ಬ್ರೇಕಿಂಗ್ ನ್ಯೂಸ್
23-08-23 05:51 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಆಗಸ್ಟ್ 23: ಚಿಕ್ಕಬಳ್ಳಾಪುರ ಸಂಸದ, ಬಿಜೆಪಿ ಹಿರಿಯ ಮುಖಂಡ ಬಿ.ಎನ್. ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಪಕ್ಷದ ನಾಯಕರ ಬಗ್ಗೆಯೂ ಟೀಕೆ ಮಾಡಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಬರುತ್ತೋ ಇಲ್ವೋ.. ಮೋದಿ ಮತ್ತೆ ಪ್ರಧಾನಿ ಆಗ್ತಾರೋ ಇಲ್ವೋ ಹೇಳಕ್ಕಾಗಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿ ಅಧಿಕಾರ ನಡೆಸ್ತಿದೆ ಎಂದು ಹೇಳಿ ಕಾಂಗ್ರೆಸ್ ಪರ ನಿಲುವು ತೋರಿದ್ದಾರೆ.
ಮುಂದಿನ ದಿನಗಳಲ್ಲಿ ವಯಸ್ಸಿನ ಕಾರಣಕ್ಕೆ ನನಗೆ ಪಕ್ಷದಿಂದ ಟಿಕೇಟ್ ನೀಡಲ್ಲ. ನನಗೀಗ 81 ವರ್ಷ. ಬಿಜೆಪಿಯಲ್ಲಿ 80ರ ನಂತರ ಟಿಕೇಟ್ ಕೊಡಲ್ಲ. ಹಾಗಾಗಿ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಬದಲಾಗಿ ಇನ್ಮುಂದೆ ಪಕ್ಷದ ಚಟುವಟಿಕೆ ಮಾಡಿಕೊಂಡಿರ್ತೀನಿ ಅಷ್ಟೆ ಎಂದು ಬಚ್ಚೇಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವೂ ದುರ್ಬಲ ಆಗ್ತಿದೆ. ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆ, ರಾಜ್ಯಾಧ್ಯಕ್ಷರ ಆಯ್ಕೆಯನ್ನೂ ಮಾಡಿಕೊಂಡಿಲ್ಲ. ಈ ರೀತಿಯ ನಿರ್ಲಕ್ಷ್ಯ ಧೋರಣೆಯಿಂದಾಗಿಯೇ ಪಕ್ಷಕ್ಕೆ ಬಂದಿದ್ದ ಬಾಂಬೇ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ಘರ್ ವಾಪಸಿ ಆಗುತ್ತಿದ್ದಾರೆ. ಎಂಎಲ್ಎಗಳಿಗೆ ಅನುದಾನ ಬರದೆ ಅಭಿವೃದ್ದಿ ಕೆಲಸಗಳಾಗ್ತಿಲ್ಲ.
ರಾಜ್ಯ ಸರ್ಕಾರ ದುಡ್ಡು ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಮೋಸ ಮಾಡಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಬರುತ್ತೋ ಇಲ್ವೋ.. ಮೋದಿ ಮತ್ತೆ ಪ್ರಧಾನಿ ಆಗ್ತಾರೋ ಇಲ್ವೋ ಹೇಳಕ್ಕಾಗಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿ ಅಧಿಕಾರ ನಡೆಸ್ತಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಜನಪರವಾಗಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ದೇವೇಗೌಡ, ಕುಮಾರಸ್ವಾಮಿ ಇರೋವರೆಗೂ ಜೆಡಿಎಸ್ ಗೆ ತೊಂದರೆ ಇಲ್ಲ ಎಂದು ಹೇಳಿದ ಬಚ್ಚೇ ಗೌಡ, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಉಳಿದುಕೊಳ್ಳುತ್ತೆ ವಿನಾ ಬಿಜೆಪಿ ಜತೆ ವೀಲೀನ ಆಗೊಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದರಾಗಿ ಪಕ್ಷಕ್ಕೇ ಡ್ಯಾಮೇಜ್ ಆಗುವ ರೀತಿ ಬಚ್ಚೇಗೌಡ ಹೇಳಿಕೆ ನೀಡಿರುವುದು ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ನಡೆದ ಡಿಎಲ್ಆರ್ ಸಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸಂಸದ ಬಚ್ಚೇಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
The BJP Lok Sabha member of Chikkaballapur, B N Bache Gowda has announced retirement from electoral politics since he has been told that he won’t be getting the ticket for next year's elections. “The BJP has decided not to field anyone who has crossed 75 years for Lok Sabha polls. I have been categorically told that I will not be given ticket this time,” Bache Gowda said. He was speaking to reporters here on Tuesday.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm