ಬ್ರೇಕಿಂಗ್ ನ್ಯೂಸ್
23-08-23 04:54 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 22: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆ ಯಶಸ್ವಿಯಾಗಲೆಂದು ವಿಶ್ವದಾದ್ಯಂತ ಶುಭ ಹಾರೈಸಲಾಗುತ್ತಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲು ದೇವಾಲಯಗಳಲ್ಲಿ ವಿಶೇಷ ಪೂಜೆ–ಹವನ ನಡೆಸಲಾಗುತ್ತಿದೆ. ಮಸೀದಿ, ಚರ್ಚ್‌ಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಚಂದ್ರಯಾನ ಯಶಸ್ವಿಯಾಗಲೆಂದು ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಟ್ವಿಟರ್) ಹಂಚಿಕೊಂಡಿದೆ.
ಚಂದ್ರಯಾನ–3ರ ಚಂದ್ರ ಸ್ಪರ್ಶ ಇಂದು ಸಂಜೆ 6.04 ಕ್ಕೆ ಸರಿಯಾಗಿ ಸಮಯ ನಿಗದಿಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಭಾನುವಾರ ಲ್ಯಾಂಡರ್‌ನ ವೇಗ ತಗ್ಗಿಸಿ, ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹದಲ್ಲಿ ಅಂದರೆ, 25 ಕಿ.ಮೀ ಕಕ್ಷೆಗೆ ತಂದು ನೆಲೆಗೊಳಿಸಲಾಗಿದೆ. ಲ್ಯಾಂಡರ್ ಈಗ 25 ಕಿ.ಮೀ x 134 ಕಕ್ಷೆಯಲ್ಲಿದೆ.
ನೋದನ ಘಟಕದಿಂದ (ಪ್ರೊಪಲ್ಷನ್ ಮಾಡ್ಯೂಲ್) ಪ್ರತ್ಯೇಕಗೊಂಡ ನಂತರ ಎರಡು ಹಂತಗಳಲ್ಲಿ ಲ್ಯಾಂಡರ್‌ನ ವೇಗ ತಗ್ಗಿಸುವ ಕಾರ್ಯ ನಡೆದಿದೆ. ಈಗ ಆಂತರಿಕ ತಪಾಸಣೆ ಕಾರ್ಯ ನಡೆಯುತ್ತಿದ್ದು, ಇಳಿದಾಣದ (ಲ್ಯಾಂಡಿಂಗ್ ಸ್ಥಳ) ಪ್ರದೇಶದಲ್ಲಿ ಸೂರ್ಯೋದಯಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಬುಧವಾರ ಸಂಜೆ 5.45 ಕ್ಕೆ ಸರಿಯಾಗಿ ಕಕ್ಷೆಯಿಂದ ಲ್ಯಾಂಡರ್ ಅನ್ನು ಕೆಳಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ತಿಳಿಸಿದೆ.
ಲ್ಯಾಂಡರ್ (ವಿಕ್ರಮ್) ಸಂಜೆ 6.04 ಕ್ಕೆ ಚಂದ್ರ ಸ್ಪರ್ಶ ಮಾಡಲಿದೆ. ಈ ಇಡೀ ಪ್ರಕಿಯೆಯ ನೇರ ವಿಡಿಯೊ ಪ್ರಸಾರ ಸಂಜೆ 5.27 ಕ್ಕೆ ಆರಂಭವಾಗಲಿದೆ. ಇಸ್ರೊ ವಬ್‌ಸೈಟ್, ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ಪೇಜ್, ಡಿಡಿ ನ್ಯಾಷನಲ್ ಚಾನೆಲ್‌ನಲ್ಲಿ ನೇರ ಪ್ರಸಾರವಿರುತ್ತದೆ. ಎಲ್ಲ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು ಎಂದು ಇಸ್ರೊ ಮನವಿ ಮಾಡಿದೆ.
Prayers in temples, mosques, and churches coincided with the countdown for the Chandrayaan-3 lander’s descent as schoolchildren waited for live screenings of its landing across the country while Prime Minister Narendra Modi was expected to watch it from South Africa amid feverish anticipation on Wednesday.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm