ಸೂರ್ಯನಲ್ಲಿ ಹೊರಡಲಿದೆ ಆದಿತ್ಯ ಗಗನ ನೌಕೆ ; ಇಸ್ರೋ ಯೋಜನೆ ಬಗ್ಗೆ ವಿಶ್ವಾದ್ಯಂತ ಕುತೂಹಲ, ಕ್ಷಣಗಣನೆ, ಚಂದ್ರನ ಬಳಿಕ ರವಿಯತ್ತ ದೃಷ್ಟಿ ! 

01-09-23 11:06 pm       Bangalore Correspondent   ಕರ್ನಾಟಕ

ಚಂದ್ರಯಾನ ಯಶಸ್ಸಿನ ನಂತರ ಭಾರತದ ಇಸ್ರೋ ಸೂರ್ಯನತ್ತ ದೃಷ್ಟಿ ನೆಟ್ಟಿದೆ. ಆದಿತ್ಯ ಎಲ್-1 ಗಗನ ನೌಕೆಯನ್ನು ಸೂರ್ಯನ ಬಳಿಗೆ ಕಳಿಸಲು ಸಿದ್ಧತೆ ನಡೆಸಿದೆ. ಶನಿವಾರ ಬೆಳಗ್ಗೆ 11:50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ. 

ಬೆಂಗಳೂರು, ಸೆ.1: ಚಂದ್ರಯಾನ ಯಶಸ್ಸಿನ ನಂತರ ಭಾರತದ ಇಸ್ರೋ ಸೂರ್ಯನತ್ತ ದೃಷ್ಟಿ ನೆಟ್ಟಿದೆ. ಆದಿತ್ಯ ಎಲ್-1 ಗಗನ ನೌಕೆಯನ್ನು ಸೂರ್ಯನ ಬಳಿಗೆ ಕಳಿಸಲು ಸಿದ್ಧತೆ ನಡೆಸಿದೆ. ಶನಿವಾರ ಬೆಳಗ್ಗೆ 11:50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ. 

ಇಸ್ರೋ ಕೈಗೊಂಡಿರುವ ಈ ಹೊಸಬ ಯೋಜನೆ ಕುರಿತು ಇಡೀ ವಿಶ್ವದಲ್ಲಿ ಕುತೂಹಲ ಹೆಚ್ಚಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಸಾಕಷ್ಟು ಸವಾಲುಗಳ ಮಧ್ಯೆ ಉಡಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ ಎಂದವರು ಹೇಳಿದ್ದಾರೆ.

ಮಾಹಿತಿಗಳ ಪ್ರಕಾರ, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೌರ ಕರೋನಗಳ (ಸೂರ್ಯನ ಹೊರಗಿನ ಪದರಗಳು) ಅಧ್ಯಯನಕ್ಕಾಗಿ ಕೈಗೊಳ್ಳಲಾಗಿದೆ. ಸೂರ್ಯನಿಂದ ನಿಗದಿತ ದೂರದಲ್ಲಿರುವ ಲಾಗ್ರಾಂಜಿಯನ್ ಪಾಯಿಂಟ್ ಎನ್ನುವಲ್ಲಿ ನೌಕೆಯನ್ನಿರಿಸಿ ಸೌರ ಮಾರುತಗಳ ಅಧ್ಯಯನದ ಗುರಿ ಇರಿಸಲಾಗಿದೆ. ಈ ಪಾಯಿಂಟ್ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಈ ಜಾಗವನ್ನು ತಲುಪುವುದೇ ಸವಾಲಿನ ಯೋಜನೆಯಾಗಿದೆ.

ಏನಿದು ಎಲ್- 1 ಪಾಯಿಂಟ್?

ಸೂರ್ಯನ ಗುರುತ್ವಾಕರ್ಷಣೆ ಹಾಗೂ ಭೂಮಿಯ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರುವ 5 ಸ್ಥಳಗಳು ಭೂಮಿಯ ಕಕ್ಷೆಯಲ್ಲಿ ಸಿಗುತ್ತವೆ. ಇದನ್ನು ಲಾಗ್ರಾಂಜಿಯನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಪೈಕಿ ಲಾಗ್ರಾಂಜಿಯನ್ ಪಾಯಿಂಟ್ 1ರಲ್ಲಿ ಭಾರತದ ಸೌರ ಅಧ್ಯಯನ ಉಪಗ್ರಹ ನಿಲ್ಲಲಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ವಸ್ತುಗಳು ಈ ಸ್ಥಳದಲ್ಲಿಯೇ ಇರುವಂತೆ ಮಾಡಲಾಗುತ್ತದೆ.

India’s space agency Isro is set to launch a new satellite this week aimed at studying the Sun, just days after the country successfully landed a spacecraft on the Moon as part of its Chandrayaan-3 mission.  The country’s ambitious mission of landing a spacecraft on the Moon’s south pole – a feat achieved by no other country – will now be followed just days later by the launch of the Aditya-L1 satellite.