ಬ್ರೇಕಿಂಗ್ ನ್ಯೂಸ್
23-08-23 06:28 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 23: ಭಾರತದ ಇಸ್ರೋ ವಿಜ್ಞಾನಿಗಳು ತ್ರಿವಿಕ್ರಮ ಸಾಧನೆಯನ್ನು ಮಾಡಿದ್ದಾರೆ. ಇಸ್ರೋದಿಂದ ಒಂದು ತಿಂಗಳ ಹಿಂದೆ ಕಳಿಸಿಕೊಟ್ಟಿದ್ದ ಗಗನ ನೌಕೆಯು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಆಮೂಲಕ ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಯ ಹೊಸ ಇತಿಹಾಸವನ್ನು ಭಾರತ ದಾಖಲಿಸಿದೆ.
ವಿಕ್ರಮ್ ಲ್ಯಾಂಡರ್ ಕೊನೆಯ 15 ನಿಮಿಷಗಳಲ್ಲಿ ಕಕ್ಷೆಯಿಂದ ಚಂದ್ರನ ಅಂಗಳದಲ್ಲಿ ಇಳಿಯುವುದೇ ಸವಾಲಾಗಿತ್ತು. ಆಮೆಗತಿಯಲ್ಲೇ ಗಗನ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಇಳಿಸಿದ್ದಾರೆ. ನಿಧಾನಕ್ಕೆ ಇಳಿದು ಚಂದ್ರನ ಮೇಲ್ಮೈಯಿಂದ 125 ಮೀಟರ್ ಎತ್ತರದಲ್ಲಿರುವಾಗಲೇ ನೌಕೆಯ ಪ್ರೊಪೆಲರ್ ಓಪನ್ ಆಗಿದ್ದು, ಇದರ ಬೆನ್ನಲ್ಲೇ ವಿಜ್ಞಾನಿಗಳು ಎದ್ದು ನಿಂತಿದ್ದಾರೆ. ಆನಂತರ ನಿಧಾನಕ್ಕೆ ಇಳಿಯುತ್ತಾ ನಾಲ್ಕು ಕಾಲುಗಳು ಓಪನ್ ಆಗುತ್ತಲೇ ನಿಗದಿಯಂತೆ ಭಾರತೀಯ ಕಾಲಮಾನ ಆಗಸ್ಟ್ 23ರ ಸಂಜೆಯ 6.06ಕ್ಕೆ ಯಶಸ್ವಿಯಾಗಿ ನೌಕೆ ಚಂದ್ರನ ನೆಲದಲ್ಲಿ ತಳವೂರಿದೆ.
ಗಗನ ನೌಕೆಯನ್ನು ಕೊನೆಯ 15 ನಿಮಿಷದಲ್ಲಿ ಇಳಿಸುವ ವಿಡಿಯೋವನ್ನು ಇಸ್ರೋ ವಿಜ್ಞಾನಿಗಳು ಲೈವ್ ಆಗಿ ತೋರಿಸಿದ್ದಾರೆ. ಇಸ್ರೋ ಸಂಸ್ಥೆಯ ಅಧಿಕೃತ ಯೂಟ್ಯೂಬನ್ನು ಜಗತ್ತಿನಾದ್ಯಂತ 70 ಲಕ್ಷ ಜನರು ಲೈವ್ ಆಗಿ ನೋಡಿದ್ದು, ಇದೊಂದು ದಾಖಲೆಯಾಗಿದೆ. ಇದಲ್ಲದೆ, ದೇಶ- ವಿದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಅಸಂಖ್ಯಾತ ಕೋಟ್ಯಂತರ ಜನರು ಬೇರೆ ಬೇರೆ ಮಾಧ್ಯಮಗಳ ಮೂಲಕ ಲೈವ್ ಆಗಿ ವೀಕ್ಷಿಸಿದ್ದಾರೆ.
ಭಾರತದ ವಿಕ್ರಮ ಸಾಧನೆಯನ್ನು ಇಡೀ ಜಗತ್ತಿನ ಜನರು ಬೆರಗು ಗಣ್ಣಿನಿಂದ ನೋಡುತ್ತಿದ್ದರು. ಮೊನ್ನೆಯಷ್ಟೇ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ಕಳಿಸಿಕೊಟ್ಟಿದ್ದ ಗಗನ ನೌಕೆಯು ಚಂದ್ರನ ಅಂಗಳಕ್ಕೆ ಇಳಿಯುವ ಮೊದಲೇ ಬ್ಲಾಸ್ಟ್ ಆಗಿತ್ತು. ಹೀಗಾಗಿ ಭಾರತವು ಅದರ ಮೊದಲೇ ಕಳಿಸಿಕೊಟ್ಟಿದ್ದ ಗಗನ ನೌಕೆಯ ಬಗ್ಗೆ ವಿಶ್ವಾದ್ಯಂತ ಕುತೂಹಲ, ಕೌತುಕದಿಂದ ಜನರು ನೋಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರೂ, ಅಲ್ಲಿಂದಲೇ ಲೈವ್ ಆಗಿ ನೋಡುತ್ತ ಕುತೂಹಲ ಹೆಚ್ಚಿಸಿದ್ದರು.
ನೌಕೆಯು ಯಶಸ್ವಿಯಾಗಿ ಇಳಿದ ಕೂಡಲೇ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಪರಸ್ಪರ ಕರತಾಡನ ಮಾಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ಜನರ ಹಾರೈಕೆಯೂ ಫಲ ನೀಡಿದ್ದು, ಜನರು ತಾವೇ ಸಾಧನೆ ಮಾಡಿದಂತೆ ಸಂಭ್ರಮ ಪಟ್ಟಿದ್ದಾರೆ. ಚಂದ್ರನ ಮೇಲೆ ನೌಕೆ ಇಳಿದ ಕೂಡಲೇ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 140 ಕೋಟಿ ಜನರ ಬಹುದಿನಗಳ ಆಸೆ ಈಡೇರಿದೆ. ವಿಜ್ಞಾನಿಗಳು ಮಾಡಿರುವ ಈ ಸಾಧನೆ ಹೊಸ ವಿಶ್ವಾಸ, ಹೊಸ ಉತ್ಸಾಹ ಮೂಡಿಸಿದೆ. ಭವಿಷ್ಯದ ಹೊಸ ಯೋಜನೆಗಳಿಗೆ ಮತ್ತಷ್ಟು ಭರವಸೆ ಮೂಡಿಸಿದೆ. ಇದಕ್ಕೆ ಕಾರಣವಾದ ಎಲ್ಲ ವಿಜ್ಞಾನಿಗಳಿಗೆ ಶಹಭಾಷ್ ಹೇಳುತ್ತೇನೆ ಎಂದಿದ್ದಾರೆ.
The Lander Module (LM) of the Indian Space Research Organisation’s (ISRO) third lunar mission Chandrayaan-3, launched on July 14, has succesfully landed on Moon on August 23. The LM is propelling towards the moon surface in the intended trajectory, the space organisation said.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm