ಬ್ರೇಕಿಂಗ್ ನ್ಯೂಸ್
28-08-23 03:52 pm HK News Desk ಕರ್ನಾಟಕ
ಬಾಗಲಕೋಟೆ, ಆಗಸ್ಟ್ 28: ಶಿವಾಜಿ ಮಹಾರಾಜರು ಇಲ್ಲದೆ ಹೋಗಿದ್ದರೆ ನಾವೆಲ್ಲಾ ಹಿಂದು ಆಗಿ ಇರೋಕೆ ಸಾಧ್ಯವೇ ಇರಲಿಲ್ಲ. ನಮ್ದೆಲ್ಲ ಕಟ್ಟಾಗಿ ಹೋಗಿರ್ತಿತ್ತು!, ಹೀಗೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ
ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಪ್ರತಿಮೆ ತೆರವು ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಬಾಯಿ ಮಾತು ಮಾತ್ರವಲ್ಲ, ಕೈಸನ್ನೆಯಲ್ಲೂ ಮಾತನಾಡಿದರು. ಎಲ್ಲ ಕಟ್ ಆಗಿ ಹೋಗಿರ್ತಿದ್ವಿ ಎಂದು ಹೇಳಿ ಕೈ ಸನ್ನೆ ಮೂಲಕ ಪರೋಕ್ಷವಾಗಿ ನಾವೆಲ್ಲ ಮುಸ್ಲಿಂ ಆಗಿರುತ್ತಿದ್ದೆವು ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ʻʻದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಅಪಮಾನ ಮಾಡೋದ್ರಿಂದ ಮುಸಲ್ಮಾನರ ಮತಗಳು ತಮಗೆ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಅವರು. ಕಾಂಗ್ರೆಸ್‌ನವರು ದೇಶ ದ್ರೋಹಿಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಛತ್ರಪತಿ ಶಿವಾಜಿ ಅವರ ಪ್ರತಿಮೆ ಸ್ಥಾಪನೆ ಮಾಡಿ ಎರಡು ದಿನ ಆದ ಬಳಿಕ ಯಾಕೆ ತೆರವು ಮಾಡಿದರು. ಶಿವಾಜಿ ಪ್ರತಿಮೆ ತೆರವು ಮಾಡುವಂತೆ ಒಬ್ಬ ಸಚಿವರು ಡಿಸಿ ಮತ್ತು ಎಸ್‌ಪಿಗೆ ಧಮಕಿ ಹಾಕಿದರು ಎಂದು ಹೇಳಿದರು.
ʻʻಶಿವಾಜಿ ಪ್ರತಿಮೆ ತೆರವು ಕೇವಲ ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ. ಇದು ಈಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಇದರ ಫಲವನ್ನು ಮುಂದೆ ಅನುಭವಿಸ್ತಾರೆ ಅನುಭವಿಸಲಿʼʼ ಎಂದು ಹೇಳುತ್ತಾ, ʻʻಶಿವಾಜಿ ಮಹಾರಾಜರು ಇರಲಿಲ್ಲ ಅಂದ್ರೆ ಇಂದು ನಾವು-ನೀವು ಇರುತ್ತಿರಲಿಲ್ಲ. ನಾನು ಸೀರಿಯಸ್ ಆಗಿ ಹೇಳ್ತೀನಿ, ಎಲ್ಲಾ ಕಟ್ ಆಗಿ ಹೋಗ್ತಿತ್ತುʼʼ ಎಂದು ಹೇಳಿದರು.
ನಾನು "ಕಟ್ ಆಗ್ತಿತ್ತು" ಹೇಳಿಕೆ ನೀಡಿದ್ದಕ್ಕೆ ಯಾರಾದರೂ ಕೇಸು ಹಾಕುವುದಿದ್ದರೆ ಹಾಕಲಿ ಎಂದೂ ಈಶ್ವರಪ್ಪ ಸವಾಲು ಹಾಕಿದರು. ಶಿವಾಜಿ ಮಹಾರಾಜರು ದೇಶದಲ್ಲಿದ್ದಿದ್ದಕ್ಕೇ ನಾವೆಲ್ಲ ಹಿಂದೂಗಳಾಗಿ ಉಳಿದಿದ್ದೇವೆ ಎಂದು ಮತ್ತೊಮ್ಮೆ ಹೇಳಿದರು.
Without Shivaji, Hindus would have been converted to Islam’: KS Eshwarappa sparks controversy in Bagalkot. If there was no Chhatrapati Shivaji Maharaj, it would not have been possible for me and you to remain as Hindus. Even we would have been cut (circumcised). I am talking seriously and I am not scared of cases.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm