ಬ್ರೇಕಿಂಗ್ ನ್ಯೂಸ್
26-08-23 09:33 pm Mangaluru Correspondent ಕರ್ನಾಟಕ
ಮಂಗಳೂರು, ಆಗಸ್ಟ್ 26: ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ಕೋರ್ಟಿನಲ್ಲಿ ಕ್ಲೀಯರ್ ಆದಕೂಡಲೇ ಗ್ರಾಪಂ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸುತ್ತೇವೆ. ರಾಜ್ಯದಲ್ಲಿ ನಾವು 20ಕ್ಕಿಂತಲೂ ಹೆಚ್ಚು ಸಂಸದ ಸ್ಥಾನಗಳನ್ನು ಗೆಲ್ಲುತ್ತೇವೆ. ಅದಕ್ಕಾಗಿ ನಾವು ಈಗಾಗಲೇ ತಯಾರಿ ಆರಂಭಿಸಿದ್ದೇವೆ. ಪ್ರತಿ ಕ್ಷೇತ್ರಕ್ಕೆ ಒಬ್ಬರು ಸಚಿವ ಮತ್ತು ಇನ್ನೊಬ್ಬ ಹಿರಿಯ ರಾಜ್ಯ ಮುಖಂಡರನ್ನು ವೀಕ್ಷಕರಾಗಿ ನೇಮಕ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್ ಸರಕಾರದ ಪರವಾಗಿ ಜನಾಭಿಪ್ರಾಯ ಬದಲಾಗಿದೆ. ಮಹಿಳೆಯರು ವಿಶೇಷವಾಗಿ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಮೂರು ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದ್ದು, ಇದೇ 30ರಂದು ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುತ್ತೇವೆ. ಡಿಸೆಂಬರ್ ನಲ್ಲಿ ಯುವನಿಧಿ ಗ್ಯಾರಂಟಿ ಜಾರಿಗೊಳಿಸುತ್ತೇವೆ. ಇದರ ಆಧಾರದಲ್ಲಿಯೇ ನಾವು ಲೋಕಸಭೆ ಚುನಾವಣೆ ಗೆಲ್ಲುತ್ತೇವೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಎರಡು ಕ್ಷೇತ್ರಗಳನ್ನೂ ಗೆಲ್ಲಲು ತಂತ್ರಗಾರಿಕೆ ನಡೆಸಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದಾಗಿ ಬಿಜೆಪಿ ಮತ್ತೆ ಸೋಲ್ತೀವಿ ಅಂತ ಹೆದರಿಕೆಯಾಗಿದೆ. ಪರಿಷತ್ ಮತ್ತು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರನ್ನೂ ಮಾಡಿಲ್ಲ. ಪ್ರತಿಪಕ್ಷ ನಾಯಕ ಅಂದ್ರೆ ಶ್ಯಾಡೋ ಸಿಎಂ ಆಗಿದ್ದರೂ ಅದನ್ನೇ ಫಿಲ್ ಮಾಡಿಲ್ಲದಿರುವುದು ದುರ್ದೈವದ ಸಂಗತಿ ಎಂದ ಸಲೀಂ ಅಹ್ಮದ್, ಬಿಜೆಪಿಗೆ ಮತ್ತೆ ಜನರ ಬಳಿಗೆ ಹೋಗಲು ಯಾವ ನೈತಿಕತೆ ಇದೆ. ಯಾವ ಘನಕಾರ್ಯ ಮಾಡಿದ್ದಾರೆಂದು ಜನ ಇವರಿಗೆ ಓಟು ಹಾಕಬೇಕು. ಸುಳ್ಳಿಗೆ ಆಸ್ಕರ್ ನೀಡುವುದಾದರೆ ಮೋದಿಗೆ ಸಲ್ಲಬೇಕು. ಇವರು ಜನರ ಪರವಾಗಿ ಯಾವ ಕಾರ್ಯಕ್ರಮ ತಂದಿದ್ದಾರೆ. ಬೆಲೆಯೇರಿಕೆ ಮಾಡಿ ಜನರನ್ನು ಕಷ್ಟಕ್ಕೆ ದೂಡಿದ್ದಕ್ಕೆ ಓಟು ಹಾಕಬೇಕೇ.. ಮೋದಿಯವರೇ ಕೇವಲ ಮನ್ ಕೀ ಬಾತ್ ನಡೆಯಲ್ಲ. ಬಡವರಿಗೆ ಕೊಡುವ ಅಕ್ಕಿಯನ್ನೇ ಕೊಡದೆ ವಂಚಿಸಿದವರು ಇವರು. ಬಿಜೆಪಿಯವರನ್ನು ಆರು ತಿಂಗಳಲ್ಲಿ ಬೆತ್ತಲೆ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಪ್ರಶ್ನೆಗೆ, ನಾವು 135 ಸೀಟಿನ ಪೂರ್ಣ ಬಲ ಹೊಂದಿದ್ದೇವೆ. ಯಾವುದೇ ಆಪರೇಶನ್ ಮಾಡುವ ಅಗತ್ಯ ಇಲ್ಲ. ಅವರಾಗಿಯೇ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡು ಬಂದರೆ ನಾವು ಇಲ್ಲ ಎನ್ನುವುದಿಲ್ಲ. ಕೆಲವು ಶಾಸಕರು, ಮಾಜಿ ಶಾಸಕರು ಸಿಎಂ ಮತ್ತು ಡಿಸಿಎಂ ಜೊತೆಗೆ ಮಾತನಾಡಿದ್ದಾರೆ. ಅವರ ಪಕ್ಷ ಸೇರ್ಪಡೆ ಬಗ್ಗೆ ಖರ್ಗೆ ಸಾಹೇಬ್ರು ಮತ್ತು ಡಿಕೆ ಶಿವಕುಮಾರ್ ನಿರ್ಧರಿಸಲಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಐವಾನ್ ಲೋಬೊ, ಶಾಹುಲ್ ಹಮೀದ್ ಮತ್ತಿತರರು ಇದ್ದರು.
The Congress will expose maladministration of the Union government and also put forth before people Congress government’s successful implementation of the five guarantees to win 20 seats in the forthcoming Lok Sabha elections in State, said Karnataka Pradesh Congress Committee working president Saleem Ahmed here on Saturday, August 26.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 10:58 pm
Mangalore Correspondent
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm