ಬ್ರೇಕಿಂಗ್ ನ್ಯೂಸ್
27-08-23 07:39 pm HK News Desk ಕರ್ನಾಟಕ
ಕಾರವಾರ, ಆಗಸ್ಟ್ 27: ನಗರದ ಹರಿದೇವ ನಗರದಲ್ಲಿ 3 ವರ್ಷದ ಹೆಣ್ಣು ಮಗುವೊಂದು ಶನಿವಾರ ಗಣಪತಿ ಮುಳುಗಿಸುವ ಆಟವಾಡಲು ಹೋಗಿ ಮನೆ ಬಳಿ ಇದ್ದ ಸರಕಾರಿ ಬಾವಿಗೆ ಬಿದ್ದು ಮೃತಪಟ್ಟಿದೆ.
ಇಲ್ಲಿನ ಸೂರಜ ಬಂಟ್ ಎನ್ನುವವರ ಮಗಳು ಸ್ತುತಿ ಮೃತ ದುರ್ದೈವಿ. ಶನಿವಾರ ಬೆಳಗ್ಗೆ ಮಣ್ಣನ್ನು ತೆಗೆದುಕೊಂಡು ಗಣಪತಿ ಮೂರ್ತಿ ತಯಾರಿಸುತ್ತಾ ಆಟವಾಡುತ್ತಿದ್ದಳು. ಕೆಲ ಹೊತ್ತಿನ ಬಳಿಕ ಮಗುವು ಮನೆಯಿಂದ ನೂರು ಮೀಟರ್ ದೂರದಲ್ಲಿರುವ ನಗರಸಭೆಯ ಬಾವಿಗೆ ತೆರಳಿ ಗಣಪತಿಯ ವಿಸರ್ಜನೆಗೆ ಮುಂದಾಗಿದೆ. ಈ ವೇಳೆ ಬಾವಿಯ ಕಟ್ಟೆಯು ಚಿಕ್ಕವಿದ್ದ ಕಾರಣ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ.
ಮಧ್ಯಾಹ್ನ 12 ಗಂಟೆಗೆ ಮಗು ಕಾಣದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ ಕುಟುಂಬಸ್ಥರು, ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ದೂರಿನ ಅನ್ವಯ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರೊಂದಿಗೆ ಸುಮಾರು 2 ತಾಸು ಹುಡುಕಾಡಿದ್ದಾರೆ. ಎಲ್ಲಿಯೂ ಮಗುವಿನ ಸುಳಿವು ಸಿಗದಾದಾಗ ವಾಟ್ಸಪ್‌ಗಳಲ್ಲಿ ಮಗುವಿನ ಫೊಟೊ ಹರಿಬಿಟ್ಟು, ಎಲ್ಲಿಯಾದರೂ ಕಂಡಲ್ಲಿ ಮಾಹಿತಿ ನೀಡಲು ಕೋರಿದ್ದಾರೆ. ಆದರೆ ಸುಮಾರು 2 ರಿಂದ 2.30ರ ಹೊತ್ತಿಗೆ ಸಾರ್ವಜನಿಕ ಬಾವಿಯಲ್ಲೊಮ್ಮೆ ನೋಡೋಣವೆಂದು ಸ್ಥಳೀಯರೊಬ್ಬರು ಇಳಿದಾಗ ಆಳದಲ್ಲಿ ಮಗುವಿನ ಮೃತದೇಹ ದೊರೆತಿದೆ.
ಮಗುವಿನ ತಾಯಿಗೆ ಈಗಾಗಲೇ ಒಂದು ವರ್ಷದ ಮತ್ತೊಂದು ಮಗು ಇದೆ. ತಂದೆ ಕೊರಿಯರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಹೋದವರು ವಾಪಸ್ಸು ಬಂದಿರಲಿಲ್ಲ. ತಾಯಿ ಚಿಕ್ಕ ಮಗುವಿಗೆ ಹಾಲುಣಿಸಿ ಮಲಗಿಸಿ ಬರುವಷ್ಟರಲ್ಲಿಈ ಘಟನೆ ನಡೆದಿದೆ. ಪ್ರಕರಣ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಗರಸಭೆಯಿಂದ ಎರಡು ಸಾರ್ವಜನಿಕ ಬಾವಿ ತೆರೆಯಲಾಗಿದೆ. ಒಂದು ಬಾವಿಗೆ ಸ್ಥಳೀಯರ ದೂರಿನ ಮೇರೆಗೆ ಎತ್ತರಕ್ಕೆ ಕಟ್ಟೆ ಕಟ್ಟಿದ್ದು, ಯಾವುದೇ ಅಪಾಯ ಎದುರಾಗದಂತೆ ಮಾಡಲಾಗಿದೆ. ಆದರೆ ಮತ್ತೊಂದು ಬಾವಿಗೆ ಹಾಗೇ ಬಿಡಲಾಗಿದೆ. ಕಟ್ಟೆ ಒಂದು ಅಡಿಯಷ್ಟು ಮಾತ್ರ ಎತ್ತರವಿವೆ. ಬಾವಿಗೆ ಕಟ್ಟೆ ಕಟ್ಟಿ ಗ್ರಿಲ್ಸ್ ಅಳವಡಿಸಲು ಸಿಮೆಂಟ್, ಮರಳನ್ನು ವರ್ಷಗಳ ಹಿಂದೆ ತಂದು ಬಾವಿ ಬಳಿ ಇಡಲಾಗಿದೆ. ಆದರೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ಗ್ರಿಲ್ಸ್ ಅಥವಾ ಕಟ್ಟೆ ನಿರ್ಮಿಸಿಲ್ಲ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
In a tragic incident, a three-year-old child died after accidentally falling into a public well while playing on Saturday afternoon, in Haridev Nagar, Karwar. The deceased child has been identified as Stuti (3) daughter of Sooraj Bunt.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm