ಬ್ರೇಕಿಂಗ್ ನ್ಯೂಸ್
30-08-23 10:59 am HK News Desk ಕರ್ನಾಟಕ
ಹೊಸಪೇಟೆ, ಆಗಸ್ಟ್ ,30: ಐತಿಹಾಸಿಕ ಕ್ಷೇತ್ರ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣು ಮುಕ್ಕ ಹಾವು ಪತ್ತೆಯಾಗಿದ್ದು, ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಗೊಂದಲಕ್ಕೀಡಾಗಿದ್ದರು.
ಹಾವು ಪತ್ತೆಯಾದ ವಿಷಯ ತಿಳಿದ ಕಮಲಾಪುರದ ಹಾವು(ಉರಗ) ಮತ್ತು ವನ್ಯಜೀವಿ ರಕ್ಷಕ ಮಲ್ಲಿಕಾರ್ಜುನ ಜಿ.ಬಿ ಅವರು ಸ್ಥಳಕ್ಕೆ ಬಂದು ಈ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ ಎಂದು ಅನಿಮಲ್ ಕನ್ಸರ್ವೇಷನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಾವು(ಉರಗ) ಮತ್ತು ವನ್ಯ ಜೀವಿ ರಕ್ಷಕ ವೇಣುಗೋಪಾಲ್ ನಾಯ್ಡು ತಿಳಿಸಿದರು.
ಇದು ಅನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ದ ಹಾವು ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು (albino Common Sand Boa) ಕಂಡುಬಂದಿದೆ. ಈ ಹಾವುಗಳು ವಿಷಕಾರಿಯಲ್ಲದ ಹಾವಾಗಿದೆ.
ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಗಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು (Common Sand Boa), ಕೆಂಪು ಮಣ್ಣು ಮುಕ್ಕ ಹಾವು (Red Sand Boa), ಹಾಗೂ ವೇಟೆಕಾರ್ ಮಣ್ಣು ಮುಕ್ಕ (Whitaker’s Boa) ಹಾವುಗಳಿವೆ ಎಂದು ಉರಗ ರಕ್ಷಕ ಮಲ್ಲಿಕಾರ್ಜುನ್ ಅಭಿಪ್ರಾಯವಾಗಿದೆ.
A rare common white coloured mud mukka snake has been found in the premises of Vijaya Vittala Temple in Hampi. Reptile and wildlife conservationist Mallikarjuna G.B. The snake was rescued and released to a safe place.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm