ಬ್ರೇಕಿಂಗ್ ನ್ಯೂಸ್
23-08-23 03:35 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 23: ವಿಕ್ರಮ್ ಲ್ಯಾಂಡರ್ ನಿಗದಿಯಂತೆಯೇ ಚಂದ್ರನ ಅಂಗಳ ತಲುಪಲಿದೆ. ಇದಕ್ಕಾಗಿ ಯಾವುದೇ ಪ್ಲಾನ್ ಬಿ ಯೋಜನೆ ಇಸ್ರೋ ಮುಂದಿಲ್ಲ ಎಂದು ಇಸ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚಂದ್ರಯಾನ -3 ರ ಯೋಜನೆಯಂತೆಯೇ ಎಲ್ಲವೂ ನಡೆಯಲಿದೆ. ಬುಧವಾರ ನಿಗದಿಯಾದಂತೆ ವಿಕ್ರಮ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಇಸ್ರೋ ಸನ್ನದ್ದವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವುದೇ ಪ್ಲಾನ್ ಬಿ ಹೊಂದಿಲ್ಲ ಎಂದು ಇಸ್ರೋದ ಉನ್ನತ ಅಧಿಕಾರಿ ತಿಳಿಸಿದ್ದಾರೆ. ವಿಕ್ರಂ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಯಾವುದೇ ಮುಂದೂಡಿಕೆ ಅಥವಾ ಪ್ಲಾನ್ ಬಿ ಪ್ಲಾನ್ ಅನ್ನು ಇಸ್ರೋ ಹೊಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರೊಪಲ್ಷನ್ ಮಾಡ್ಯೂಲ್ ನಿಂದ ಹೊರ ಬಂದಿರುವ ವಿಕ್ರಮ್, ಇಸ್ರೋ ಯೋಜಿಸಿದಂತೆ ಚಂದ್ರನ ಅಂಗಳ ತಲುಪಲು ಹಂತ ಹಂತವಾಗಿ ಮುಂದಡಿ ಇಡುತ್ತಿದ್ದಾನೆ. ಇನ್ನು ಲ್ಯಾಂಡರ್ನ ಎಲ್ಲಾ ವ್ಯವಸ್ಥೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದು ಇಸ್ರೋ ದೃಢಪಡಿಸಿದೆ. ಲ್ಯಾಂಡರ್ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದಲ್ಲಿ ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗುವುದು ಎಂದು ಇಸ್ರೋದ ಹಿರಿಯ ತಂತ್ರಜ್ಞರು ಎರಡು ದಿನಗಳ ಹಿಂದೆ ತಿಳಿಸಿದ್ದರು.
ISRO ಪ್ರಕಾರ, ವಿಕ್ರಂ ಲ್ಯಾಂಡರ್ ತನ್ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಜೊತೆಗೆ ಲ್ಯಾಂಡಿಂಗ್ ಸೈಟ್‌ನ ಚಿತ್ರಗಳನ್ನು ಸೆರೆಹಿಡಿಯುತ್ತಿದೆ. ಈ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಆನ್‌ಬೋರ್ಡ್ ಚಂದ್ರನ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಸಹಾಯ ಮಾಡುತ್ತದೆ. ವಿಕ್ರಮ್ ಲ್ಯಾಂಡರ್, ಹಜಾರ್ಡ್ ಡಿಟೆಕ್ಷನ್ ಅಂಡ್ ಅವಾಯಿಡೆನ್ಸ್ ಕ್ಯಾಮೆರಾ (LHDAC) ಎಂಬ ಮತ್ತೊಂದು ಕ್ಯಾಮೆರಾವನ್ನು ಸಹ ಹೊಂದಿದೆ. ಈ ಕ್ಯಾಮರಾ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲು ಬೇಕಾದ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಜಾಗ ಹುಡುಕಲು ಈ ಕ್ಯಾಮರಾ ಸಹಾಯ ಮಾಡುತ್ತದೆ.
India’s ambitious lunar mission Chandrayaan-3 is set to land on the Moon on August 23, 2023, around 18:04 IST. Ahead of the much-awaited landing of India on the Moon’s south pole, SAC Director revealed ‘Plan-B’ for Chandrayaan-3. The landing of the module will take place on Aug 27 if the factors do not appear favourable on Aug 23, informed SAC Director Desai. In the most recent development, Chandrayaan-2’s orbiter established a two-way connection with Chandrayaan-3’s lander module today.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm