿಜೆಪಿ ಪಕ್ಷದಲ್ಲೇ ಇದ್ದು ಸಾಯುತ್ತೇನೆ ಎಂದಿದ್ದಾರೆ.
ಭಗವಂತ ಖೂಬಾ ರಾವಣ ಇದ್ದ ಹಾಗೆ, ಅವರಿಗೆ ಅಹಂಕಾರ ಹೆಚ್ಚಾಗಿದೆ. ಔರಾದ್ ಜನತೆಯ ಆರಾಧ್ಯ ದೈವ ಅಮರೇಶ್ವರ ದೇಗುಲದಲ್ಲಿ ಕುಳಿತು ಸುಳ್ಳು ಹೇಳುತ್ತಿದ್ದಾರೆ. ಯಾರಿಗೂ ಪರಿಚಯವೇ ಇಲ್ಲದೇ ಇದ್ದ ಖೂಬಾರನ್ನು ಜನರಿಗೆ ಪರಿಚಯಿಸಿದ್ದೆ ನಾನು. ಅವರು ಪಕ್ಕಾ ವೈಟ್ ಸುಳ್ಳುಗಳನ್ನು ಹೇಳುತ್ತಿದ್ದಾರೆ, 2014ರಲ್ಲಿ ಟಿಕೆಟ್ ಕೊಡಿಸಲು ನಾನು ಕಸರತ್ತು ಮಾಡಿದ್ದೆ. ಅಂದು ಖೂಬಾಗೆ ಟಿಕೆಟ್ ನೀಡದಿದ್ದರೆ ನಾನು ವಿಷ ಸೇವಿಸುವುದಾಗಿ ಹೇಳಿದ್ದೆ.
ನಾನು ಎಷ್ಟು ಪಕ್ಷ ನಿಷ್ಠೆ ಇದ್ದೇನೆ ಎಂಬುವುದು ಕ್ಷೇತ್ರದ ಜನರಿಗೆ ಗೊತ್ತಿದೆ, ಬಿಜೆಪಿ ನಾಯಕರಿಗೆ ಗೊತ್ತಿದೆ. ಲೋಕಸಭೆಗೆ ಟಿಕೆಟ್ ಕೊಡಿಸಿದ್ದಲ್ಲದೇ ತನು, ಮನ, ಧನದಿಂದ ಖೂಬಾ ಗೆಲುವಿಗಾಗಿ ಕೆಲಸ ಮಾಡಿದ್ದೇನೆ. ಇವತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ ಅಭ್ಯರ್ಥಿಗಳ ಸೋಲಿಸಲು ಪ್ರಯತ್ನಿಸಿದೀರಿ. ಈಗ ನಮ್ಮನ್ನೇ ಪಕ್ಷ ವಿರೋಧ ಕೆಲಸ ಮಾಡಿದ್ದೇವೆಂದು ಹೇಳುತ್ತಾರೆ.
ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಇವತ್ತು ಎಲ್ಲಾ ಕ್ಷೇತ್ರದಲ್ಲೂ ಖೂಬಾ ಪರಿವಾರವರೇ ಗುತ್ತಿಗೆದಾರರು ಇದಾರೆ. ಅವರ ಕುಟುಂಬ ವರ್ಗದವರಿಗೆ ಎಲ್ಲಾ ಟೆಂಡರ್ ಗಳು ಕೊಡುತ್ತಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಬೆಳೆಸಿಲ್ಲ, ಯಾವುದೇ ಕ್ಷೇತ್ರದಲ್ಲಿ ಖೂಬಾ ಬೆಂಬಲಿತ ಕಾರ್ಯಕರ್ತರಿಲ್ಲ. ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಲಸ ಕೊಟ್ಟು ಅವರಿಗೆ ಬೆಳೆಸಿದಾರೆ. ಅವರು ನಮಗೆ ಕೊಟ್ಟಿರುವ ಕಿರುಕುಳ, ಜಿಲ್ಲೆಯಲ್ಲಿ ಮಾಡಿರುವ ಪಕ್ಷ ವಿರೋಧಿ ಕೆಲಸದ ಬಗ್ಗೆ ದಾಖಲೆ ಸಿದ್ಧವಾಗಿದೆ.
ಖೂಬಾರಿಂದ ನನಗೆ ಜೀವ ಬೆದರಿಕೆ ಇರುವ ಬಗ್ಗೆ ಎಸ್ಪಿಗೆ ದೂರು ಕೊಟ್ಟಿದ್ದೇನೆ. ಕೆಲವು ಗುಂಡಾಗಳನ್ನ ಜೊತೆಗೆ ಇಟ್ಟುಕೊಂಡು ನನಗೆ ಬೆದರಿಸಲು ಹೊರಟಿದ್ದಾರೆ ಎಂದು ಔರಾದ್ ನಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
Former Union Minister of State for Chemicals and Fertilizers Prabhu Chauhan has attacked Bhagwanth Ghuba, calling him an expert in "politics of accommodation". Prabhu Chauhan had accused Bhagwant Khuba of planning to kill him and hold a by-election. Chouhan once again lashed out at Khaba, who had denied this. Also, a fine of Rs 200 crore has been slapped on Khooba. He said he would file a defamation case.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 10:58 pm
Mangalore Correspondent
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm