Pm Modi at ISRO, Bangalore: ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ 'ಶಿವಶಕ್ತಿ' ಎಂದು ಹೆಸರು ; ಆಗಸ್ಟ್ 23 ಇನ್ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ ಪ್ರಧಾನಿ ಮೋದಿ 

26-08-23 12:38 pm       HK News Desk   ಕರ್ನಾಟಕ

2019ರಲ್ಲಿ ‘ಚಂದ್ರಯಾನ-2’ರ ವಿಕ್ರಮ್ ಲ್ಯಾಂಡರ್, ಚಂದ್ರನ ನೆಲದ ಮೇಲೆ ಅಪ್ಪಳಿದ ಜಾಗವನ್ನು ಇನ್ನು ಮುಂದೆ ತಿರಂಗಾ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ.

ಬೆಂಗಳೂರು, ಆಗಸ್ಟ್ 26: 2019ರಲ್ಲಿ ‘ಚಂದ್ರಯಾನ-2’ರ ವಿಕ್ರಮ್ ಲ್ಯಾಂಡರ್, ಚಂದ್ರನ ನೆಲದ ಮೇಲೆ ಅಪ್ಪಳಿದ ಜಾಗವನ್ನು ಇನ್ನು ಮುಂದೆ ತಿರಂಗಾ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ.

‘ಚಂದ್ರಯಾನ - 3’ ಯೋಜನೆಯ ವಿಕ್ರಮ್ ಲ್ಯಾಂಡರ್ ನೌಕೆಯು ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ಯ (ಇಸ್ರೋ) ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿನಲ್ಲಿ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಘೋಷಣೆಯನ್ನು ಮಾಡಿದ್ದಾರೆ.

ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿರುವ ‘ಇಸ್ರೋ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ಆ್ಯಂಡ್ ನೆಟ್ ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್’ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಚಂದ್ರಯಾನ-2’ ಯೋಜನೆಯು ವಿಫಲವಾಗಿದೆ ಎಂದು ನಾನು ಹೇಳಲು ಬಯಸುವುದಿಲ್ಲ. ಅದು ನಮ್ಮ ಗೆಲುವಿನ ಸೋಪಾನ ಮೆಟ್ಟಿಲಾಗಿದೆ. ‘ಚಂದ್ರಯಾನ -2’ ಯೋಜನೆಯಡಿ ಕಳುಹಿಸಲಾಗಿದ್ದ ಆಕಾಶ ನೌಕೆಯು, ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಯಿತು. ಆದರೆ, ಆ ವೈಫಲ್ಯತೆಯನ್ನು ಸವಾಲಾಗಿ ತೆಗೆದುಕೊಂಡ ನಮ್ಮ ವಿಜ್ಞಾನಿಗಳು ಇಂದು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ‘ಚಂದ್ರಯಾನ -3’ರ ನೌಕೆಯು ಚಂದ್ರನಲ್ಲಿ ಸುರಕ್ಷಿತವಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

What is 'Jawahar point' on Moon and it's connection with Chandrayaan-1 |  Mint

ಇಂದು ನಾವು ಗಳಿಸಿರುವ ಈ ಯಶಸ್ಸು, ‘ಚಂದ್ರಯಾನ -2’ರ ವೈಫಲ್ಯದಿಂದಲೇ ಬಂದದ್ದು. ಅದು ನಮ್ಮ ಆಲೋಚನಾ ಶಕ್ತಿಗೆ ಪ್ರೇರಣೆ ನೀಡಿದೆ. ಎಂಥ ತೊಂದರೆಗಳು ಬಂದರೂ ಬಗ್ಗದೇ, ಜಗ್ಗದೇ ಪುನಃ ಉತ್ಸಾಹದಿಂದ ಪುಟಿದೆದ್ದು ಅಗಾಧವಾದ ಸಾಧನೆಯ ಕಡೆಗೆ ಭಾರತ ಎಂದೆಂದಿಗೂ ಸಾಗುತ್ತದೆ ಎಂಬುದನ್ನು ಇಡೀ ವಿಶ್ವಕ್ಕೆ ಆ ವೈಫಲ್ಯ ಮನದಟ್ಟು ಮಾಡಿಸಿದೆ. ಹಾಗಾಗಿ, ‘ಚಂದ್ರಯಾನ-2’ರ ಲ್ಯಾಂಡರ್ ಬಿದ್ದ ಜಾಗವನ್ನು ತಿರಂಗಾ ಪಾಯಿಂಟ್ ಎಂದು ಮುಂದೆ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

ಇನ್ಮುಂದೆ ಆಗಸ್ಟ್ 23 'ರಾಷ್ಟ್ರೀಯ ಬಾಹ್ಯಾಕಾಶ ದಿನ ;

ಪ್ರಧಾನಿ ಮೋದಿ ಘೋಷಣೆ ಚಂದ್ರಯಾನ-3 ಅಭೂತಪೂರ್ವ ಯಶಸ್ಸನ್ನು ಗುರುತಿಸಲು ಇನ್ಮುಂದೆ ಭಾರತವು ಆಗಸ್ಟ್ 23 ಅನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವಾಗಿ ಆಚರಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಭಾರತದ ಚಂದ್ರಯಾನದ ಯಶಸ್ವಿ ಮಿಷನ್‌ ಹಿಂದಿನ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನೀವು ‘ಮೇಕ್ ಇನ್ ಇಂಡಿಯಾ’ ಅನ್ನು ಚಂದ್ರನಲ್ಲಿಗೆ ಕೊಂಡೊಯ್ದಿದ್ದೀರಿ' ಎಂದು ಶ್ಲಾಘಿಸಿದರು.

Modi in Bangalore Live: August 23 to be celebrated as National Space Day,  announces PM Modi after ISRO Chandrayaan 3 Moon landing success

ಚಂದ್ರಯಾನ-3 ಲ್ಯಾಂಡರ್‌ನ ಯಶಸ್ಸಿನ ಸ್ಮರಣಾರ್ಥ ವಿಕ್ರಮ್ ಲ್ಯಾಂಡರ್ ಲ್ಯಾಂಡರ್ ಕಾಲೂರಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಅವರು ಸ್ಥಳದ ಹೆಸರನ್ನು ಘೋಷಿಸಿದರು.

PM Modi meets Chandrayaan-3 team at ISRO; says moon's landing point to be called  Shiv Shakti : The Tribune India

ಇದಲ್ಲದೆ, ಅವರು ಚಂದ್ರಯಾನ-2 ರ ಕ್ರ್ಯಾಶ್ ಲ್ಯಾಂಡಿಂಗ್ ಸೈಟ್‌ನ ಹೆಸರನ್ನು 'ತಿರಂಗಾ ಪಾಯಿಂಟ್' ಎಂದು ಘೋಷಿಸಿದರು. ಚಂದ್ರಯಾನ-2 2019 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ತನ್ನ ಹೆಜ್ಜೆಗುರುತನ್ನು ಬಿಟ್ಟಿದೆ ಎಂದು ಅವರು ಹೇಳಿದರು. ಭಾರತದ ಚಂದ್ರನ ಮಿಷನ್‌ನ ಯಶಸ್ಸಿನಲ್ಲಿ ಇಸ್ರೋದ ಮಹಿಳಾ ವಿಜ್ಞಾನಿಗಳಿಗೆ ಅವರು ಮನ್ನಣೆ ನೀಡಿದರು.

ಪ್ರಧಾನಮಂತ್ರಿ ಅವರನ್ನು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಖುದ್ದು ಬರಮಾಡಿಕೊಂಡರು. ಇಬ್ಬರೂ ಅಪ್ಪುಗೆಯೊಂದಿಗೆ ಪರಸ್ಪರ ಶುಭಾಶಯ ಕೋರಿದರು. ಯೋಜನೆಯ ಹಿಂದಿನ ವಿಜ್ಞಾನಿಗಳ ತಂಡದೊಂದಿಗೆ ಗ್ರೂಪ್ ಫೋಟೋಗೆ ಪ್ರಧಾನಿ ಪೋಸ್ ನೀಡಿದರು. ನಂತರ, ಪ್ರಧಾನಿ ಮೋದಿ ಅವರು ಚಂದ್ರನ ದಕ್ಷಿಣ ಧ್ರುವಕ್ಕೆ ಇಸ್ರೋದ 40 ದಿನಗಳ ಪ್ರಯಾಣದ ಬ್ರೀಫಿಂಗ್ ಅನ್ನು ಎಸ್ ಸೋಮನಾಥ್, ಎಂ ಎಂಜಾ ಅವರಿಂದ ಪಡೆದರು.

Prime Minister Narendra Modi early on Saturday announced that the point at which Chandrayaan-3 lander Vikram soft-landed will be named ‘Shiv Shakti’, while the point Chandrayaan-2 lander impacted will be called ‘Tiranga'.