ಬ್ರೇಕಿಂಗ್ ನ್ಯೂಸ್
21-08-23 08:37 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 21: ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಮದ್ಯದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿದ್ದರು. ಆದರೆ ದರ ಏರಿಕೆಯ ಬೆನ್ನಲ್ಲೇ ಮದ್ಯಪ್ರಿಯರು ಕುಡಿಯುವ ಪ್ರಮಾಣವನ್ನೇ ಕಡಿಮೆ ಮಾಡಿದ್ದು ಸರ್ಕಾಕ್ಕೆ ಶಾಕ್ ನೀಡಿದ್ದಾರೆ.
ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿತ್ತು. ಈ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಸುಲಭವಾಗಿ ಹಣ ಹೊಂದಾಣಿಕೆ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ಮದ್ಯಪ್ರಿಯರು ಕುಡಿಯುವ ಪ್ರಮಾಣವನ್ನೇ ಕಡಿಮೆ ಮಾಡಿದ್ದು ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣವೇ ಶೇ.15ರಷ್ಟು ಕುಸಿತ ಕಂಡಿದೆ. ಹೆಚ್ಚು ಬಿಕರಿಯಾಗುತ್ತಿದ್ದ ಬಿಯರ್ ಮಾರಾಟದಲ್ಲೂ ದಿಢೀರ್ ಕುಸಿತವಾಗಿದೆ. ಮದ್ಯ ಮಾರಾಟದಿಂದ ಪ್ರತಿ ತಿಂಗಳು 2,500 ಕೋಟಿ ರೂ. ಬರುತ್ತಿದ್ದ ಆದಾಯ ಆಗಸ್ಟ್ ತಿಂಗಳಲ್ಲಿ 962 ಕೋಟಿ ರೂ.ಗೆ ಕುಸಿದಿದೆ. ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದ್ದು ಮದ್ಯ ಪ್ರಿಯರೇ ಕುಡಿಯುವುದನ್ನು ಕಡಿಮೆ ಮಾಡಿರುವುದು ಕಂಡುಬಂದಿದೆ.
ಇದೇ ವೇಳೆ, ಬೆಲೆ ಏರಿಕೆ ಪರಿಣಾಮ ಕಡಿಮೆ ಬೆಲೆಯ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಸ್ಕಾಚ್ ಕುಡಿಯುತ್ತಿದ್ದ ಸಿರಿವಂತರು ಪ್ರೀಮಿಯಮ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದರೆ, ಪ್ರೀಮಿಯಮ್ ಬ್ರಾಂಡ್‌ನವರು ನಾರ್ಮಲ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಸರ್ಕಾರದ ಆದಾಯ ಸಂಗ್ರಹದ ಮೇಲೂ ವ್ಯತಿರಿಕ್ತ ಪರಿಣಾಮ ಆಗಿದೆ.
ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಸಗಟು ವ್ಯಾಪಾರಿಗಳು ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆಯೂ ಒಟ್ಟಾರೆ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್ ಶೇ.5ರಷ್ಟು ಕುಸಿದಿದೆ. ಇದು ಸರಕಾರದ ಆದಾಯ ಸಂಗ್ರಹದ ಮೇಲೆ ತೀವ್ರ ಪರಿಣಾಮ ಬೀರಿದ್ದು ಸರ್ಕಾರದ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ತೊಡಕಾಗಲಿದೆ.
The state government has increased the price of liquor to accumulate funds for the guarantee schemes that were announced by it as it assumed power. However, the liquor buyers have shocked the government by not buying liquor in quantities that was expected.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm